ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Union Bank Recruitment 2025: ಯೂನಿಯನ್‌ ಬ್ಯಾಂಕ್‌ನಲ್ಲಿದೆ 250 ವೆಲ್ತ್ ಮ್ಯಾನೇಜರ್ ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

Job Guide: ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ದೇಶಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿಯಿರುವ 250 ವೆಲ್ತ್ ಮ್ಯಾನೇಜ‌ರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 25ರೊಳಗಾಗಿ ಆನ್‌ಲೈನ್‌ ಮೂಲಕ ತಮ್ಮ ಅರ್ಜಿ ಸಲ್ಲಿಸಬೇಕು.

ಯೂನಿಯನ್‌ ಬ್ಯಾಂಕ್‌ನಲ್ಲಿದೆ 250 ವೆಲ್ತ್ ಮ್ಯಾನೇಜರ್ ಹುದ್ದೆ

ಸಾಂದರ್ಭಿಕ ಚಿತ್ರ

Ramesh B Ramesh B Aug 21, 2025 3:19 PM

ಬೆಂಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ (Union Bank of India) ದೇಶಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿಯಿರುವ 250 ವೆಲ್ತ್ ಮ್ಯಾನೇಜ‌ರ್ (Wealth Manager) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Union Bank Recruitment 2025). ಆಸಕ್ತ ಅಭ್ಯರ್ಥಿಗಳು ಆಗಸ್ಟ್ 25ರೊಳಗಾಗಿ (Job Guide) ಅರ್ಜಿ ಸಲ್ಲಿಸಬೇಕು.

ವರ್ಗವಾರು ಹುದ್ದೆಗಳ ವಿವರ ಹೀಗಿದೆ

ಸಾಮಾನ್ಯ-103,ಎಸ್‌ಸಿ-37,ಎಸ್ಟಿ-18, ಒಬಿಸಿ-67, ಇಡಬ್ಲ್ಯುಎಸ್-25 ಸೇರಿ ಒಟ್ಟು - 250 ಹುದ್ದೆಗಳಿವೆ.

ವಿದ್ಯಾರ್ಹತೆಗಳೇನು?

ಮಾನ್ಯತೆ ಪಡೆದ ವಿವಿಯಿಂದ ಎಂಬಿಎ/ ಎಂಎಂಎಸ್/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಎ/ಪಿಜಿಡಿಎಂ ಕೋರ್ಸ್‌ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕಾರ್ಯನಿರ್ವಹಿಸಿದ ಅನುಭವವಿರಬೇಕು.

ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2025ರ ಆಗಸ್ಟ್‌ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 25 ಹಾಗೂ ಗರಿಷ್ಠ 35 ವರ್ಷಗಳೊಳಗಿರಬೇಕು.

ಅರ್ಜಿ ಸಲ್ಲಿಕೆ ವಿಧಾನ ಹೀಗೆ?

ಆಸಕ್ತ ಅಭ್ಯರ್ಥಿಗಳು ibps.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕವೆಷ್ಟು?

ಸಾಮಾನ್ಯ/ ಹಿಂದುಳಿದ ಅಭ್ಯರ್ಥಿಗಳಿಗೆ 1,180 ಹಾಗೂ ಪ.ಜಾತಿ/ ಪ.ಪಂಗಡ/ಅಂಗವಿಕಲ/ ಮಹಿಳಾ ಅಭ್ಯರ್ಥಿಗಳಿಗೆ 177 ರೂ. ಗಳ ಅರ್ಜಿ ಶುಲ್ಕವಿದೆ.

ಈ ಸುದ್ದಿಯನ್ನೂ ಓದಿ: SBI Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 6,589 ಜೂನಿಯ‌ರ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ; ಹೀಗೆ ಅಪ್ಲೈ ಮಾಡಿ

ವೇತನವೆಷ್ಟು?

ಆಯ್ಕೆಯಾದ ಅರ್ಹರಿಗೆ 64,820- 93,960 ರೂ.ಗಳ ವೇತನಶ್ರೇಣಿ ನೀಡಲಾಗುತ್ತದೆ. ಇದಲ್ಲದೆ ತುಟ್ಟಿ ಭತ್ಯೆ, ವಿಶೇಷ ಭತ್ಯೆ ಮತ್ತು ಇತರ ಭತ್ಯೆಗಳನ್ನು ಬ್ಯಾಂಕಿನಲ್ಲಿ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ನೀಡಲಾಗುತ್ತದೆ.

ನೆನಪಿಡಿ

ಸಂವಹನ ಉದ್ದೇಶಕ್ಕಾಗಿ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ನೋಂದಾಯಿಸಬೇಕು.ಹಾಗೂ ಸಕ್ರಿಯವಾಗಿ ಇರಬೇಕು.

ಆಯ್ಕೆ ಪಕ್ರಿಯೆ ಹೀಗೆ?

ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಶಾರ್ಟ್ ಲಿಸ್ಟ್ ಗೊಳಿಸಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆ ಹೀಗಿರಲಿದೆ?

25 ಪ್ರಶ್ನೆ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್,25 ಪ್ರಶ್ನೆ ರೀಸನಿಂಗ್, ಇಂಗ್ಲಿಷ್ ವಿಷಯಾಧಾರಿತ 25 ಪ್ರಶ್ನೆಗಳಿರಲಿವೆ.ಹುದ್ದೆಗಳಿಗೆ ಸಂಬಂದಿಸಿದ ವಿಷಯಾಧಾರಿತ 75 ಪ್ರಶ್ನೆಗಳಿಗೆ 150 ಅಂಕಗಳು ಇರಲಿವೆ. ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳಿಗೆ 225 ಅಂಕ ಇರಲಿದ್ದು 2.30 ಗಂಟೆಗಳ ಸಮಯ ನಿಗದಿ ಮಾಡಲಾಗಿದೆ.ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಗುಂಪು ಚರ್ಚೆ,ವಯಕ್ತಿಕ ಸಂದರ್ಶನ ಕ್ಕೆ ಹಾಜರಾಗಬೇಕು.ಸಂದರ್ಶನ ಕ್ಕೆ 50 ಅಂಕಗಳು. ಒಂದುವೇಳೆ ಆನ್‌ಲೈನ್ ಪರೀಕ್ಷೆ ನಡೆಸದಿದ್ದರೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ.

ನಿರೀಕ್ಷಣಾ ಅವಧಿ

ಅಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷದ ಪ್ರೋಬೇಶನರಿ ಅವಧಿ ಇರುತ್ತದೆ.

ಅಧಿಸೂಚನೆ ಗೆ ಜಾಲತಾಣ ಕೊಂಡಿ:www.unionbankofindia.co.in