ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಇಬ್ಬರು ಯುವತಿಯನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ

Viral News: ಇಲ್ಲೊಬ್ಬ ಯುವಕ ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗಿದ್ದಾನೆ. ಈ ಘಟನೆ ಕರ್ನಾಟಕದಲ್ಲಿ ನಡೆದಿದ್ದಲ್ಲ, ಬದಲಾಗಿ ಪಕ್ಕದ ತೆಲಂಗಾಣದ್ದು. ಇಲ್ಲಿನ ಕೊಮರಾಮ್ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್ ಎಂಬುವವ ಲಾಲ್ ದೇವಿ ಮತ್ತು ಝಲ್ಕರಿ ದೇವಿ ಎಂಬ ಇಬ್ಬರು ಯುವತಿಯರನ್ನು ಮದುವೆಯಾಗಿದ್ದಾನೆ.

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ

ಇಬ್ಬರನ್ನು ಮದುವೆಯಾದ ಯುವಕ

Profile Sushmitha Jain Mar 29, 2025 3:52 PM

ತೆಲಂಗಾಣ: ಬಹುತೇಕ ಯುವಕರು ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಹಳೆ ಮೈಸೂರು ಭಾಗದ ಯುವಕರು ಮದುವೆಯಾಗಲೆಂದು ಹಲವು ದೇವರ ಬಳಿ ಹರಕೆ ಹೊತ್ತುಕೊಂಡು, ನೂರಾರು ಕಿಲೋ ಮೀಟರ್‌ ಪಾದಯಾತ್ರೆ ಮಾಡಿದ ಉದಾಹರಣೆ ಕೂಡ ಇದೆ. ಪ್ರಮುಖವಾಗಿ ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಯುವ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲು ಹಲವು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಈ ಮಧ್ಯೆ ಇಲ್ಲೊಬ್ಬ ಯುವಕ ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆ (Man Falls In Love With 2 Women)ಯಾಗಿದ್ದಾನೆ. ಈ ಘಟನೆ ಕರ್ನಾಟಕದಲ್ಲಿ ನಡೆದಿದ್ದಲ್ಲ, ಬದಲಾಗಿ ಪಕ್ಕದ ತೆಲಂಗಾಣದ್ದು.

ತೆಲಂಗಾಣ(Telangana)ದ ಕೊಮರಾಮ್ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್ ಎಂಬುವನೊಬ್ಬ ಲಾಲ್ ದೇವಿ ಮತ್ತು ಝಲ್ಕರಿ ದೇವಿ ಎಂಬ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಸುಮಾರು ಮೂರು ವರ್ಷಗಳಿಂದಲೂ ಈ ತ್ರಿಕೋನ ಪ್ರೇಮ ಕತೆ ನಡೆಯುತ್ತಲೇ ಬಂದಿತ್ತು. ಹೀಗಾಗಿ, ಈ ಮೂವರು ಒಟ್ಟಿಗೆ ಒಂದೇ ದಿನ ಒಂದೇ ಮಂಟಪದಲ್ಲಿ ಮದುವೆಯಾಗುವ ತೀರ್ಮಾನ ಕೈಗೊಂಡಿದ್ದರು. ಸೂರ್ಯದೇವ್‌ ಇಬ್ಬರೂ ಯುವತಿಯರ ಕುಟುಂಬಸ್ಥರನ್ನು ಮನವೊಲಿಸಿ ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರು ಪ್ರೇಯಸಿಯರ ಹೆಸರನ್ನು ಮುದ್ರಿಸಿದ್ದ. ಈ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮದುವೆಯ ದಿನ ತೆಗೆದ ವಿಡಿಯೊವಂತೂ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮದುವೆಯ ವಿಡಿಯೊದಲ್ಲಿ ಇಬ್ಬರು ಯುವತಿಯರು ಸೂರ್ಯದೇವ್‌ನ ಕೈ ಹಿಡಿದು ಕುಳಿತಿರುವುದನ್ನು ನೋಡಬಹುದಾಗಿದೆ. ಯುವಕ ಇಬ್ಬರು ವಧುಗಳ ಕೈ ಹಿಡಿದು ಸಪ್ತಪದಿ ತುಳಿಯುವಾಗಿ ಹಿನ್ನೆಲೆಯಲ್ಲಿ ನಾದಸ್ವರ ಕೇಳಿ ಬರುತ್ತಿದೆ. ಸೂರ್ಯದೇವ್ ಲಾಲ್ ದೇವಿ ಮತ್ತು ಝಲ್ಕರಿ ದೇವಿಯನ್ನು ಪ್ರೀತಿಸಿದ ನಂತರ, ಮೂವರು ಒಟ್ಟಿಗೆ ವಾಸಿಸಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ. ಗ್ರಾಮದ ಹಿರಿಯರು ಆರಂಭದಲ್ಲಿ ಇದಕ್ಕೆ ಒಪ್ಪಿಗೆ ನೀಡದಿದ್ದರೂ, ಮೂವರೂ ಮನವೊಲಿಸಿದ ನಂತರ ಮದುವೆಗೆ ಬಂದು ವರ ಮತ್ತು ʼವಧುಗಳನ್ನುʼ ಆಶೀರ್ವದಿಸಿ ಊಟ ಮಾಡಿ ಹೋಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ

