ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಾಲಕನ ಮೇಲೆ ಪಿಟ್‌ಬುಲ್‌ ಅಟ್ಯಾಕ್‌ ಮಾಡ್ತಿದ್ರೂ ನಗ್ತಾ ಕುಳಿತ ನಾಯಿ ಮಾಲೀಕ- ಈ ವಿಡಿಯೊ ನೋಡಿ

Dog attacks boy: ನಿಂತಿದ್ದ ಆಟೋರಿಕ್ಷಾದ ಒಳಗೆ ಆಟವಾಡುತ್ತಿದ್ದ ಬಾಲಕನ ಬಳಿ ವ್ಯಕ್ತಿಯೊಬ್ಬ ತನ್ನ ಶ್ವಾನವನ್ನು ಬಿಟ್ಟಿದ್ದಾನೆ. ಪರಿಣಾಮ ನಾಯಿಯು ಬಾಲಕನನ್ನು ಕಚ್ಚಿ ಗಾಯಗೊಳಿಸಿದೆ. ಶ್ವಾನ ಕಚ್ಚುತ್ತಿದ್ದರೂ ಮಾಲೀಕ ನಗುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಮುಂಬೈ: ನಿಂತಿದ್ದ ಆಟೋರಿಕ್ಷಾದ ಒಳಗೆ ಆಟವಾಡುತ್ತಿದ್ದ ಬಾಲಕನ ಬಳಿ ವ್ಯಕ್ತಿಯೊಬ್ಬ ತನ್ನ ಶ್ವಾನವನ್ನು ಬಿಟ್ಟಿದ್ದಾನೆ. ಪರಿಣಾಮ ನಾಯಿಯು ಬಾಲಕನನ್ನು ಕಚ್ಚಿ ಗಾಯಗೊಳಿಸಿದೆ. ಮುಂಬೈನ ಮನ್ಖುರ್ಡ್ ಪ್ರದೇಶದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ತನ್ನ ಪಿಟ್‌ಬುಲ್‌ ನಾಯಿ ಬಾಲಕನ ಮೇಲೆ ದಾಳಿ ಮಾಡುತ್ತಿದ್ದರೂ ಮಾಲೀಕ ಮಾತ್ರ ನೋಡ್ತಾ ನಗ್ತಾ ಕುಳಿತು ವಿಕೃತಿ ಮೆರೆದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.

ಮೊಹಮ್ಮದ್ ಸೊಹೈಲ್ ಹಸನ್ ಎಂದು ಗುರುತಿಸಲಾದ 43 ವರ್ಷದ ವ್ಯಕ್ತಿ, 11 ವರ್ಷದ ಬಾಲಕನ ಮೇಲೆ ತನ್ನ ಪಿಟ್ ಬುಲ್ ಜಾತಿಯ ನಾಯಿಯನ್ನು ಉದ್ದೇಶಪೂರ್ವಕವಾಗಿ ಬಿಟ್ಟಿದ್ದಾನೆ. ನಾಯಿಯು ಬಾಲಕನ ಮೇಲೆ ಆಕ್ರಮಣ ನಡೆಸಿದ. ಹಮ್ಜಾ ಶ್ವಾನ ದಾಳಿಯಿಂದ ಗಾಯಗೊಂಡ ಬಾಲಕ. ಜುಲೈ 17 ರಂದು ಈ ಘಟನೆ ನಡೆದಿದ್ದು, ನಿಂತಿದ್ದ ಆಟೋವೊಂದಲ್ಲಿ ಬಾಲಕ ಹಮ್ಜಾ ಆಟವಾಡುತ್ತಿದ್ದ.

ಘಟನೆಯನ್ನು ಸೆರೆಹಿಡಿಯಲಾದ ವಿಡಿಯೋದಲ್ಲಿ ನಾಯಿಯಿಂದ ಭಯಭೀತನಾದ ಬಾಲಕ ರಿಕ್ಷಾದ ಮೂಲೆಯಲ್ಲಿರುವುದನ್ನು ತೋರಿಸಲಾಗಿದೆ. ಪಿಟ್ ಬುಲ್ ಶ್ವಾನ ಬಾಲಕನನ್ನು ಕಚ್ಚಿದರೂ ಖಾನ್ ನಗುತ್ತಲೇ ಇದ್ದನು. ಬಾಲಕನ ರಕ್ಷಣೆ ಮಾಡಲು ಮುಂದಾಗಲಿಲ್ಲ. ಬದಲಾಗಿ ಆತ ಖಷಿಪಟ್ಟಂತೆ ತೋರುತ್ತಿದೆ.



