ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮೀಸಲಾತಿ ವ್ಯವಸ್ಥೆಯಿಂದ ತಾರತಮ್ಯ; ಒಲ್ಲದ ಮನಸ್ಸಿನಿಂದ ಭಾರತ ತೊರೆಯುತ್ತಿರುವ ನೋಯ್ಡಾ ಮಹಿಳೆ

Noida Woman Is Leaving India: ಮಹಿಳೆಯೊಬ್ಬರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅನೇಕ ಮಂದಿ ಭಾರತೀಯರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಈ ಮಹಿಳೆಗೆ ವಿದೇಶಕ್ಕೆ ಹೋಗಲು ಮನಸ್ಸಿಲ್ಲದಿದ್ದರೂ ಹೋಗಲೇಬೇಕಾದ ಅನಿವಾರ್ಯತೆ ಇದೆಯಂತೆ. ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಮೀಸಲಾತಿಯಿಂದ ತಾರತಮ್ಯ: ಭಾರತ ತೊರೆಯಲು ಮುಂದಾದ ಮಹಿಳೆ

-

Priyanka P Priyanka P Sep 10, 2025 5:46 PM

ಲಖನೌ: ವಿದೇಶಕ್ಕೆ ಹೋಗಿ ಉದ್ಯೋಗ ಮಾಡುತ್ತಿರುವ ಭಾರತದ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ಇದೀಗ ಉತ್ತರ ಪ್ರದೇಶದ ನೋಯ್ಡಾ (Noida)ದ ಮಹಿಳೆಯೊಬ್ಬರು ವಿದೇಶಕ್ಕೆ ತೆರಳಲು ಏಕೆ ತಯಾರಿ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ನಿರ್ಧಾರವು ಆಯ್ಕೆಯ ಬಗ್ಗೆಯಲ್ಲ, ಬದಲಾಗಿ ಬಲವಂತದ್ದು ಎಂದು ಹೇಳಿದ್ದಾರೆ. ತಮ್ಮ ಲಿಂಕ್ಡ್‌ಇನ್ (LinkedIn) ಪೋಸ್ಟ್ ಮೂಲಕ, ಮೀಸಲಾತಿ ವ್ಯವಸ್ಥೆಯಿಂದಾಗಿ ಭಾರತದ ಉನ್ನತ ಸಂಸ್ಥೆಗಳಲ್ಲಿ ಸ್ಥಾನ ಪಡೆಯಲು ವಿಫಲರಾದ ಅನೇಕ ಆಕಾಂಕ್ಷಿಗಳ ಹೋರಾಟಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ. ಈ ಸುದ್ದಿ ವೈರಲ್ (Viral News) ಆಗಿದೆ.

ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಆಸ್ತಾ ಶ್ರೀವಾಸ್ತವ, ಹಲವು ವರ್ಷ ಪ್ರಯತ್ನ ಪಟ್ಟಿದ್ದರೂ, ಉತ್ತಮ ಅಂಕಗಳನ್ನು ಪಡೆದಿದ್ದರೂ ಅವರು ಕನಸು ಕಂಡ ಸಂಸ್ಥೆಯನ್ನು ಸೇರಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಈ ಅನುಭವವು ಕಾಲಾನಂತರದಲ್ಲಿ ಪುನರಾವರ್ತನೆಯಾಯಿತು. ಅಂತಿಮವಾಗಿ ವಿದೇಶದಲ್ಲಿ ಅವಕಾಶಗಳನ್ನು ಪಡೆಯಲು ಪ್ರೇರೇಪಿಸಿತು ಎಂದು ಅವರು ವಿವರಿಸಿದರು.

ಆಸ್ತಾ ಶ್ರೀವಾಸ್ತವ ತಮ್ಮ ಪೋಸ್ಟ್‌ ಅನ್ನು “ಭಾರತವನ್ನು ತೊರೆಯುವುದು – ಆಯ್ಕೆಯಿಂದಲ್ಲ, ಬಲವಂತದಿಂದ” ಎಂಬ ಭಾವನಾತ್ಮಕ ಟಿಪ್ಪಣಿಯೊಂದಿಗೆ ಪ್ರಾರಂಭಿಸಿದರು. ಸಿಂಗಾಪುರ ಮತ್ತು ದುಬೈನಲ್ಲಿ ಎಸ್‌ಪಿ ಜೈನ್ ಗ್ಲೋಬಲ್ ಎಂಬಿಎ ಟ್ವಿನ್-ಸಿಟಿ ಕಾರ್ಯಕ್ರಮಕ್ಕೆ ತಾನು ಆಯ್ಕೆಯಾಗಿದ್ದೇನೆ ಎಂದು ಅವರು ಉಲ್ಲೇಖಿಸಿ, ಇದು ಹೆಮ್ಮೆಯ ಮೈಲಿಗಲ್ಲು. ಆದರೆ ಹೃದಯ ಭಾರವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಲಖನೌ ವಿಶ್ವವಿದ್ಯಾಲಯದಿಂದ ಹೆಚ್ಚಿನ ಅಂಕಗಳೊಂದಿಗೆ ಪದವಿ ಪಡೆದ ನಂತರ ಆಸ್ತಾ CAT ಪರೀಕ್ಷೆಗೆ ತಯಾರಿ ನಡೆಸುವವರೆಗಿನ ತಮ್ಮ ಶೈಕ್ಷಣಿಕ ಪ್ರಯಾಣದ ಬಗ್ಗೆ ವಿವರಿಸಿದರು. ಅವರು ಹೆಚ್ಚು ಅಂಕಗಳೊಂದಿಗೆ ಉತ್ತಿರ್ಣಾರಾದರೂ IIMಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಕಡಿಮೆ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಸೀಟುಗಳು ದೊರೆತಿದ್ದವು. ಅದು ಅವರ ಅರ್ಹತೆಯಿಂದಲ್ಲ ಬದಲಾಗಿ ಮೀಸಲಾತಿ ನೀತಿಗಳಿಂದಾಗಿ ಎಂದು ಅವರು ದೂರಿದರು.

