ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karantara Suliyalli Book: ʼಕಾರಂತರ ಸುಳಿಯಲ್ಲಿʼ ಪುಸ್ತಕ ಬಿಡುಗಡೆ; ಶಿವರಾಮ ಕಾರಂತರ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಮಕ್ಕಳು!

ಶಿವರಾಮ ಕಾರಂತರ ಮೂವರು ಮಕ್ಕಳಾದ ಕೆ.ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಬರೆದ Growing Up Karanth ಕೃತಿಯನ್ನು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ʼಕಾರಂತರ ಸುಳಿಯಲ್ಲಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ನೆರವೇರಿತು.

ಬೆಂಗಳೂರಿನಲ್ಲಿ ʼಕಾರಂತರ ಸುಳಿಯಲ್ಲಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಬೆಂಗಳೂರು: ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರ ‘ಕಾರಂತರ ಸುಳಿಯಲ್ಲಿ’ (Karantara Suliyalli Book) ಪುಸ್ತಕ ಭಾನುವಾರ ಬಿಡುಗಡೆಯಾಯಿತು. ಈ ಪುಸ್ತಕವು ಕನ್ನಡದ ಮೇರು ಸಾಹಿತಿ ಡಾ. ಕೋಟ ಶಿವರಾಮ ಕಾರಂತ ಅವರ ಮಕ್ಕಳಾದ ಉಲ್ಲಾಸ್ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್ ಅವರು ಬರೆದ ‘ Growing Up Karanth' ’ಪುಸ್ತಕದ ಕನ್ನಡ ಅವತರಣಿಕೆಯಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ತಂದೆಯವರ ಬಗ್ಗೆ ಮಕ್ಕಳು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.