Viral News: ಗರ್ಭ ನಿರೋಧಕ ಕಾಪರ್ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಶಿಶು; ಅಚ್ಚರಿಗೆ ಒಳಗಾದ ವೈದ್ಯರು
ಮಗು ಹುಟ್ಟಬಾರದು ಎಂದು ಅಳವಡಿಸಲಾಗಿದ್ದ ಕಾಪರ್ ಟೀಯನ್ನು ತನ್ನ ಕೈಯಲ್ಲಿ ಹಿಡಿದು ಮಗು ಒಂದು ಜನಿಸಿದೆ. ಇದನ್ನು ಕಂಡ ವೈದ್ಯರು, ನರ್ಸ್ ಗಳು ಆಶ್ಚರ್ಯ ಚಕಿತರಾಗಿದ್ದು, ಮ್ಯಾಥ್ಯೂಸ್ ಗೇಬ್ರಿಯಲ್ ಎಂದು ಆ ಮಗುವಿಗೆ ಹೆಸರಿಡಲಾಗಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಘಟನೆಯ ದೃಶ್ಯ -

ಬ್ರೆಜಿಲ್: ಗರ್ಭಧಾರಣೆ ತಡೆಯಲು ಅನೇಕ ವಿಧಗಳಿವೆ. ಕೆಲವರು ಮಾತ್ರೆಗಳನ್ನು ತೆಗೆದುಕೊಂಡರೆ ಇನ್ನು ಕೆಲವರು ಕಾಂಡೋಮ್‌ಗಳಂತಹ ವಸ್ತುಗಳನ್ನು ಬಳಸುತ್ತಾರೆ. ಅಂತಹದ್ದೇ ಒಂದು ಗರ್ಭ ನಿರೋಧಕ ಕಾಪರ್ ಟಿ (pregnancy despite IUD insertion) ಮಗುವಿನ ಜನನದ ನಂತರ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆಯಿದ್ದರೂ ಎಲ್ಲಿ ಮತ್ತೆ ಗರ್ಭಧರಿಸುತ್ತೀವೋ ಎನ್ನುವ ಆತಂಕ ಮಹಿಳೆಯರಿಗೆ ಸಾಮಾನ್ಯವಾಗಿ ಇರುತ್ತದೆ. ಅದಕ್ಕಾಗಿ ವಿವಿಧ ರೀತಿಯ ಗರ್ಭ ನಿರೋಧಕಗಳನ್ನು ಬಳಸುತ್ತಾರೆ. ಕಾಪರ್ ಟಿ ಕೂಡ ಒಂದು ಗರ್ಭನಿರೋಧಕವಾಗಿದ್ದು ಇದನ್ನು ಗರ್ಭಾಶಯದೊಳಗೆ ಸೇರಿಸಲಾಗುತ್ತದೆ.
ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗರ್ಭ ನಿರೋಧಕ ಅಳವಡಿಕೆಯ ಬಳಿಕವೂ ಮಗುವೊಂದು ಜನಿಸಿದೆ. ಅಚ್ಚರಿ ಎಂದರೆ, ಈ ಮಗು ಹುಟ್ಟುವಾಗ ತಾನು ಹುಟ್ಟುಬಾರದೆಂದು ಅಂದ್ರೆ ಮಗು ಹುಟ್ಟಬಾರದು ಎಂದು ಅಳವಡಿಸಲಾಗಿದ್ದ ಕಾಪರ್ ಟೀಯನ್ನು ತನ್ನ ಕೈಯಲ್ಲಿ ಹಿಡಿದು ಜನಿಸಿದೆ. ಇದನ್ನು ಕಂಡ ವೈದ್ಯರು, ನರ್ಸ್ ಗಳು ಆಶ್ಚರ್ಯ ಚಕಿತರಾಗಿದ್ದು, ಮ್ಯಾಥ್ಯೂಸ್ ಗೇಬ್ರಿಯಲ್ ಎಂದು ಆ ಮಗುವಿಗೆ ಹೆಸರಿಡಲಾಗಿದೆ.
ಈ ಘಟನೆ ಬ್ರೆಜಿಲ್‌ನಲ್ಲಿ ನಡೆದಿದ್ದು, ಹೆರಿಗೆ ಮಾಡಿಸಿದ ವೈದ್ಯರೇ ಈ ವಿಚಿತ್ರ ಬೆಳವಣಿಗೆ ಕಂಡು ಅಚ್ಚರಿಪಟ್ಟಿದ್ದಾರೆ. ಕಾಪರ್ ಟಿ ಬಳಸಿದ ನಂತರವೂ ಮಹಿಳೆಯೋರ್ವರಿಗೆ ಮಗು ಹುಟ್ಟಿರುವುದು ವಿಸ್ಮಯವಾಗಿ ಪರಿಣಮಿಸಿದೆ.
