ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹರಿದ್ವಾರದ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಪಟಪಟನೆ ಮಾತನಾಡಿದ ಕೋತಿ; ಕ್ಯೂಟ್‌ ವಿಡಿಯೊ ನೋಡಿ

ಉತ್ತರಾಖಂಡದ ಹರಿದ್ವಾರದಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದ ಕೋತಿಯೊಂದು ಕ್ಯಾಮೆರಾ ಮುಂದೆ ನಿಂತು ಮನುಷ್ಯನಂತೆ ಮಾತನಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ಲಕ್ಷಾಂತರ ವ್ಯೂವ್ಸ್ ಗಳಿಸಿದೆ. ಸಾವಿರಾರು ಜನರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ಕೋತಿಯ ವಿಡಿಯೊ; ಏನಿದೆ ಇದರಲ್ಲಿ?

Profile pavithra Jun 27, 2025 8:30 PM

ಡೆಹ್ರಾಡೂನ್‌: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕುತೂಹಲವನ್ನು ಮೂಡಿಸುವಂತಹ, ತಮಾಷೆ ವಿಡಿಯೊಗಳು ಹರಿದಾಡುತ್ತಿರುತ್ತವೆ. ಅದೇರೀತಿ ಇದೀಗ ಒಂದು ವಿಶಿಷ್ಟ ಮತ್ತು ಮನರಂಜನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಇದೀಗ ಉತ್ತರಾಖಂಡದ ಹರಿದ್ವಾರದಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ಕೋತಿಯೊಂದು ಕ್ಯಾಮೆರಾ ಮುಂದೆ ನಿಂತು ಮನುಷ್ಯನಂತೆ ಮಾತನಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಈ ವಿಡಿಯೋ ಎಐಯಿಂದ ರಚಿತವಾಗಿದ್ದರೂ ನೆಟ್ಟಿಗರು ಮುಖದಲ್ಲಿ ನಗು ಅರಳಿಸಿದೆ.

ವೈರಲ್ ಆದ ವಿಡಿಯೊದ ಆರಂಭದಲ್ಲಿ, ಕೇದಾರನಾಥಕ್ಕೆ ಪವಿತ್ರ ತೀರ್ಥಯಾತ್ರೆಗೆ ಹೋಗುವ ಉದ್ದೇಶವನ್ನು ಕೋತಿ ವ್ಯಕ್ತಪಡಿಸಿದೆ. "ನಾನು ಹರಿದ್ವಾರಕ್ಕೆ ಸ್ನಾನ ಮಾಡಲು ಬಂದಿದ್ದೇನೆ. ನಂತರ ನಾನು ಕೇದಾರನಾಥ ಬಾಬಾ ಅವರನ್ನು ಭೇಟಿ ಮಾಡುತ್ತೇನೆ" ಎಂದಿದೆ. ನಂತರ ವಿಡಿಯೊದಲ್ಲಿ ಕೋತಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ ಚಾರಣ ಮಾಡುವುದನ್ನು ತೋರಿಸಲಾಗಿದೆ.

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವ್ಯೂವ್ಸ್ ಗಳಿಸಿದೆ. ಸಾವಿರಾರು ಜನರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ಮೆಚ್ಚಿಕೊಂಡಿದ್ದರೆ, ಇಂತಹ ಹೈಪರ್-ರಿಯಲಿಸ್ಟಿಕ್ ಎಐ ವಿಡಿಯೊಗಳು ತಪ್ಪು ಮಾಹಿತಿಯನ್ನು ಹರಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಓಡೋಡಿ ಬಂದ ವ್ಯಕ್ತಿ

ಪ್ರಾಣಿಗಳ ಸಾಹಸ ಕಥೆಯನ್ನು ಎಐ ರಚಿಸಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಮತ್ತೊಂದು ಎಐ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರಲ್ಲಿ ಎಐ ರಚಿಸಿದ ಕೋತಿಯೊಂದು ಹಿಮಾಚಲ ಪ್ರದೇಶದ ಬೆಟ್ಟಗಳಲ್ಲಿ ಚಾರಣ ಮಾಡುವ ಮನುಷ್ಯನಂತೆ ಕಂಡುಬಂದಿತ್ತು. ವಿಡಿಯೊದಲ್ಲಿ ಮಾನವನಂತೆ ಬಟ್ಟೆ ಧರಿಸಿರುವ ಎಐ ಮಂಗವು ಹಿಮಾಚಲ ಬೆಟ್ಟಗಳಲ್ಲಿ ಟ್ರಾವೆಲ್ ವ್ಲಾಗರ್‌ನಂತೆ ನಡೆಯುವುದು, ಮಾತನಾಡುವುದು ಕಂಡುಬಂದಿತ್ತು.