ಕೆಲವು ಸೆಕೆಂಡುಗಳ ನಂತರ, ಹುಡುಗ ಕಿರುಚಿದ್ದಾನೆ. ನಾಯಿ ಅವನ ಗಲ್ಲವನ್ನು ಕಚ್ಚಿದೆ. ಆತನ ಬಟ್ಟೆಯನ್ನು ಹಿಡಿದು ಎಳೆಯುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಬಾಲಕ ಆಟೋದಿಂದ ಇಳಿದು ಓಡಿದ್ದಾನೆ. ನಾಯಿ ಕೂಡ ಆತನನ್ನು ಬೆನ್ನಟ್ಟಿದೆ. ಖಾನ್ ನಾಯಿಯ ಸರಪಳಿಯನ್ನು ಕೂಡ ಹಿಡಿದುಕೊಂಡಿರಲಿಲ್ಲ. ನಾಯಿಯ ಮಾಲೀಕ ಬಾಲಕನಿಗೆ ಸಹಾಯ ಮಾಡುವ ಬದಲು ನಗುತ್ತಲೇ ಇದ್ದರು. ಶ್ವಾನವು ಆಟೋದಿಂದ ಇಳಿದು ಓಡಿದ ಬಾಲಕನನ್ನು ಬೆನ್ನಟ್ಟಿದೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್-ಏನಿದೆ ಅದ್ರಲ್ಲಿ?

ಶ್ವಾನ ದಾಳಿಯಿಂದ ಬಾಲಕನ ಗಲ್ಲಕ್ಕೆ ಗಾಯಗಳಾಗಿದ್ದು, ಅವನು ಭೀತಿಯಿಂದ ನಡುಗುತ್ತಿದ್ದ. ನಾಯಿ ತನ್ನನ್ನು ಕಚ್ಚಿತು. ನಂತರ, ತಾನು ಓಡಿಹೋದೆ. ಅದು ತನ್ನ ಬಟ್ಟೆಗಳನ್ನು ಎಳೆಯುತ್ತಿತ್ತು ಎಂದು ಬಾಲಕ ದಾಳಿಯ ಬಗ್ಗೆ ತಿಳಿಸಿದ್ದಾನೆ. ಸಹಾಯ ಮಾಡುವಂತೆ ಶ್ವಾನದ ಮಾಲೀಕನಲ್ಲಿ ಕೇಳಿಕೊಂಡರೂ ಅವರು ನಗುತ್ತಲೇ ಇದ್ದರು. ಸ್ಥಳದಲ್ಲಿದ್ದವರು ಕೂಡ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರೇ ಹೊರತು, ಯಾರೂ ತನಗೆ ಸಹಾಯ ಮಾಡಲು ಮುಂದೆ ಬರಲಿಲ್ಲ ಎಂದು ಬಾಲಕ ತಿಳಿಸಿದ್ದಾನೆ.

ದಾಳಿಯ ನಂತರ ತಾನು ತುಂಬಾ ಭಯಬೀತನಾಗಿದ್ದಾಗಿ ಹಮ್ಜಾ ತಿಳಿಸಿದ್ದಾನೆ. ಶುಕ್ರವಾರ ನಾಯಿಯ ಮಾಲೀಕ ಹಸನ್ ವಿರುದ್ಧ ಬಾಲಕನ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ನಿಲ್ಲಿಸಿದ್ದ ಆಟೋರಿಕ್ಷಾದೊಳಗೆ ಆಟವಾಡುತ್ತಿದ್ದ ಮಗುವಿನ ಮೇಲೆ ಹಸನ್ ತನ್ನ ನಾಯಿಯನ್ನು ಬಿಟ್ಟಿದ್ದಾನೆ.

ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 291 (ಪ್ರಾಣಿಗಳನ್ನು ನಿರ್ಲಕ್ಷ್ಯದಿಂದ ತ್ಯಜಿಸುವುದು), 125 (ಸರಳವಾಗಿ ಗಾಯಗೊಳಿಸುವುದು) ಮತ್ತು 125 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 35(3) ರ ಅಡಿಯಲ್ಲಿ ಆರೋಪಿಗೆ ನೋಟಿಸ್ ನೀಡಲಾಗಿದೆ.