ಈ ಸುದ್ದಿಯನ್ನು ಓದಿ; Lal Bahadur Shastri: ಲಾಲ್ ಬಹದ್ಧೂರ್ ಶಾಸ್ತ್ರಿ ಬಗ್ಗೆ ನಿಮಗೆ ಗೊತ್ತಿರದ ಕುತೂಹಲ ಸಂಗತಿಗಳಿವು
ಹೌದು ಕ್ವಿಡಿ ಎಂಬ ಮಹಿಳೆ ಕಾಪರ್ ಟಿ ಅಳವಡಿಸಿದ ನಂತರವೂ ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಗರ್ಭ ನಿರೋಧಕ ಯಾವಾಗಲೂ ಪರಿಣಾಮಕಾರಿ ಎಂದು ಹೇಳಲಾಗದು. ತಪಾಸಣೆಗೆ ಬಂದಾಗಲೇ ತಿಳಿಯಿತು. ಜೊತೆಗೆ ಈ ಕಾಪರ್ ಟೀ ಗರ್ಭದಲ್ಲೇ ಇದ್ದಿದ್ದರಿಂದ ಹಾಗೇ ಮಗುವೂ ಇದ್ದಿದ್ದರಿಮದ ಅದನ್ನು ತೆಗೆದುಹಾಕುವುದು ತುಂಬಾ ಅಪಾಯಕಾರಿ ಎಂದು ವೈದ್ಯರು ಹೇಳಿದರು ಎಂದಿದ್ದಾರೆ.
ಮಗು ಜನಿಸುವವರೆಗೂ ಈ ಗರ್ಭ ನಿರೋಧಕ ತಾಯಿಯ ಗರ್ಭದಲ್ಲೇ ಇದ್ದರಿಂದ ಕ್ವಿಡಿ ಗರ್ಭಿಣಿಯಾಗಿದ್ದಾಗ ಅಧಿಕ ರಕ್ತಸ್ರಾವ ಸಮಸ್ಯೆಯ ಸೇರಿದಂತೆ ಹಲವು ಆರೋಗ್ಯ ತೊಂದರೆಗಳನ್ನು ಎದುರಿಸಿದ್ದಾರೆ. ಇಷ್ಟಾದರೂ ಅದೃಷ್ಟವಶಾತ್ ಅವರ ಗಂಡು ಮಗು ಬ್ರೆಜಿಲ್‌ನ ನೆರೋಪೊಲಿಸ್‌ನಲ್ಲಿರುವ ಸಗ್ರಾಡೊ ಕೊರಾಕಾವೊ ಡಿ ಜೀಸಸ್ ಆಸ್ಪತ್ರೆಯಲ್ಲಿ ಆರೋಗ್ಯಕರವಾಗಿ ಜನಿಸಿದೆಡೆ.
ಇನ್ನು ಆ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ವಿಡಿ ಅವರಿಗೆ ಹೆರಿಗೆ ಮಾಡಿಸಿದ ಡಾ. ನಟಾಲಿಯಾ ರೊಡ್ರಿಗಸ್ ಅವರು ಐಯುಡಿಯನ್ನು ಹಿಡಿದು ಜನಿಸಿರುವ ಶಿಶುವಿನ ಫೋಟೋವನ್ನು ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋ ಭಾರೀ ಸದ್ದು ಮಾಡುತ್ತಿದೆ. ಇನ್ನು ಈ ಫೋಟೋ ತೆಗೆದ ವೈದ್ಯರು 'ನನ್ನ ಹುಟ್ಟನ್ನು ಯಾರಿಂದ ತಡೆಯಲ್ಲಿ ಸಾಧ್ಯವಿಲ್ಲ, ನಾನು ಕಪ್ ಅನ್ನು ಹಿಡಿದುಕೊಂಡಿದ್ದೇನೆ ನನ್ನನ್ನು ತಡೆಯಲು ಆಗದ ಐಯುಡಿ' ಎಂದು ಫನ್ನಿ ಕ್ಯಾಪ್ಶನ್ ನೀಡಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಇದರ ಹೊರತಾಗಿ ಈ ಹಿಂದೆ ಉತ್ತರ ವಿಯೆಟ್ನಾಂನ ಹೈ ಫೋಂಗ್ ನಗರದ ಹೈ ಫೋಂಗ್ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಕೆಲವು ವರ್ಷಗಳ ಹಿಂದೆ, ಗಂಡು ಮಗುವೊಂದು ತನ್ನ ತಾಯಿಯ ಐಯುಡಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಘಟನೆ ನಡೆದಿತ್ತು. ಮಗು ಜನಿಸಿದ ವೇಳೆಯೇ ಈ ಗರ್ಭನಿರೋಧಕ ಸಾಧನ ಹೊರ ಬಂದಿತ್ತು ಎಂದು ಪ್ರಸೂತಿ ತಜ್ಞ ಟ್ರಾನ್ ವಿಯೆಟ್ ಫುವಾಂಗ್ ಹೇಳಿದ್ದಾರೆ.
