ಲಖನೌ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ದೇವರನ್ನು ಪೂಜಿಸಿದ್ದಾಳೆ. ಬುರ್ಖಾ ಧರಿಸಿದ ಮಹಿಳೆಯು ದೇವಾಲಯದಲ್ಲಿ ಪೂಜೆ ಮಾಡುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಇದು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಿದೆ. ವರದಿಗಳ ಪ್ರಕಾರ, ಮಹಿಳೆಯ ಸಹೋದರ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವನು ಬೇಗನೆ ಹುಷಾರಾಗುವಂತೆ ಶಿವನಲ್ಲಿ ಪ್ರಾರ್ಥಿಸಿದ್ದಳು ಎನ್ನಲಾಗಿದೆ. ಇದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಮಹಿಳೆ ದೇವಾಲಯದ ಮುಂದೆ ನಿಂತು ಪೂಜೆ ಸಲ್ಲಿಸುತ್ತಿರುವ ದೃಶ್ಯ ಸೆರೆಯಾಗಿದೆ. ಆಕೆಯ ಪೂಜೆಗೆ ದೇವಾಲಯದ ಅಧಿಕಾರಿಗಳು ಅಥವಾ ಸ್ಥಳೀಯರು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ವರದಿ ಪ್ರಕಾರ, ಈ ಘಟನೆ ಕಲ್ಯಾಣಪುರದ ಅವಂತಿಪುರಂನಿಂದ ನಡೆದಿದೆ ಎನ್ನಲಾಗಿದೆ. ಮಂಧನಾ ಪ್ರದೇಶದ ನಿವಾಸಿಯಾಗಿರುವ ಆ ಮಹಿಳೆಯ ಸಹೋದರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಆತ ಬೇಗ ಹುಷರಾಗುವಂತೆ ಶಿವನಲ್ಲಿ ಪ್ರಾರ್ಥಿಸಿದ್ದಳಂತೆ. ಈಗ ಆತ ಚೇತರಿಸಿಕೊಂಡಿದ್ದರಿಂದ ಶಿವನ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಪೂಜೆ ಸಲ್ಲಿಸಿದ್ದಾಳೆ ಎನ್ನಲಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಹಿಂದೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಈ ಮಹಿಳೆ ಕಾರ್ಯವು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯನ್ನು ಗಳಿಸಿದೆ. ನೆಟ್ಟಿಗರು ಆಕೆಯ ಪೂಜೆ ಹಾಗೂ ಭಕ್ತಿ ನೋಡಿ ಫುಲ್ ಫಿದಾ ಆಗಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ "ಕಾನ್ಪುರದ ಈ ಮಹಿಳೆ ಒಬ್ಬ ಉತ್ತಮ ಸಹೋದರಿ ಮಾಡುವಂತಹ ಕೆಲಸ ಮಾಡಿದ್ದಾಳೆ. ಅವಳು ತನ್ನ ಸಹೋದರನ ಕಷ್ಟದ ಸಮಯದಲ್ಲಿ ಆತನಿಗಾಗಿ ಶಿವನ ದೇವಾಲಯದಲ್ಲಿ ಪ್ರಾರ್ಥಿಸಿದ್ದಾಳೆ. ಇದು ದ್ರೋಹವಲ್ಲ; ಅದು ಧೈರ್ಯʼʼ ಎಂದು ಹೇಳಿದ್ದಾರೆ.
ಮತ್ತೊಬ್ಬರು "ನಂಬಿಕೆಗೆ ಯಾವುದೇ ಧರ್ಮವಿಲ್ಲ. ಹೃದಯ ಶುದ್ಧವಾಗಿದ್ದಾಗ, ಪ್ರತಿಯೊಂದು ದೇವಾಲಯ, ಪ್ರತಿಯೊಂದು ಪ್ರಾರ್ಥನೆ... ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ. ಇದು ಭಾರತ- ಇಲ್ಲಿ ನಂಬಿಕೆ ಒಂದಾಗುತ್ತದೆ, ವಿಭಜಿಸುವುದಿಲ್ಲ" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹರಿದ್ವಾರದ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಪಟಪಟನೆ ಮಾತನಾಡಿದ ಕೋತಿ; ಕ್ಯೂಟ್ ವಿಡಿಯೊ ನೋಡಿ
ಇತ್ತೀಚೆಗೆ ಭಾರಿ ಮಳೆಯಿಂದಾಗಿ ಮದುವೆ ವಿಧಿವಿಧಾನಗಳಿಗೆ ಅಡ್ಡಿಯುಂಟಾಗಿ ಸಮಸ್ಯೆಯಲ್ಲಿ ಸಿಲುಕಿದ್ದ ಹಿಂದೂ ಕುಟುಂಬದ ನೆರವಿಗೆ ಮುಸ್ಲಿಂ ಕುಟುಂಬವೊಂದು ಬಂದಿದೆ. ಹೀಗಾಗಿ ಒಂದೇ ವೇದಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ದಂಪತಿಯ ಮಕ್ಕಳ ಮದುವೆ ನಡೆದಿದೆ. ಈ ಜೋಡಿ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನವವಿವಾಹಿತ ಹಿಂದೂ ಮತ್ತು ಒಬ್ಬರು ಮುಸ್ಲಿಂ ದಂಪತಿ ಒಂದೇ ವೇದಿಕೆಯಲ್ಲಿ ನಿಂತು ಪೋಟೊ ಶೂಟ್ ಮಾಡಿದ್ದಾರೆ. ಇಲ್ಲಿ ಎರಡು ಕುಟುಂಬಗಳು ಕೇವಲ ಜಾಗವನ್ನು ಹಂಚಿಕೊಳ್ಳಲಿಲ್ಲ. ಅವರ ಭಾವನೆಗಳು, ಊಟವನ್ನು ಮತ್ತು ಸಂತೋಷವನ್ನು ಹಂಚಿಕೊಂಡರು. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.