Viral News: ನಡುರಸ್ತೆಯಲ್ಲಿ ಬಟ್ಟೆ ತೊಳೆದ ಭೂಪಾ.. ಇದು ಅಭಿವೃದ್ಧಿ ಹೊಂದಿರುವ ದೇಶದ ಅವಸ್ಥೆ!
A man washing clothes at a public fountain: ವ್ಯಕ್ತಿಯೊಬ್ಬ ನಗರ ಮಧ್ಯದಲ್ಲಿ ಸಾರ್ವಜನಿಕ ಕಾರಂಜಿಯಲ್ಲಿ ತನ್ನ ಬಟ್ಟೆಯನ್ನು ಒಗೆದಿದ್ದಾನೆ. ಈ ಘಟನೆ ನಡೆದಿದ್ದು, ಅಭಿವೃದ್ಧಿ ಶೀಲ ದೇಶದಲ್ಲಲ್ಲ. ಬದಲಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರ ಕೆನಡಾದಲ್ಲಿ! ಇದು ಇಲ್ಲಿನ ನಿರಾಶ್ರಿತ ಜನಸಂಖ್ಯೆಯನ್ನು ಎತ್ತಿ ತೋರಿಸುತ್ತದೆ.


ಟೊರೊಂಟೊ: ಕೆನಡಾದಲ್ಲಿ ವಾಸಿಸುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕೆನಡಾ ದೇಶದ ಟೊರೊಂಟೊ (Toronto) ನಗರದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದು ನಗರದ ನಿರಾಶ್ರಿತ ಜನಸಂಖ್ಯೆಯನ್ನು ಎತ್ತಿ ತೋರಿಸುತ್ತದೆ. ನಿತೀಶ್ ಅದ್ವೈತಿ ಎಂಬುವವರು ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್ (Viral Video) ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ಸಾರ್ವಜನಿಕ ಕಾರಂಜಿಯಲ್ಲಿ ತನ್ನ ಬಟ್ಟೆಗಳನ್ನು ತೊಳೆದಿದ್ದಾನೆ.
ಇಲ್ಲಿ ಇಂತಹ ದೃಶ್ಯವನ್ನು ನೋಡುತ್ತೇನೆಂದು ನಾನು ಎಂದಿಗೂ ಊಹಿಸಿರಲಿಲ್ಲ. ಈ ವ್ಯಕ್ತಿ ಬಹುಶಃ ನಿರಾಶ್ರಿತನಾಗಿರಬಹುದು. ಇಲ್ಲಿನ ನಿರಾಶ್ರಿತರ ಸ್ಥಿತಿ ಹೀಗೆ ಇರುತ್ತದೆ ಎಂದು ನಿತೀಶ್ ಅದ್ವಿತಿ ಹೇಳಿದ್ದಾರೆ. ‘ಕೆನಡಾದಲ್ಲಿ ಬಡತನ: ಟೊರೊಂಟೊದ ನಿರಾಶ್ರಿತ ಜನರು’ ಎಂದು ವಿಡಿಯೊದಲ್ಲಿ ಬರೆಯಲಾಗಿದೆ. ಹಾಗೆಯೇ ‘ಕೆನಡಾದಲ್ಲಿ ಬಡವರು ತಮ್ಮ ಬಟ್ಟೆಗಳನ್ನು ಈ ರೀತಿ ತೊಳೆಯುತ್ತಾರೆ’ ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಲಾಗಿದೆ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ಭಾರಿ ವೈರಲ್ ಆಗಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ 181,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕರು ಈ ವಿಡಿಯೊ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಕೆನಡಾ ಮುಂದುವರಿದ ದೇಶ, ಇಲ್ಲಿ ಹಲವು ಅವಕಾಶಗಳಿವೆ ಎಂದು ನಾನು ಭಾವಿಸಿದ್ದೆ, ಇದನ್ನು ನೋಡಿ ಹೃದಯವಿದ್ರಾವಕವಾಗಿದೆ ಎಂದು ಬರೆದಿದ್ದಾರೆ. ಯಾವುದೇ ದೇಶ ಪರಿಪೂರ್ಣವಲ್ಲ, ಬಡತನ ಎಲ್ಲೆಡೆ ಇದೆ ಎಂಬುದನ್ನು ಈ ವಿಡಿಯೊ ತೋರಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದು ಬಡತನವಲ್ಲ, ಇದು ಸಾಮಾಜಿಕ ಜವಾಬ್ದಾರಿಯ ನಿರ್ಲಕ್ಷ್ಯ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಂದು ವಿಡಿಯೊದಿಂದ ನಾವು ಇಡೀ ರಾಷ್ಟ್ರವನ್ನು ನಿರ್ಣಯಿಸಬಾರದು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಟೊರೊಂಟೊದಲ್ಲಿ ಅತಿ ಹೆಚ್ಚು ನಿರಾಶ್ರಿತರಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಫ್ಲೈಓವರ್‌ನಿಂದ ಜಿಗಿದು ರಸ್ತೆಗೆ ಬಿದ್ದು, ನರಳಾಡಿದ ಯುವಕ: ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು