ಜೈಪುರ: ಚಾಲಕನೊಬ್ಬ ತನ್ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದನ್ನು ಗಮನಿಸಿದ ಕೂಡಲೇ ಸಹಾಯಕನಿಗೆ ಬಸ್ ನಿಯಂತ್ರಣ ಮಾಡುವಂತೆ ತಿಳಿಸಿದ್ದಾನೆ. ಸತೀಶ್ ರಾವ್ ಎಂದು ಗುರುತಿಸಲಾದ ಚಾಲಕನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಆಸ್ಪತ್ರೆ ತಲುಪುವ ಮೊದಲೇ ಅವರು ಚಲಿಸುತ್ತಿದ್ದ ಬಸ್ಸಿನಲ್ಲಿ ಮೂರ್ಛೆ ಹೋಗಿ ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾರೆ. ರಾಜಸ್ಥಾನದ (Rajasthan) ಪಾಲಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ಸತೀಶ್ ರಾವ್ ಇಂದೋರ್‌ನಿಂದ ಜೋಧ್‌ಪುರಕ್ಕೆ ಖಾಸಗಿ ಬಸ್ ಚಲಾಯಿಸುತ್ತಿದ್ದರು. ಮಾರ್ಗಮಧ್ಯೆ, ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ ಹೆಲ್ಪರ್‌ಗೆ ಸ್ಟೇರಿಂಗ್ ಕೊಟ್ಟು, ಬಸ್ ಚಲಾಯಿಸುವಂತೆ ತಿಳಿಸಿದ್ದಾರೆ. ಕೂಡಲೇ ಆತ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಕರೆದೊಯ್ದಿದ್ದಾನೆ. ಆದರೆ, ಅದು ಮುಚ್ಚಿತ್ತು. ಹೀಗಾಗಿ ಬಸ್ ಮುಂದೆ ಹೋಯಿತು. ಅವರು ಬೇಗನೆ ಆಸ್ಪತ್ರೆ ತಲುಪುವ ಧಾವಂತದಲ್ಲಿದ್ದರು.
ಚಾಲಕನ ಆಸನದಿಂದ ಎದ್ದು ಸ್ಟೇರಿಂಗ್ ಅನ್ನು ಸಹಾಯಕನಿಗೆ ನೀಡಿ ಬಸ್ ಚಲಾಯಿಸುವಂತೆ ಸತೀಶ್ ರಾವ್ ಹೇಳಿದ್ದಾರೆ. ನಂತರ ಆತನ ಪಕ್ಕದಲ್ಲಿ ಕಾಲು ಚಾಚಿ ಕುಳಿತಿದ್ದ ಸತೀಶ್ ರಾವ್ ಮೂರ್ಛೆ ಹೋಗಿ ಚಾಲಕನ ಮೇಲೆ ಪ್ರಜ್ಞೆ ತಪ್ಪಿ ಬಿದ್ದರು. ಪಕ್ಕದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು. ಕೂಡಲೇ ಆಸ್ಪತ್ರೆ ತಲುಪಿದ ಅವರನ್ನು ಬಸ್‍ನಲ್ಲಿದ್ದ ಪ್ರಯಾಣಿಕರು ಎತ್ತಿಕೊಂಡು ಹೋಗಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಇದನ್ನೂ ಓದಿ: 18 ವರ್ಷಗಳ ಬಳಿಕ ರಿಲೀಸ್ ಆಯಿತು ಶ್ರೀಕಾಂತ್ ಕೆನ್ನಗೆ ಬಾರಿಸಿದ ವಿಡಿಯೊ
ಸತೀಶ್ ರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾಗಿ ವೈದ್ಯರು ಘೋಷಿಸಿದರು. ದುರಂತದ ಬಗ್ಗೆ ತಿಳಿದ ನಂತರ, ಕುಟುಂಬವು ಮರಣೋತ್ತರ ಪರೀಕ್ಷೆ ಸೇರಿದಂತೆ ಯಾವುದೇ ರೀತಿಯ ವಿಚಾರಣೆಗೆ ನಿರಾಕರಿಸಿತು. ಮೃತ ಚಾಲಕ ಸತೀಶ್ ರಾವ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಆರೋಗ್ಯ ಹದಗೆಡುತ್ತಿರುವುದನ್ನು ಅಂದಾಜಿಸಿದ ಕೂಡಲೇ ಅವರು ಬಸ್ ಚಾಲನೆ ಮಾಡಲು ಸಹಾಯಕನನ್ನು ಕರೆದಿದ್ದಾರೆ. ಈ ಮೂಲಕ ಪ್ರಯಾಣಿಕರ ಜೀವ ಕಾಪಾಡಿದ್ದಾರೆ. ಅವರ ಮುಂದಾಲೋಚನೆ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಗೂಗಲ್ ಮ್ಯಾಪ್ ನಂಬಿ ವ್ಯಾನ್ ಚಾಲಕನೊಬ್ಬ ಸೇತುವೆಯ ಮೇಲೆ ವಾಹನ ಚಲಾಯಿಸಿದ್ದಾನೆ. ಆದರೆ, ಆ ಸೇತುವೆ ಮುಚ್ಚಿ ಹೋಗಿತ್ತು. ಬನಾಸ್ ನದಿಯ ಬಲವಾದ ಪ್ರವಾಹಕ್ಕೆ ಸಿಲುಕಿದ ವಾಹನ ಕೊಚ್ಚಿ ಹೋಗಿದೆ. ದುರಂತದಲ್ಲಿ ಮೂವರು ಮೃತಪಟ್ಟಿದ್ದು, ಒಂದು ಮಗು ಕಾಣೆಯಾಗಿದೆ. ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಂಗಳವಾರ ಕುಟುಂಬವೊಂದು ಭಿಲ್ವಾರಕ್ಕೆ ಧಾರ್ಮಿಕ ಪ್ರವಾಸದಿಂದ ಹಿಂತಿರುಗುತ್ತಿದ್ದಾಗ ಈ ದುರಂತ ನಡೆದಿದೆ.