ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಂಚ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಗ್ರಾಮಲೆಕ್ಕಿಗನಿಗೆ ಬಡ್ತಿ; ಕ್ರಮಕ್ಕೆ ಆಗ್ರಹ

ದೀರ್ಘ ಕಾಲದಿಂದ ವಿಚಾರಣೆ ನಡೆಯದೆ ಆರೋಪಿಗೆ ರೆವಿನ್ಯೂ ಇನ್ಸ್ಪೆಕ್ಟರ್ ಆಗಿ ಪ್ರಮೋಷನ್ ಭಾಗ್ಯ ಸಹ ದೊರೆತಿದೆ. ಆರೋಪಿ ಕಾನೂನು ಹಿಡಿತದಿಂದ ನುಣುಚಿಕೊಳ್ಳಲು ವಕೀಲರು ಮತ್ತು ಸಿಬ್ಬಂದಿ ಅವಕಾಶ ಮಾಡಿಕೊಟ್ಟಿದ್ದಾರೆ. ತಕ್ಷಣ ಅರುಣ್ ಕುಮಾರ್ ಅವರನ್ನು ಮಾಲೂರು ಕಸಬಾ ರೆವಿನ್ಯೂ ಇನ್ಸಪೆಕ್ಟರ್ ಹುದ್ದೆಯೆಂದ ಬದಲಾಯಿಸಿ ಬೇರೆಡೆಗೆ ಹಾಕಬೇಕೆಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ

ಕೋಲಾರ: ಲೋಕಾಯುಕ್ತ ಬಲೆಗೆ ಹಣದ ಸಮೇತ ಸಿಲುಕಿದ ಗ್ರಾಮಲೆಕ್ಕಿಗ ಅರುಣ್ ಕುಮಾರ್ ಕೇಸ್ 11 ವರ್ಷ ಆದರೂ ಹೈಕೋರ್ಟ್‌ನಲ್ಲಿ ಪಟ್ಟಿ ಆಗದೆ, ಆರೋಪಿಗೆ ಪ್ರಮೋಷನ್ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಳಬಾಗಲು ತಾಲೂಕಿನ ಯಳಗೊಂಡಹಳ್ಳಿ ಗ್ರಾಮಲೆಕ್ಕಿಗ ಅರುಣ್ ಕುಮಾರ್ ಅವರು ಬಿಎಂಟಿಸಿ ಚಾಲಕ ಮಿಣಜೇನಹಳ್ಳಿ ವೆಂಕಟೇಶ್ ಅವರಿಂದ ಸಣ್ಣ ಹಿಡುವಳಿ ಪ್ರಮಾಣಪತ್ರಕ್ಕಾಗಿ ಜ.1 2010 ರಂದು 1800 ರೂ. ಲಂಚ ಮುಳಬಾಗಲಿನ ಮುತ್ಯಾಲಪೇಟೆಯಲ್ಲಿ ಪಡೆದುಕೊಳ್ಳುವಾಗ ಲೋಕಾ ಪೊಲೀಸರು ಬಂಧಿಸಿದ್ದರು. ಇದೀಗ ಮಾಲೂರು ಕಸಬಾ ರೆವಿನ್ಯೂ ಇನ್ಸ್ಪೆಕ್ಟರ್ ಆಗಿ ಅರುಣ್ ಕುಮಾರ್ ಪ್ರಮೋಷನ್ ಪಡೆದಿದ್ದು, ಈ ಬಗ್ಗೆ ತನಿಖೆ ಆರಂಭಿಸಿ ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಒತ್ತಾಯಿಸಿದ್ದಾರೆ.