ತೆಲಂಗಾಣದಲ್ಲಿ ನಡೆದಿರುವ ವಿವಾಹವು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇಬ್ಬರನ್ನು ಮದುವೆಯಾಗುವ ಸೂರ್ಯದೇವ್‌ನ ಧೈರ್ಯವನ್ನು ಹೊಗಳಿದರೆ, ಇನ್ನು ಕೆಲವರು ಭಾರತದಲ್ಲಿ ಹಿಂದೂಗಳು ಬಹುಪತ್ನಿತ್ವವನ್ನು ಆಚರಿಸುವುದು ಕಾನೂನುಬಾಹಿರ ಎಂದು ಹೇಳಿದ್ದಾರೆ. “ಇಬ್ಬರು ಹೆಂಡಿರ ಮುದ್ದಿನ ಗಂಡನ ದಾಂಪತ್ಯ ಜೀವನ ಯಶಸ್ವಿಯಾಗುವುದೇ?” ಎಂದು ಕೆಲವರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಬಿಸಿಲಿನ ಶಾಖದಿಂದ ಕಾರನ್ನು ಕಾಪಾಡಲು ಮಾಲೀಕ ಮಾಡಿದ್ದೇನು ನೋಡಿ....

ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. 2021ರಲ್ಲಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಇನ್ನೊಬ್ಬ ವ್ಯಕ್ತಿ ಒಂದೇ 'ಮಂಟಪ'ದಲ್ಲಿ ಇಬ್ಬರು ಮಹಿಳೆಯರನ್ನು ವಿವಾಹವಾಗಿದ್ದ ಉದಾಹರಣೆಯೂ ಇದೆ. ಉಟ್ನೂರ್ ಮಂಡಲದಲ್ಲಿ ನಡೆದ ಈ ಸಮಾರಂಭವು ಮೂರು ಕುಟುಂಬಗಳ ಒಪ್ಪಿಗೆಯೊಂದಿಗೆ ನಡೆದಿತ್ತು ಎಂದು ವರದಿಗಳು ತಿಳಿಸಿವೆ. ಅದೇ ರೀತಿ 2022ರಲ್ಲಿ ಜಾರ್ಖಂಡ್‌ನ ಲೋಹರ್ದಾಗದಲ್ಲಿ ಒಬ್ಬ ವ್ಯಕ್ತಿ ತನ್ನ ಇಬ್ಬರು ಪ್ರೇಯಸಿಯರನ್ನು ವಿವಾಹವಾಗಿದ್ದ ಕುರಿತಾಗಿಯೂ ವರದಿಗಳಿವೆ.