ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹನಿಮೂನ್‌ಗೆ ಹೋಗಿದ್ದ ಭಾರತೀಯ ದಂಪತಿ ಮೇಲೆ ಚೀನಾ ವ್ಯಕ್ತಿಯಿಂದ ಮನಸೋಇಚ್ಛೆ ಹಲ್ಲೆ

ಸ್ವಿಟ್ಜರ್‌ಲ್ಯಾಂಡ್‌ನ ಹೋಟೆಲ್‌ನಲ್ಲಿ ಚೀನಾದ ವ್ಯಕ್ತಿಯೊಬ್ಬ ಭಾರತೀಯ ಮೂಲದ ಮಹಿಳೆಗೆ ಬರ್ಬರವಾಗಿ ಥಳಿಸಿದ ಘಟನೆ ನಡೆದಿದೆ. ಮಹಿಳೆಯನ್ನು ನಿಕತಾ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಪತಿ ಕರಣ್‌ ಜೊತೆ ಹನಿಮೂನ್‌ಗೆ ತೆರಳಿದ್ದಳು. ಚೀನೀ ಕುಟುಂಬವೊಂದು ನಡೆಸುತ್ತಿರುವ ಹೋಟೆಲ್, ಈ ಆರೋಪಗಳನ್ನು ನಿರಾಕರಿಸಿದೆ.

ಸ್ವಿಟ್ಜರ್‌ಲ್ಯಾಂಡ್‌ನ ಹೋಟೆಲ್‌ನಲ್ಲಿ ಚೀನಾದ ವ್ಯಕ್ತಿಯೊಬ್ಬ ಭಾರತೀಯ ಮೂಲದ ಮಹಿಳೆಗೆ ಬರ್ಬರವಾಗಿ ಥಳಿಸಿದ ಘಟನೆ ನಡೆದಿದೆ. ಮಹಿಳೆಯನ್ನು ನಿಕತಾ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಪತಿ ಕರಣ್‌ ಜೊತೆ ಹನಿಮೂನ್‌ಗೆ ತೆರಳಿದ್ದಳು. ಚೀನಾ ಮೂಲದ ಕುಟುಂಬವನ್ನು ನಡೆಸುತ್ತಿದ್ದ ಹೊಟೇಲ್‌ನಲ್ಲಿ ದಂಪತಿ ತಂಗಿತ್ತು. ಅದೇ ವೇಳೆ ತನ್ನ ಮೇಲೆ ಹೋಟೆಲ್‌ನಲ್ಲಿ ಚೀನಾದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾರೆ ಎಂದು ನಿಕತಾ ಆರೋಪಿಸಿದ್ದಾರೆ. ಆದರೆ ಹೊಟೆಲ್‌ ಈ ಹೇಳಿಕೆಯನ್ನು ನಿರಾಕರಿಸಿದೆ.

ಪ್ರಸ್ತುತ ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ದಂಪತಿಗಳು, ಈ ದಾಳಿಯು ತಮಗೆ ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆ ಮತ್ತು ತೀವ್ರ ಆತಂಕದ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ದಾಳಿಯಿಂದಾಗಿ ತನ್ನ‌ ಹಲ್ಲುಗಳು ಉದುರಿವೆ ಎಂದು ಮಹಿಳೆ ಆರೋಪಿಸಿದ್ದಾಳೆ. ಚೀನೀ ಕುಟುಂಬವೊಂದು ನಡೆಸುತ್ತಿರುವ ಹೋಟೆಲ್, ಈ ಆರೋಪಗಳನ್ನು ನಿರಾಕರಿಸಿದ್ದು, ಅವುಗಳನ್ನು ಸುಳ್ಳು ಎಂದು ಕರೆದಿದೆ. ಮೂಲತಃ ಮುಂಬೈನವರಾದ ಈ ದಂಪತಿ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಜೂನ್ 19 ರಂದು ಸ್ವಿಟ್ಜರ್‌ಲ್ಯಾಂಡ್‌ನ ಸೀಹೋಟೆಲ್ ಶ್ವೆರ್ಟ್‌ನಲ್ಲಿ ಚೆಕ್ ಇನ್ ಮಾಡಿದಾಗ, ಕೊಠಡಿ ತಲುಪಿದಾಗ ಫ್ಯಾನ್‌ಗಳು ಸಿಗಲಿಲ್ಲ ಎಂದು ಹೇಳಿದರು. ಆದ್ದರಿಂದ ಫ್ಯಾನ್‌ ಸೌಲಭ್ಯವನ್ನು ಕೇಳಿದ್ದರು.

ಆದರೆ ಇವರ ಮನವಿಗೆ ಸ್ಪಂದಿಸದ ಸಿಬ್ಬಂದಿ ಫ್ಯಾನ್‌ ನೀಡಿರಲಿಲ್ಲ. ಹೀಗಾಗಿ ಹತ್ತಿರದ ಅಂಗಡಿಯಿಂದ ಫ್ಯಾನ್‌ ಒಂದನ್ನು ಕೊಂಡು ಬಂದಿದ್ದರು. ರೂಮ್ ಸರ್ವಿಸ್ ಸಿಬ್ಬಂದಿ ತಮ್ಮ ಕೊಠಡಿಯನ್ನು ಸ್ವಚ್ಛಗೊಳಿಸಲು ಬಂದಾಗ, ಹೋಟೆಲ್ ಒದಗಿಸಿದ ಫ್ಯಾನ್ ಅನ್ನು ದಂಪತಿಗೆ ತಿಳಿಸದೆ ವಾಪಸ್ ತೆಗೆದುಕೊಂಡರು ಎಂದು ದಂಪತಿಗಳು ಹೇಳಿಕೊಂಡಿದ್ದಾರೆ. ರಾತ್ರಿಯಲ್ಲಿ ಅವರು ಅದರ ಬಗ್ಗೆ ಮಾತನಾಡಲು ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆಗ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಅವರು ಚೆಕ್ ಔಟ್ ಮಾಡಲು ಹೊರಟಿದ್ದ ದಿನದಂದು ಸಿಬ್ಬಂದಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Rukmini Vasanth: ಕೇರಳದಲ್ಲೂ ಕನ್ನಡ ಮಾತನಾಡಿದ ರುಕ್ಮಿಣಿ ವಸಂತ್‌; ವಿಡಿಯೊ ವೈರಲ್‌

ಹೋಟೆಲ್‌ನ ಆರೋಪಗಳನ್ನು ನಿರಾಕರಿಸಿದ ದಂಪತಿಗಳು, ಕಾನೂನು ಮಾರ್ಗಗಳನ್ನು ಅನುಸರಿಸಿದ್ದೇವೆ ಎಂದು ಹೇಳಿದರು. ವೈದ್ಯಕೀಯ ಚಿಕಿತ್ಸೆಗೆ ಹಣ ಪಾವತಿಸಬೇಕಾಯಿತು ಮತ್ತು 13 ದಿನಗಳ ಪ್ರವಾಸವನ್ನು ಮೊಟಕುಗೊಳಿಸಿದ ನಂತರ ಹಣವನ್ನು ಕಳೆದುಕೊಂಡೆವು ಎಂದು ಅವರು ಹೇಳಿದ್ದಾರೆ.