ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಈ ವಿಚಾರವನ್ನು ಸದನದಲ್ಲಿ ಮಂಗಳವಾರ ಉಲ್ಲೇಖ ಮಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಸದನದಲ್ಲಿ ಅಧಿಕಾರಿಗಳ ಲಂಚಾವತಾರ ತೆರೆದಿಟ್ಟಿದ್ದಾರೆ. ಲಂಚ ಸ್ವೀಕಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಅಶೋಕ್ ಅವರು, ಬಿಬಿಎಂಪಿ ಅಧಿಕಾರಿ ರಮೇಶ್ 30,000ಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಕುರಿತಾಗಿ ಫೋನ್ ಪೇ ನಲ್ಲಿ ಹಣ ವರ್ಗಾವಣೆಯ ದಾಖಲೆ ಬಿಡುಗಡೆ ಮಾಡಿದರು. ಇನ್ನು ಎ ಆರ್ ಓ ನಂಜುಡಪ್ಪ, ಲೇಔಟ್ ಮಾಡುವವರಿಗೆ ಎಲ್ಲಾ ಸೈಟ್‌ಗೆ 30, 40 ಸಾವಿರ ವಸೂಲಿ ಮಾಡಿದ್ದಾನೆ ಎಂದು ಈ ಸಂಬಂಧಿಸಿದಂತೆ ದಾಖಲೆ ಇದೆ ಎಂದು ಪೆನ್ ಡ್ರೈವ್ ಪ್ರದರ್ಶನ ಮಾಡಿದರು.