2013ರಲ್ಲಿ ಆಸ್ತಾ ಶ್ರೀವಾಸ್ತವ ತನ್ನ ಐಐಎಂ ಕನಸನ್ನು ಮುಂದುವರಿಸುವ ಬದಲು ಎಫ್‌ಎಂಎಸ್‌ಗೆ ಸೇರಿದರು. ವರ್ಷಗಳ ನಂತರ, ಅವರು ಜಿಎಂಎಟಿಗೆ ಹಾಜರಾದರು. ಅಲ್ಲಿ ಅವರು ಉತ್ತಮ ಅಂಕಗಳನ್ನು ಪಡೆದರು. ಆದರೆ, ಮತ್ತದೇ ಸಮಸ್ಯೆಯನ್ನು ಎದುರಿಸಿದರಂತೆ. ಉನ್ನತ ಶೇಕಡಾವಾರು ಅಂಕಗಳಲ್ಲಿದ್ದರೂ, ಸಾಮಾನ್ಯ ವರ್ಗಕ್ಕೆ ಸೀಮಿತ ಸೀಟುಗಳಿರುವುದರಿಂದ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಇದರಿಂದಾಗಿ, ಶ್ರೀವಾಸ್ತವ ದೇಶವನ್ನು ತೊರೆದು ಉತ್ತಮ ಅವಕಾಶಗಳನ್ನು ಹುಡುಕುತ್ತಾ ವಿದೇಶಕ್ಕೆ ಹೋಗಲು ನಿರ್ಧರಿಸಿದರು.

ಇದು ಕೇವಲ ತನ್ನ ಕಥೆ ಮಾತ್ರವಲ್ಲ, ಬದಲಾಗಿ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಆಕಾಂಕ್ಷಿಗಳ ಹೋರಾಟವಾಗಿದ್ದು, ಅವರು ನಿರಾಶೆಗೊಂಡಿದ್ದಾರೆ ಎಂದು ಆಸ್ತಾ ಶ್ರೀವಾಸ್ತವ ಹೇಳಿದರು. ವಿದೇಶಿ ರಾಷ್ಟ್ರಗಳು ವಿದ್ಯಾವಂತರನ್ನು ಗೌರವಿಸುತ್ತವೆ, ಸಬಲಗೊಳಿಸುತ್ತವೆ ಮತ್ತು ಅವರ ಪ್ರತಿಭೆಯಿಂದ ಬಲಶಾಲಿಯಾಗುತ್ತವೆ. ಭಾರತವು ಅವಕಾಶಗಳು ಮತ್ತು ಪ್ರೋತ್ಸಾಹಗಳೊಂದಿಗೆ ಅವರನ್ನು ಮರಳಿ ಕರೆತರಬೇಕು ಎಂದು ಅವರು ಬರೆದಿದ್ದಾರೆ.

ತಾನು ಯಾವುದೇ ಸಮುದಾಯದ ವಿರುದ್ಧ ಮಾತನಾಡುತ್ತಿಲ್ಲ. ಸಮಾನ ಅವಕಾಶಕ್ಕಾಗಿ ಮನವಿ ಮಾಡುತ್ತಿದ್ದೇನೆ. ಅರ್ಹತೆ ಮತ್ತು ಪ್ರತಿಭೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಗುರುತಿಸುವ ವ್ಯವಸ್ಥೆಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ಭಾರತದಲ್ಲಿ ಪ್ರತಿಭೆ ಅಥವಾ ಉತ್ಸಾಹದ ಕೊರತೆಯಿಲ್ಲದಿದ್ದರೂ, ಅದು ಸುಧಾರಣೆ ಮಾಡುವ ಧೈರ್ಯವನ್ನೂ ಹೊಂದಿರಬೇಕು ಎಂದು ಅವರು ಹೇಳಿದರು.