ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದುಬೈಯ ಅಧಿಕ ಸಂಬಳಕ್ಕಿಂತ ಭಾರತದ ಕಡಿಮೆ ಸಂಬಳ ಹೆಚ್ಚು ಸಂತೋಷ ತಂದಿದೆ ಎಂದ ಬೆಂಗಳೂರಿನ ಮಹಿಳೆ

Woman Finds Greater Happiness: ವಿದೇಶದಲ್ಲಿ ಹೆಚ್ಚಿನ ಸಂಬಳವಿದ್ದರೂ ಬೆಂಗಳೂರಿನಲ್ಲಿ ಸಾಧಾರಣ ಆದಾಯದಿಂದ ಸಂತೋಷದಿಂದ ಇದ್ದಿದ್ದಾಗಿ ಮಹಿಳೆಯೊಬ್ಬರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಕಡಿಮೆ ಸಂಬಳದೊಂದಿಗೆ ಹೆಚ್ಚು ಸಂತೋಷವಾಗಿದ್ದೆ ಎಂದು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ದುಬೈ: ಗಲ್ಫ್ ದೇಶವಾದ ದುಬೈ (Dubai)ಯಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮ ಜೀವನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಬೆಂಗಳೂರಿನಲ್ಲಿ ತಮ್ಮ ಕಡಿಮೆ ಸಂಬಳದೊಂದಿಗೆ ಹೆಚ್ಚು ಸಂತೋಷವಾಗಿದ್ದೆ ಎಂದು ಹೇಳಿದ್ದಾರೆ. ಸೀಮಾ ಪುರೋಹಿತ್ ಎಂಬುವವರು ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್ (Viral Video) ಆಗಿದೆ. ವಿದೇಶದಲ್ಲಿ ಹೆಚ್ಚಿನ ಸಂಬಳವಿದ್ದರೂ, ಬೆಂಗಳೂರಿನಲ್ಲಿ ಸಾಧಾರಣ ಆದಾಯದಿಂದ ಸಂತೋಷದಿಂದ ಇದ್ದಿದ್ದಾಗಿ ತಿಳಿಸಿದ್ದಾರೆ.

ಉತ್ತಮ ಅವಕಾಶಗಳು ಮತ್ತು ಹೆಚ್ಚಿನ ಸಂಬಳವನ್ನು ಅರಸುತ್ತಾ ಸೀಮಾ ಪುರೋಹಿತ್ ದುಬೈಗೆ ಸ್ಥಳಾಂತರಗೊಂಡರು. ಆದರೆ ಕಾರ್ಪೊರೇಟ್ ಏಣಿಯನ್ನು ಏರುವ ಮತ್ತು ದೊಡ್ಡ ಸಂಬಳವನ್ನು ಗಳಿಸುವ ಓಟವು, ಬೆಂಗಳೂರಿನಲ್ಲಿ ಸಾಧಾರಣ ಮಾಸಿಕ ಸಂಬಳವನ್ನು ಗಳಿಸುವ ಮೂಲಕ ಅನುಭವಿಸಿದ ತೃಪ್ತಿಯ ಭಾವನೆಯನ್ನು ವಿದೇಶವು ನೀಡಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.

ವಿಡಿಯೊದಲ್ಲಿ ಉದ್ಯೋಗಿಗಳು ಉತ್ತಮ ಅವಕಾಶಗಳು ಮತ್ತು ಹೆಚ್ಚಿನ ಸಂಬಳವನ್ನು ಬೆನ್ನಟ್ಟುವ ಕಾರ್ಪೊರೇಟ್ ಜಗತ್ತಿನ ಓಟಕ್ಕೆ ಸೇರಿದ್ದಕ್ಕಾಗಿ ಪುರೋಹಿತ್ ವಿಷಾದಿಸಿದರು. ಬೆಂಗಳೂರಿನಲ್ಲಿ ತನ್ನ ಮೊದಲ ಕೆಲಸದಲ್ಲಿ ತಿಂಗಳಿಗೆ ಕೇವಲ 18,000 ರೂ. ಗಳಿಸುತ್ತಿದೆ. ಇದರಲ್ಲೇ ಸಂತೋಷವಾಗಿದ್ದೆ. ವಿಶ್ವದ ಅತ್ಯಂತ ಶ್ರೀಮಂತ ಹುಡುಗಿ ಎಂದು ಭಾವಿಸುತ್ತಿದ್ದನ್ನು ಆ ಮಹಿಳೆ ನೆನಪಿಸಿಕೊಂಡರು.