ಸದ್ಯ ಈ ಹೆರಿಗೆಯ ನಂತರ, ವೈದ್ಯರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಪರ್ ಟಿ ಹಿಡಿದಿರುವುದು ಇಂಟ್ರೆಸ್ಟಿಂಗ್ ಅನ್ನಿಸಿತು. ಹಾಗಾಗಿ ನಾನು ಒಂದು ಫೋಟೋ ತೆಗೆದುಕೊಂಡೆ. ಅದು ಇಷ್ಟರ ಮಟ್ಟಿಗೆ ವೈರಲ್ ಆಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಫುವಾಂಗ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದರು.
ಐಯುಡಿ ಎನ್ನುವುದು ಗರ್ಭಾಶಯದೊಳಗೆ (ಗರ್ಭಾಶಯ) ಸೇರಿಸಲಾದ ಸಣ್ಣ Tಆಕಾರದ ಗರ್ಭನಿರೋಧಕವಾಗಿದ್ದು ಅದು ತಕ್ಷಣವೇ ಕಾರ್ಯನಿರ್ವಹಿಸುತ್ತದೆ. ಇದು ಗರ್ಭಾಶಯಕ್ಕೆ ತಾಮ್ರವನ್ನು ಬಿಡುಗಡೆ ಮಾಡುವ ಮೂಲಕ ಗರ್ಭಧಾರಣೆಯನ್ನು ತಡೆಯುತ್ತದೆ ಎಂದು ನ್ಯಾಷನಲ್ ಹೆಲ್ತ್ ಸರ್ವಿಸ್ ಹೇಳುತ್ತದೆ. ಐದರಿಂದ ಅಥವಾ 10 ವರ್ಷಗಳವರೆಗೆ ಇದನ್ನು ಗರ್ಭದಲ್ಲಿ ಇಡಲಾಗುತ್ತದೆ.
ಕೆಲವೊಮ್ಮೆ ಎಷ್ಟು ಮುಂಜಾಗೃತೆವಹಿಸಿದರೂ ಕೂಡ ಗರ್ಭಧಾರಣೆಯಾಗುವ ಸಾಧ್ಯತೆ ಇರುತ್ತದೆ. ಅದು ಈ ಕಾಪರ್ ಟಿ ವಿಷಯದಲ್ಲಿಯೂ ಅಷ್ಟೆ. ಅದನ್ನು ಅಳವಡಿಸಿದರೂ ಶೇ. 0.8 ರಷ್ಟು ಗರ್ಭಧರಿಸುವ ಸಾಧ್ಯತೆ ಇರುತ್ತದೆ. ಅಂದರೆ 150 ಜನರಿಗೆ ಕಾಪರ್ ಟಿ ಹಾಕಿದರೆ ಒಬ್ಬರು ಅಥವಾ ಇಬ್ಬರಿಗೆ ಗರ್ಭಧಾರಣೆಯಾಗುವ ಸಾಧ್ಯತೆ ಇರುತ್ತದೆ, ಇದನ್ನು ಫೇಲ್ಯೂಲರ್ ರೇಟ್ ಎನ್ನುತ್ತಾರೆ. ಹೀಗಾಗಿ ಲೈಂಗಿಕ ಕ್ರಿಯೆ ಮಾಡಿದ ದಿನಗಳಲ್ಲಿ ಮುಟ್ಟಿನ ದಿನಗಳು ಮಿಸ್ ಆದರೆ ಅವಶ್ಯವಾಗಿ ಗರ್ಭಧಾರಣೆಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.