ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೋಲಾರ ಪಿಡಿಒ ಸಂಘದ ಚುನಾವಣೆ: ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್, ಉಪಾಧ್ಯಕ್ಷೆ ಮಂಗಳಾಂಬ

ಕೋಲಾರ ಪಂಚಾಯತ್‌ ಅಭಿವೃದ್ದಿ ಸಂಘದ (PDO) ಜಿಲ್ಲಾಧ್ಯಕ್ಷರಾಗಿ ಕೆ. ಮಹೇಶ್‌ ಕುಮಾರ್, ಉಪಾಧ್ಯಕ್ಷರಾಗಿ ಎಂ. ಮಂಗಳಾಂಬ ಹಾಗೂ ಖಜಾಂಚಿಯಾಗಿ ಎನ್. ಸಂಪರಾಜ್ ಜಯಭೇರಿ ಭಾರಿಸಿದ್ದಾರೆ. ತಾಲೂಕು ಪಂಚಾಯತ್‌ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ ಕುಮಾರ್ 77 ಮತ, ಎ.ಚಂಗಲರಾಯಗೌಡ 42 ಮತ, ಉಪಾಧ್ಯಕ್ಷ ಸ್ಥಾನದ ಎಂ. ಮಂಗಳಾಂಬ 61 ಮತ, ಎಸ್.ಎನ್. ಮೇಘಾ 55 ಮತ, ಖಜಾಂಚಿ ಸ್ಥಾನದ ಅಭ್ಯರ್ಥಿ ಎನ್. ಸಂಪರಾಜ್ 66 ಮತ, ಆರ್.ಮಂಜುನಾಥ ಪ್ರಸಾದ್ 51 ಮತ ಪಡೆದುಕೊಂಡರು. ಆಯ್ಕೆ ವೇಳೆ ತಾ.ಪಂ. ಇಒ ಮಂಜುನಾಥ್, ಹುತ್ತೂರು ಪಿಡಿಒ ಜಿ. ಲಕ್ಷ್ಮೀ, ಐತರಾಸನಹಳ್ಳಿಯ ಜಿ.ಎಸ್. ಸತೀಶ್ ಕುಮಾರ್, ಕೊಂಡರಾಜನಹಳ್ಳಿಯ ಎಂ. ರಾಮಕೃಷ್ಣ,ಮಾರ್ಜೇನಹಳ್ಳಿಯ ಎಚ್.ಸಿ. ಮಧುಮತಿ, ಮುದುವತ್ತಿಯ ಎಚ್.ಎಂ.ರವಿ, ನರಸಾಪುರ ಎಂ. ಮುನಿರಾಜು, ಶಾಪೂರಿನ ಕೆ.ಸಿ. ಬಾಲಾಜಿ, ವಕ್ಕಲೇರಿಯ ಎ. ಭಾರತಮ್ಮ ಮತ್ತಿತರರು ಉಪಸ್ಥಿತರಿದ್ದರು.

ಕೋಲಾರ, ಮಾ. 26: ಕೋಲಾರ ಪಂಚಾಯತ್‌ ಅಭಿವೃದ್ದಿ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಕೆ. ಮಹೇಶ್‌ ಕುಮಾರ್, ಉಪಾಧ್ಯಕ್ಷರಾಗಿ ಎಂ. ಮಂಗಳಾಂಬ ಹಾಗೂ ಖಜಾಂಚಿಯಾಗಿ ಎನ್. ಸಂಪರಾಜ್ ಆಯ್ಕೆಯಾದರು. ಇನ್ನು ದೊಡ್ಡಹಸಾಳ ಕೆ.ಸಿ. ಮೋಹನ್ ಕುಮಾರ್ (ಉಪಾಧ್ಯಕ್ಷ), ಎನ್. ದೀಪಾ (ರಾಜ್ಯ ಪರಿಷತ್ ಸದಸ್ಯೆ), ಎಸ್. ರಮೇಶ್ (ಸಂಘಟನಾ ಕಾರ್ಯದರ್ಶಿ), ತೊರದೇವಂಡಹಳ್ಳಿ ವಿ. ಸುನೀತಾ (ಮಹಿಳಾ ಸಂಘಟನಾ ಕಾರ್ಯದರ್ಶಿ), ಎನ್. ನಾಗರಾಜ (ಕ್ರೀಡಾ ಕಾರ್ಯದರ್ಶಿ) ಹಾಗೂ ವೈ.ಆರ್. ಭವಾನಿ (ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ) ಅವಿರೋಧ ಆಯ್ಕೆಯಾದರು.

Ramesh Ballamoole

View all posts by this author