ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NASA: ಮಂಗಳ ಗ್ರಹದಲ್ಲಿ ನೀರಿನ ಹರಿವಿನ ಪುರಾವೆ ನೀಡಿದ ನಾಸಾ

ನಾಸಾ ಇತ್ತೀಚೆಗೆ ಮಂಗಳ ಗ್ರಹದಲ್ಲಿ ನೀರಿನ ಪುರಾವೆಗಳನ್ನು ಪತ್ತೆಹಚ್ಚಿದೆ. ನಾಸಾದ ಕ್ಯೂರಿಯಾಸಿಟಿ ರೋವರ್ ನೀಡಿರುವ ಚಿತ್ರ ಇದಕ್ಕೆ ಸಾಕ್ಷಿ. ಕ್ಯೂರಿಯಾಸಿಟಿ ರೋವರ್ ತನ್ನ ಕ್ಯಾಮೆರಾ ಬಳಸಿಕೊಂಡು ಮಂಗಳ ಗ್ರಹದ ಗೇಲ್ ಕ್ರೇಟರ್‌ನಲ್ಲಿ ಹವಳ ಆಕಾರದ ಬಂಡೆಯು ಪ್ರಾಚೀನ ನೀರಿನ ಹರಿವನ್ನು ಸೂಚಿಸಿದೆ ಎಂದು ನಾಸಾ ತಿಳಿಸಿದೆ.

ಮಂಗಳ ಗ್ರಹದಲ್ಲಿ ನೀರು ಇತ್ತೇ?

ನವದೆಹಲಿ: ಮಂಗಳಗ್ರಹದಲ್ಲಿ (Mars) ನೀರಿನ ಪುರಾವೆಯನ್ನು (Water on mars) ಈಗ ನಾಸಾ (NASA) ಪತ್ತೆ ಹಚ್ಚಿದೆ. ಹಲವಾರು ಶತಕೋಟಿ ವರ್ಷಗಳಷ್ಟು ಹಳೆಯದಾದ ಹವಳ ಬಂಡೆಯನ್ನು (Coral Rocks) ನಾಸಾದ ಕ್ಯೂರಿಯಾಸಿಟಿ ರೋವರ್ ಶೋಧಿಸಿದೆ. ಗೇಲ್ ಕ್ರೇಟರ್‌ನಲ್ಲಿ ಕಂಡು ಬಂದಿರುವ ಹವಳದ ಆಕಾರದ ಈ ಬಂಡೆಯು ನೀರಿನ ಹರಿವನ್ನು ಸೂಚಿಸುತ್ತದೆ. ಕ್ಯೂರಿಯಾಸಿಟಿ ರೋವರ್ ತನ್ನ ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್ (Mars Hand Lens Imager) ಅನ್ನು ಬಳಸಿಕೊಂಡು ಇದನ್ನು ಕಂಡುಹಿಡಿದಿದೆ ಎಂದು ನಾಸಾ ತಿಳಿಸಿದೆ.

ಮಂಗಳ ಗ್ರಹದಲ್ಲಿ ನೀರಿದ್ದ ಸಾಕಷ್ಟು ಪುರಾವೆಗಳನ್ನು ಆರು ಚಕ್ರಗಳಿರುವ ರೋಬೋಟ್ ಕ್ಯೂರಿಯಾಸಿಟಿ ರೋವರ್ ಪತ್ತೆ ಮಾಡಿದೆ. ಇದು ಸಮುದ್ರದ ತಳದಲ್ಲಿ ಸಾಮಾನ್ಯವಾಗಿ ಕಂಡುಬರುವ ಹವಳವನ್ನು ಹೋಲುವ ಬಂಡೆಯನ್ನು ವೀಕ್ಷಿಸಲು ತನ್ನ ರೋಬೋಟಿಕ್ ತೋಳಿನ ಕೊನೆಯಲ್ಲಿದ್ದ ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್ (MAHLI) ಅನ್ನು ಬಳಸಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಹವಳ ಬಂಡೆಯು ಪುರಾತನ ನೀರಿನ ಹರಿವಿನಿಂದ ಸಂಗ್ರಹವಾದ ಖನಿಜ. ಇದು ಗಾಳಿ ಮತ್ತು ಮರಳಿನಿಂದ ರೂಪುಗೊಂಡಿದೆ. ಇದು ರೂಪುಗೊಳ್ಳಲು ಶತಕೋಟಿಗಿಂತಲೂ ಹೆಚ್ಚು ವರ್ಷಗಳು ಬೇಕಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಮಂಗಳ ಗ್ರಹದ ಮೇಲೆ ದೊಡ್ಡ ಘರ್ಷಣೆಯ ಜಲಾನಯನ ಪ್ರದೇಶವಾದ ಗೇಲ್ ಕ್ರೇಟರ್‌ನಲ್ಲಿ ಕಂಡು ಬಂದಿರುವ ಹೂವಿನ ಆಕಾರದ ಬಂಡೆಯು ಇಲ್ಲಿ ಜೀವಿಗಳು ಅಸ್ತಿತ್ವದಲ್ಲಿದೆ ಎಂಬುದನ್ನು ಸೂಚಿಸಿದೆ. ಸರಿಸುಮಾರು 1 ಇಂಚು ಅಗಲವಾಗಿರುವ ಈ ಬಂಡೆ ತಿಳಿ ಬಣ್ಣವನ್ನು ಹೊಂದಿದೆ.



