ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೊದಲ ರಾತ್ರಿಯಂದು ಪತಿ ಮಲಗಿದ್ರೆ ಈ ಪತ್ನಿ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

ಫಸ್ಟ್‌ನೈಟ್‌ ದಿನ ಹೂವು, ಲೈಟ್‍ಗಳಿಂದ ಅಲಂಕರಿಸಿದ ಬೆಡ್‍ ರೂಂನಲ್ಲಿ ಹಾಸಿಗೆಯ ಮೇಲೆ ವರ ಮಲಗಿದ್ದಾಗ ಅಲ್ಲಿಗೆ ಬಂದ ವಧು ಪತಿಯ ಕಾಲುಗಳನ್ನು ಒತ್ತಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಮದುವೆಯಿಂದ ಹಿಡಿದು ಮೊದಲ ರಾತ್ರಿ, ಹನಿಮೂನ್‍ವರೆಗಿನ ವಿಡಿಯೊಗಳು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ.ಇದೀಗ ಅಂಥದ್ದೇ ಒಂದು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಅಗಿದ್ದು ಎಲ್ಲರ ಮನಸ್ಸು ಗೆದ್ದಿದೆ. ವೈರಲ್ ಆದ ವಿಡಿಯೊದಲ್ಲಿ, ಅರ್ಷದ್ ಎಂಬ ವರ ಸುಂದರವಾಗಿ ಅಲಂಕರಿಸಲ್ಪಟ್ಟ ಹಾಸಿಗೆಯ ಮೇಲೆ ಮಲಗಿಕೊಂಡ ದೃಶ್ಯ ಸೆರೆಯಾಗಿದೆ.ಅವನ ಪಕ್ಕದಲ್ಲಿ ಕುಳಿತ ನವವಧು ಪ್ರೀತಿಯಿಂದ ಗಂಡನ ಪಾದಗಳನ್ನು ಒತ್ತಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ.

ಈ ವಿಡಿಯೊ ವೈರಲ್ ಆಗಿದ್ದು, 2.47 ಕೋಟಿಗೂ ಹೆಚ್ಚು ವ್ಯೂವ್ಸ್ ಮತ್ತು 8.82 ಲಕ್ಷ ಲೈಕ್‌ಗಳನ್ನು ಗಳಿಸಿದೆ.ಹಾಗೂ ಸಾಕಷ್ಟು ಜನ ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ. ಒಬ್ಬರು, “ದೇವರು ಎಲ್ಲರಿಗೂ ಇಂತಹ ಕಾಳಜಿಯುಳ್ಳ ಹೆಂಡತಿಯನ್ನು ದಯಪಾಲಿಸಲಿ” ಎಂದು ಬರೆದರೆ, ಮತ್ತೊಬ್ಬರು, “ಮದುವೆಯ ನಂತರ ಅವಳು ಮಾಡಿದ ಕೆಲಸ ಕಂಡು ನಿಮಗೆ ನಾಚಿಕೆಯಾಗಬೇಕು!” ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು, "ವಿದಾಯ ಸಮಯದಲ್ಲಿ ವಧುಗಳು ಏಕೆ ಅಳುತ್ತಾರೆಂದು ಈಗ ನನಗೆ ಅರ್ಥವಾಯಿತು" ಎಂದು ತಮಾಷೆ ಮಾಡಿದರೆ, ಇನ್ನೊಬ್ಬರು "ಅವನು ಬಹುಶಃ ಮೊದಲು ಅವಳ ಪಾದಗಳನ್ನು ಒತ್ತಿರುತ್ತಾನೆ, ಈಗ ಅವಳು ಅದನ್ನು ಮಾಡಿದಂತೆ ತೋರಿಸುತ್ತಾನೆ!" ಎಂದು ತಮಾಷೆ ಮಾಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಈ ಸುದ್ದಿಯನ್ನೂ ಓದಿ:Viral Video: ಪ್ರೀತಿಗೆ ವಯಸ್ಸಿನ ಹಂಗಿಲ್ಲ; ವೃದ್ಧಾಶ್ರಮದಲ್ಲಿ ಮದುವೆಯಾದ ವೃದ್ಧ ದಂಪತಿ

ಫಸ್ಟ್‌ನೈಟ್ ವಿಡಿಯೊಗಳು ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹನಿಮೂನ್‍ಗೆ ಬಂದಿದ್ದ ನವವಿವಾಹಿತ ದಂಪತಿ ತಮ್ಮ ಪ್ರಣಯದ ದೃಶ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ನೆಟ್ಟಿಗರ ಮನಗೆದ್ದು ವೈರಲ್ ಆಗಿ ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿತ್ತು.

ವೈರಲ್ ಆದ ವಿಡಿಯೊದಲ್ಲಿ ದಂಪತಿ ಹೋಟೆಲ್ ರೂಂ ಒಳಗೆ ಬರುವ ದೃಶ್ಯ ಸೆರೆಯಾಗಿದೆ. ಚೆನ್ನಾಗಿ ಅಲಂಕರಿಸಿದ ಹಾಸಿಗೆಯ ಮೇಲೆ ಹಾಗೂ ಅದರ ಪಕ್ಕದಲ್ಲಿದ್ದ ಕೇಕ್‌ನಲ್ಲಿ 'ಹ್ಯಾಪಿ ಹನಿಮೂನ್' ಎಂದು ಬರೆಯಲಾಗಿದೆ. ಪತಿ ಬಾಗಿಲು ತೆರೆದು ಪ್ರೀತಿಯಿಂದ ತನ್ನ ಪತ್ನಿಯನ್ನು ಕೋಣೆಗೆ ಕರೆದೊಯ್ದು, ಹಿನ್ನೆಲೆಯಲ್ಲಿ ಮೃದುವಾದ ಸಂಗೀತದೊಂದಿಗೆ, ಅವಳಿಗೆ ಕೆಂಪು ಬಲೂನ್ ನೀಡಿದ್ದಾನೆ. ಅವಳ ಕೈಗಳನ್ನು ತನ್ನ ಕಣ್ಣುಗಳಿಗೆ ನಿಧಾನವಾಗಿ ಒತ್ತಿಕೊಂಡು ಅವಳ ಹಣೆಗೆ ಹೂ ಮುತ್ತಿಟ್ಟು ಪ್ರೀತಿಯಿಂದ ದೃಷ್ಟಿ ತೆಗೆದಿದ್ದಾನೆ.