ಕುವೈತ್: ಖ್ಯಾತ ಗಾಯಕಿಯೊಬ್ಬರ (Singer) ಭಯಾನಕ ಅನುಭವವೊಂದು ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ವೈರಲ್ (Viral Video) ಆಗಿದೆ. ಅವರು ಮನುಷ್ಯರೇ ಅಲ್ಲದವರ ಮುಂದೆ ಪ್ರದರ್ಶನ ನೀಡಿರುವ ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎನ್ನಲಾಗಿದೆ. ಈ ಪ್ರದರ್ಶನ ಅವರ ಜೀವನದ ಕೊನೆಯ ಪ್ರದರ್ಶನವಾಯಿತು ಎಂದು ಹೇಳಲಾಗಿದೆ. ಇಂತಹ ಅನುಭವಗಳು ಪಾಕಿಸ್ತಾನದಲ್ಲಿ ಸಾಮಾನ್ಯ ಎಂದು ಇದರಲ್ಲಿ ಹೇಳಲಾಗಿದೆ. ಕುವೈತ್ ನ ಖ್ಯಾತ ಗಾಯಕಿ ನೌರಾ (Kuwaiti singer Noura ) ಅವರ ಅನುಭವವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅವರು ಮನುಷ್ಯರೇ ಅಲ್ಲದವರ ಮುಂದೆ ಪ್ರದರ್ಶನ ನೀಡಿದ್ದು, ಇದು ಅವರ ಕೊನೆಯ ಪ್ರದರ್ಶನವಾಯಿತು ಎನ್ನಲಾಗಿದೆ.
ಪಾಕಿಸ್ತಾನದ ಪ್ರತಿ ಮನೆಯಲ್ಲೂ ಅಗೋಚರ ಶಕ್ತಿಗಳಿವೆ. ಅದು ಅಲ್ಲಿಯವರಿಗೆ ಸಾಮಾನ್ಯವಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಅಗೋಚರ ಶಕ್ತಿಗಳ ಮದುವೆ ಕಾರ್ಯಕ್ರಮವೊಂದರಲ್ಲಿ ಒಮ್ಮೆ ಕುವೈತ್ ನ ಪ್ರಸಿದ್ಧ ಗಾಯಕಿ ನೌರಾ ಪ್ರದರ್ಶನ ನೀಡಿದ್ದರು. ಈ ಮದುವೆಯಲ್ಲಿ ಯಾರೂ ಅತಿಥಿಗಳು ಇರಲಿಲ್ಲ ಎಂದು ಹೇಳುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೊದಲ್ಲಿ ಆ ರಾತ್ರಿ ಏನಾಯಿತು ಎನ್ನುವುದನ್ನು ಹೇಳಲಾಗಿದೆ.
1997ರಲ್ಲಿ ಈ ಘಟನೆ ನಡೆದಿದೆ. ಆಗ ನೌರಾ ಕುವೈತ್‌ನ ಅತ್ಯಂತ ಜನಪ್ರಿಯ ವಿವಾಹ ಪ್ರದರ್ಶಕರಲ್ಲಿ ಒಬ್ಬರಾಗಿದ್ದರು. ಆ ದಿನ ರಾತ್ರಿ ನಗರದಿಂದ ದೂರದಲ್ಲಿರುವ ಒಂದು ಭವನದಲ್ಲಿ ಅವರು ಹಾಡಲು ಹೋಗಿದ್ದರು. ಆರಂಭದಲ್ಲಿ ಎಲ್ಲವೂ ಸ್ವಾಭಾವಿಕ ಎಂದು ತೋರುತ್ತಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಗಿತ್ತು.
ರಾತ್ರಿ 10.30ರ ಸುಮಾರಿಗೆ ಅತಿಥಿಗಳು ಬರಲಾರಂಭಿಸಿದರು. ನೌರಾ ಹಾಡುತ್ತಿದ್ದಾಗ ಅತಿಥಿಗಳು ನೃತ್ಯ ಮಾಡುತ್ತಿದ್ದರು. ನೌರಾಗೆ ಅವರು ಮನುಷ್ಯರಂತೆ ಕಾಣಲಿಲ್ಲ. ಅವರ ಚಲನೆಗಳು ಅಸ್ವಾಭಾವಿಕವಾಗಿದ್ದವು. ಕೆಲವರು ಅವರ ಹತ್ತಿರ ಬಂದರು. ಆಗ ಅವರ ಚರ್ಮವು ಬಿಸಿಯಾಗಿ, ಗಟ್ಟಿಯಾಗಿರುವಂತೆ ಅನಿಸಿತು. ಕೆಲವೇ ಕ್ಷಣಗಳಲ್ಲಿ ಸುಟ್ಟು ಹೋದಂತೆ ಭಾಸವಾಯಿತು.
