ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೈಲ ಕೊರತೆ ವದಂತಿ; ಬೆಳಗಾವಿಯಲ್ಲಿ ನೀರು ತುಂಬುವ ಬ್ಯಾರೆಲ್‌ನೊಂದಿಗೆ ಪೆಟ್ರೋಲ್‌ ಬಂಕ್‌ಗೆ ಲಗ್ಗೆ ಇಟ್ಟ ಗ್ರಾಹಕರು

Belagavi News: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಸಹಜವಾಗಿ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ವಾಣಿಜ್ಯ ಸಿಲಿಂಡ್‌ರ್ ಪೂರೈಕೆ ಸ್ಥಗಿತಗೊಂಡು ಜನರು ಆತಂಕಗೊಂಡಿದ್ದಾರೆ. ಅದರ ಮಧ್ಯೆ ತೈಲ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ವದಂತಿ ಹಬ್ಬಿದ್ದರಿಂದ ಸೋಮವಾರ (ಮಾರ್ಚ್‌ 23) ರಾತ್ರೋರಾತ್ರಿ ಬೆಳಗಾವಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಿಗೆ ಜನರು ಮುಗಿಬಿದ್ದರು. ಹಲವರು ನೀರು ತುಂಬುವ ಬ್ಯಾರೆಲ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ತುಂಬಲು ಮುಂದಾದರು.

ಬೆಳಗಾವಿಯ ಪೆಟ್ರೋಲ್‌ ಬಂಕ್‌

ಬೆಳಗಾವಿ, ಮಾ. 24: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮುಂದುವರಿದಿದೆ. ಕೇಂದ್ರ ದೇಶದಲ್ಲಿ ತೈಲಕ್ಕೆ ಯಾವುದೇ ಕೊರತೆ ಇಲ್ಲ ಎಂದು ಪದೆ ಪದೇ ಹೇಳುತ್ತಿದ್ದರೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ಬೆಳಗಾವಿಯಲ್ಲಿ ತೈಲ ಕೊರತೆಯಾಗಿದೆ ಎನ್ನುವ ವದಂತಿ ಹರಡಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು (Belagavi News). ಕೆಲವರು ಮನೆಯಲ್ಲಿರುವ ನೀರು ಸಂಗ್ರಹಿಸುವ ಬ್ಯಾರೆಲ್‌, ಕ್ಯಾನ್‌ಗಳನ್ನು ತಂದು ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ನಗರದ ಆಜಂನಗರ, ಬಾಕ್ಸೆಟ್ ರಸ್ತೆ, ವಿನಾಯಕ ನಗರ, ಮಹಾಂತೇಶ ನಗರ, ಶ್ರೀನಗರ ಸೇರಿ ಬಹುತೇಕ ಪ್ರದೇಶಗಳಲ್ಲಿ ಗ್ರಾಹಕರು ಸಾಲು ಗಟ್ಟಿ ಪೆಟ್ರೋಲ್ ಮತ್ತು ಡಿಸೇಲ್‌ ಖರೀದಿಸಲು ಹರಸಾಹಸ ಪಟ್ಟರು. ಪೆಟ್ರೋಲ್ ಮತ್ತು ಡಿಸೇಲ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬಂಕ್ ಮಾಲಕರು ಹೇಳಿದರೂ ಯಾರೂ ಪರಿಸ್ಥಿತಿಯಲ್ಲಿ ಇಲ್ಲ.

Ramesh Ballamoole

View all posts by this author