ವಿಡಿಯೊ ವೀಕ್ಷಿಸಿ:



ಮಹಿಳೆಯು ತನ್ನ ಸೀಮಿತ ಆದಾಯ ಮತ್ತು ಮಾಸಿಕ ಬಜೆಟ್ ಹೊರತಾಗಿಯೂ, ಬಾಡಿಗೆ ಪಾವತಿಸಲು, ಶಾಪಿಂಗ್, ಕ್ಲಬ್‌ಗಳಲ್ಲಿ ಭಾಗವಹಿಸಲು ಮತ್ತು ತನಗೆ ಬೇಕಾದ ಆಹಾರ ಸೇವಿಸಲು ಮತ್ತು ತಿಂಗಳ ಕೊನೆಯಲ್ಲಿ ಸ್ವಲ್ಪ ಹಣವನ್ನು ಉಳಿಸಲು ಶಕ್ತಳಾಗಿದ್ದೆ ಎಂದು ಹೇಳಿದರು. ಇದನ್ನು ತನ್ನ ಜೀವನದ ಅತ್ಯಂತ ಸಂತೋಷದಾಯಕ ಕ್ಷಣ ಎಂದು ಪುರೋಹಿತ್ ಬಣ್ಣಿಸಿದ್ದಾರೆ. ತನ್ನ ಸಂಬಳ ಮತ್ತು ಜೀವನಶೈಲಿಯಿಂದ ತಾನು ತೃಪ್ತಳಾಗಿದ್ದೆ ಎಂದು ಹೇಳಿದರು. ಈಗ ದುಬೈಯಲ್ಲಿ ಅದಕ್ಕಿಂತ ಹೆಚ್ಚು ಪಟ್ಟು ಉತ್ತಮ ಹಣ ಗಳಿಸುತ್ತಿದ್ದರೂ ಈಗ ಆ ಭಾವನೆ ಇಲ್ಲ ಎಂದು ತಿಳಿಸಿದರು.

ಹೆಚ್ಚಿನ ಆರ್ಥಿಕ ಸ್ಥಿತಿಯ ಹೊರತಾಗಿಯೂ ತನ್ನ ಪ್ರಸ್ತುತ ಜೀವನದಲ್ಲಿ ತೃಪ್ತಿಯ ಕೊರತೆಯ ಬಗ್ಗೆ ಮಹಿಳೆಯ ಆತ್ಮಾವಲೋಕನವು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿತು. ಹೆಚ್ಚಿನ ಸಂಬಳ ಇದ್ದರೆ ಹೆಚ್ಚು ಖುಷಿ ಸಿಗುತ್ತಾ? ಎಂದು ಹಲವರು ಪ್ರಶ್ನಿಸಿದ್ದಾರೆ. ದುಬೈಯಲ್ಲಿನ ಜೀವನವು ನಿಮ್ಮ ಮನಸ್ಸಿನ ಶಾಂತಿಯ ಮೇಲೆ ಪರಿಣಾಮ ಬೀರುತ್ತಿದ್ದರೆ, ಮನೆಗೆ ಹಿಂತಿರುಗಿ. ನಿಮಗೆ ಭಾರತದಲ್ಲಿಯೂ ಉತ್ತಮ ಉದ್ಯೋಗ ಸಿಗುತ್ತದೆ. ನಿಮ್ಮ ಸಂತೋಷವನ್ನು ತ್ಯಾಗ ಮಾಡಬೇಡಿ ಎಂದು ಬಳಕೆದಾರರು ಹೇಳಿದ್ದಾರೆ.

ದುಬೈಯಲ್ಲಿ ತಮ್ಮ ಖರ್ಚುಗಳು ಮತ್ತು ವೆಚ್ಚಗಳನ್ನು ಮರುಪರಿಶೀಲಿಸಿ ಹೆಚ್ಚಿನ ಉಳಿತಾಯ ಮಾಡಲು ಕೆಲವರು ಸಲಹೆ ನೀಡಿದರು. ಬಹುಶಃ ನೀವು ದುಬೈಯಲ್ಲಿ ಹೆಚ್ಚು ಖರ್ಚು ಮಾಡುತ್ತಿರಬಹುದು. ಅದಕ್ಕಾಗಿಯೇ ಉಳಿತಾಯ ಕಷ್ಟವೆನಿಸುತ್ತದೆ ಎಂದು ಆ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral News: ಮೀಸಲಾತಿ ವ್ಯವಸ್ಥೆಯಿಂದ ತಾರತಮ್ಯ; ಒಲ್ಲದ ಮನಸ್ಸಿನಿಂದ ಭಾರತ ತೊರೆಯುತ್ತಿರುವ ನೋಯ್ಡಾ ಮಹಿಳೆ