ಇವರೊಂದಿಗೆ ಇದ್ದ ತಂಡದ ಸದಸ್ಯರೆಲ್ಲರೂ ಭಯಭೀತರಾಗಿದ್ದರು. ನೌರಾ ಅವರಿಗೂ ಭಯವಾಗಿತ್ತು. ಆದರೂ ಅವರು ಶಾಂತವಾಗಿದ್ದರು ಮತ್ತು ಇತರರೊಂದಿಗೆ ತಮ್ಮ ಅನುಭವವನ್ನು ನೋಟದಲ್ಲಿ ಹಂಚಿಕೊಂಡರು. ಗಾಯನವನ್ನು ಅರ್ಧದಲ್ಲಿ ನಿಲ್ಲಿಸುವುದು ಅಪಾಯಕಾರಿ ಎಂದು ಅರಿತ ಅವರು ಪ್ರದರ್ಶನವನ್ನು ಮುಂದುವರಿಸಿದರು. ಮಧ್ಯರಾತ್ರಿಯಲ್ಲಿ, ಅತಿಥಿಗಳ ದೇಹಗಳ ಆಕಾರ ಬದಲಾದವು. ಕೆಲವರ ಕಾಲುಗಳು ಪ್ರಾಣಿಗಳಂತೆ ಹಿಂದಕ್ಕೆ ಬಾಗಿದವು, ತೋಳುಗಳು ಉದ್ದವಾದವು, ಮುಖಗಳು ದೈತ್ಯಾಕಾರವಾದವು. ಇದನ್ನೆಲ್ಲಾ ನೋಡುತ್ತಲೇ ನೌರಾ ಕಾರ್ಯಕ್ರಮ ಮುಂದುವರಿಸಿದರು.
ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ದೀಪಗಳು ಆರಿಹೋದವು. ಬೆಚ್ಚಗಿನ ಬೇಸಿಗೆಯ ಗಾಳಿಯು ತಣ್ಣಗಾಯಿತು. ನೌರಾ ಮತ್ತು ತಂಡ ತಮ್ಮ ವಾದ್ಯಗಳು, ವಸ್ತುಗಳನ್ನು ಬಿಟ್ಟು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಅವರು ಪ್ರದರ್ಶನ ನೀಡಲು ಹೋದ ಮಹಲು ಸುಮಾರು 10 ವರ್ಷಗಳಿಂದ ಮುಚ್ಚಲ್ಪಟ್ಟಿದೆ ಎನ್ನುವುದು ತಿಳಿಯಿತು. ಕೂಡಲೇ ಅವರು ಗಾಯನ ಕ್ಷೇತ್ರವನ್ನು ತ್ಯಜಿಸಿದರು ಎಂದು ವಿಡಿಯೊದಲ್ಲಿ ಹೇಳಲಾಗಿದೆ.
ಈ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿಯನ್ನು ಸೆಳೆದಿದೆ. ಹಲವಾರು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬರು ಪಾಕಿಸ್ತಾನದ ಪ್ರತಿ ಎರಡನೇ ಮನೆಯಲ್ಲಿ ಅಗೋಚರ ಶಕ್ತಿಗಳಿವೆ. ಅಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ಎಂದು ಹೇಳಿದ್ದರೆ ಇನ್ನೊಬ್ಬರು ಭಯದಿಂದ ಇದು ನಡುಕ ತರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Viral News: ನಡುರಸ್ತೆಯಲ್ಲಿ ಬಟ್ಟೆ ತೊಳೆದ ಭೂಪಾ.. ಇದು ಅಭಿವೃದ್ಧಿ ಹೊಂದಿರುವ ದೇಶದ ಅವಸ್ಥೆ!
ಕೆಲವರು ಈ ಕಥೆ ನಂಬುವಂತಿಲ್ಲ ಎಂದು ಹೇಳಿದ್ದು, ಇನ್ನೊಬ್ಬರು ನೀವು ತುಂಬಾ ತಮಾಷೆ ಮಾಡುತ್ತೀರಿ ಎಂದು ಹೇಳಿದ್ದಾರೆ.