ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼರಾಜಕೀಯದಲ್ಲಿ ಪೂರ್ಣ ವಿರಾಮವಿಲ್ಲʼʼ: ನಿವೃತ್ತಿ ಹೊಂದಿದ ರಾಜ್ಯಸಭಾ ಸದಸ್ಯರಿಗೆ ಮೋದಿ ಭಾವುಕ ವಿದಾಯ

PM Narendra Modi: ಬುಧವಾರ ರಾಜ್ಯಸಭೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ನಿವೃತ್ತರಾಗುತ್ತಿರುವ ಸದಸ್ಯರ ಕೊಡುಗೆಗಳನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಸದೀಯ ಸಂಪ್ರದಾಯಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವಲ್ಲಿನ ಅವರ ಪಾತ್ರ ಉಲ್ಲೇಖಿಸಿದರು. ಈ ವೇಳೆ ಅವರು "ರಾಜಕೀಯದಲ್ಲಿ ಪೂರ್ಣ ವಿರಾಮವಿಲ್ಲ" ಎಂದು ಹೇಳಿದರು. ಆ ಮೂಲಕ ಸಾರ್ವಜನಿಕ ಸೇವೆಯ ಔಪಚಾರಿಕ ಅಧಿಕಾರಾವಧಿಯನ್ನು ಮೀರಿ ಮುಂದುವರಿಯುತ್ತದೆ ಎಂದು ಒತ್ತಿ ಹೇಳಿದರು.

ದೆಹಲಿ, ಮಾ. 18: ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ವಿದಾಯ ಹೇಳಿದರು. ನಿವೃತ್ತರಾಗುತ್ತಿರುವ ಸದಸ್ಯರ ಸೇವೆಯನ್ನು ಶ್ಲಾಘಿಸಿ, ಸದನಕ್ಕೆ ಅವರು ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿ ಎಂದು ತಿಳಿಸಿದರು. ಹಿರಿಯ ನಾಯಕರಾದ ಎಚ್‌.ಡಿ. ದೇವೇ ಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್‌ ಪವಾರ್‌ ಅವರ ಸೇವೆಯನ್ನು ಮೋದಿ ಸ್ಮರಿಸಿಕೊಂಡರು. ʼʼಎಲ್ಲ ನೂತನ ಸಂಸದರು ಹಿರಿಯರಿಂದ ನೋಡಿ ಕಲಿಯಬೇಕುʼʼ ಎಂದರು. "ಹರಿವಂಶ್ ಅವರಿಗೆ ಸದನದಲ್ಲಿ ದೀರ್ಘಕಾಲ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿತು. ಅವರು ಲೇಖನಿಯಲ್ಲಿ ನೈಪುಣ್ಯ ಹೊಂದಿರುವವರು ಮಾತ್ರವಲ್ಲದೆ, ಶ್ರಮಶೀಲರೂ ಆಗಿದ್ದಾರೆ. ಅವರು ದೇಶಾದ್ಯಂತ ಪ್ರಯಾಣಿಸಿ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ" ಎಂದು ಹೇಳಿದರು. ಸಂಸತ್ತಿನ ಘನತೆಯನ್ನು ಎತ್ತಿ ಹಿಡಿಯಲು ಮತ್ತು ಅನುಭವಿ ನಾಯಕರಿಂದ ಸ್ಫೂರ್ತಿ ಪಡೆಯಲು ಸದಸ್ಯರನ್ನು ಪ್ರೋತ್ಸಾಹಿಸುವ ಮೂಲಕ ಪ್ರಧಾನಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

Ramesh Ballamoole

View all posts by this author