18 ವರ್ಷಗಳ ಬಳಿಕ ರಿಲೀಸ್ ಆಯಿತು ಶ್ರೀಕಾಂತ್ ಕೆನ್ನೆಗೆ ಬಾರಿಸಿದ ವಿಡಿಯೊ
Harbhajan slapping Sreesanth: ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್ ಅವರು ಎಸ್. ಶ್ರೀಶಾಂತ್‌ಗೆ ಮೈದಾನದಲ್ಲಿಯೇ ಕಪಾಳಮೋಕ್ಷ ಮಾಡಿದ್ದರು. ಆದರೆ ಅಂದಿನ ಈ ಘಟನೆಯ ವಿಡಿಯೊ ಮಾತ್ರ ಇದುವರೆಗೂ ಸಾರ್ವಜನಿಕರಿಗೆ ಲಭಿಸಿರಲಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಪ್ರಸಾರಕರು ಇದನ್ನು ಗೌಪ್ಯವಾಗಿಟ್ಟಿದ್ದರು.

-

ಲಂಡನ್: 2008 ರ ಐಪಿಎಲ್(IPL 2028) ಪಂದ್ಯದ ವೇಳೆ ಹರ್ಭಜನ್ ಸಿಂಗ್(Harbhajan slapping Sreesanth) ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರ ಕ್ಲಿಪ್ ಅನ್ನು ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ(Lalit Modi) ಬಿಡುಗಡೆ ಮಾಡಿದ್ದಾರೆ. ಮೈಕೆಲ್ ಕ್ಲಾರ್ಕ್(Michael Clarke) ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಈ ದೃಶ್ಯ ಪ್ರಸಾರವಾದಾಗಿನಿಂದ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಅಂದು ನಡೆದಿದ್ದ ಈ ಘಟನೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ದೊಡ್ಡ ವಿವಾದಗಳಲ್ಲಿ ಒಂದಾಗಿದೆ.
ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್ ಅವರು ಎಸ್. ಶ್ರೀಶಾಂತ್‌ಗೆ ಮೈದಾನದಲ್ಲಿಯೇ ಕಪಾಳಮೋಕ್ಷ ಮಾಡಿದ್ದರು. ಆದರೆ ಅಂದಿನ ಈ ಘಟನೆಯ ವಿಡಿಯೊ ಮಾತ್ರ ಇದುವರೆಗೂ ಸಾರ್ವಜನಿಕರಿಗೆ ಲಭಿಸಿರಲಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಪ್ರಸಾರಕರು ಇದನ್ನು ಗೌಪ್ಯವಾಗಿಟ್ಟಿದ್ದರು.
ಆದರೆ ಇದೀಗ ಹದಿನೆಂಟು ವರ್ಷಗಳ ನಂತರ, ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರು ಹರ್ಭಜನ್ ಶ್ರೀಶಾಂತ್‌ಗೆ ಕೆನ್ನೆಗೆ ಬಾರಿಸುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಬಿಡುಗಡೆಯಾದ ದೃಶ್ಯಗಳಲ್ಲಿ, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಆಟಗಾರರು ಪಂದ್ಯದ ಮುಕ್ತಾಯದ ಬಳಿಕ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗೆ ಮುಂದಾದ ವೇಳೆ ಹರ್ಭಜನ್ ಏಕಾಏಕಿ ಶ್ರೀಶಾಂತ್‌ಗೆ ತಮ್ಮ ಕೈಯ ಹಿಂಭಾಗದಿಂದ ಕೆನ್ನಗೆ ಹೊಡೆಯುವುದನ್ನು ಕಾಣಬಹುದು.
ಆ ಸಮಯದಲ್ಲಿ ಟಿವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿದ್ದವು ಮತ್ತು ಘಟನೆಯು ಅವರ ಭದ್ರತಾ ಕ್ಯಾಮೆರಾದಲ್ಲಿ ಮಾತ್ರ ಸೆರೆಯಾಗಿದೆ ಎಂದು ಲಲಿತ್ ಮೋದಿ ಬಹಿರಂಗಪಡಿಸಿದರು. ಮಾಜಿ ಐಪಿಎಲ್ ಅಧ್ಯಕ್ಷರು ಆ ವೀಡಿಯೊವನ್ನು ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ಹೇಳಿದರು.
One of the wildest moments in IPL history, Unseen footage of the Bhajji–Sreesanth slapgate that never been aired#IPL pic.twitter.com/E9Ux8bodOW
— Vishal (@Fanpointofviews) August 29, 2025
"ಭಜ್ಜಿ ನನ್ನ ಆತ್ಮೀಯ ಸ್ನೇಹಿತ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಅದು ಮೈದಾನದಲ್ಲಿ ನಡೆದ ಘಟನೆ, ಮತ್ತು ನಾನು ಅಲ್ಲಿದ್ದೆ. ಅದು ಭಜ್ಜಿ, ಮತ್ತು ಶ್ರೀಶಾಂತ್. ಆಟ ಮುಗಿದಿತ್ತು, ಮತ್ತು ಕ್ಯಾಮೆರಾಗಳು ಆಫ್ ಆಗಿದ್ದವು. ನನ್ನ ಭದ್ರತಾ ಕ್ಯಾಮೆರಾಗಳಲ್ಲಿ ಒಂದು ಮಾತ್ರ ಆನ್ ಆಗಿತ್ತು. ತಂಡ ಆಟ ಮುಗಿಸುತ್ತಿದ್ದಂತೆ, ಆಟಗಾರರು ಹೈ-ಫೈವ್ 5' ಮಾಡುತ್ತಾ ಪರಸ್ಪರ ಕೈಕುಲುಕುತ್ತಿದ್ದರು. ಈ ವೇಳೆ ಹರ್ಭಜನ್ ಇಲ್ಲಿಗೆ ಬಾ ಎಂದು ಹೇಳಿ, ಶ್ರೀಕಾಂತ್ ಕೆನ್ನೆಗೆ ಬಾರಿಸಿದರು" ಎಂದು ಪಾಡ್‌ಕ್ಯಾಸ್ಟ್‌ನಲ್ಲಿ ಮೋದಿ ಹೇಳಿದರು. ಈ ತಪ್ಪಿಗಾಗಿ ಹರ್ಭಜನ್‌ಗೆ 11 ಪಂದ್ಯಗಳ ಕಠಿಣ ನಿಷೇಧವನ್ನು ನೀಡಲಾಯಿತು ಎಂಬುದನ್ನು ಕೂಡ ಮೋದಿ ನೆನಪಿಸಿಕೊಂಡರು.