ಇತ್ತೀಚೆಗೆ ಕ್ಯೂರಿಯಾಸಿಟಿಯು ಬಾಕ್ಸ್‌ವರ್ಕ್ ರಚನೆಗಳಿಂದ ತುಂಬಿದ್ದ ಪ್ರದೇಶದಲ್ಲಿ ಇಳಿದಿದ್ದು ಇಲ್ಲಿ ಶತಕೋಟಿ ವರ್ಷಗಳ ಹಿಂದೆ ನೀರಿತ್ತು ಎಂದು ನಂಬಲಾಗಿದೆ. ಇಲ್ಲಿನ ರಚನೆಗಳ ಅಧ್ಯಯನವು ಮಂಗಳ ಗ್ರಹದ ಭೂಗರ್ಭದಲ್ಲಿ ಜೀವಿಗಳು ಬದುಕಬಹುದೇ ಎನ್ನುವುದನ್ನು ಬಹಿರಂಗಪಡಿಸಬಹುದು. ಅಲ್ಲದೇ ಇದು ಗ್ರಹದಲ್ಲಿನ ವಾಸಯೋಗ್ಯ ಅವಧಿಯನ್ನು ಮತ್ತಷ್ಟು ವಿಸ್ತರಿಸುತ್ತದೆ ಎನ್ನುತ್ತಾರೆ ನಾಸಾ ವಿಜ್ಞಾನಿಗಳು.

ಇದನ್ನು ಓದಿ: Viral Video: ಮಕ್ಕಳನ್ನು ಶಾಲೆಗೆ ಬಿಡಲು ಮರೆತ ಗಂಡ- ಸಿಟ್ಟಿಗೆದ್ದ ಹೆಂಡ್ತಿ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ

ಕ್ಯೂರಿಯಾಸಿಟಿ ರೋವರ್

2012ರ ಆಗಸ್ಟ್ 5ರಂದು ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹವನ್ನು ತಲುಪಿತು. ಬಳಿಕ ಇದು ಗ್ರಹದ ಕುರಿತಾಗಿ ಒಂದೊಂದೇ ಅಂಶಗಳನ್ನು ಬಹಿರಂಗ ಪಡಿಸುತ್ತಿದೆ. ಮಂಗಳ ಗ್ರಹ ಜೀವಿಸಲು ಯೋಗ್ಯವಾಗಿದೆಯೇ ಎನ್ನುವುದನ್ನು ಕಂಡುಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಇದೀಗ 13 ವರ್ಷಗಳ ಅನಂತರ ವಿಜ್ಞಾನಿಗಳು ಇಲ್ಲಿ ನೀರಿನ ಕುರುಹನ್ನು ಪತ್ತೆ ಹಚ್ಚಿದ್ದು, ಇದೀಗ ಎಂಜಿನಿಯರ್‌ಗಳು ನಾಸಾ ರೋವರ್ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹಕ್ಕೆ ಕಳುಹಿಸಲಾದ ಅತಿದೊಡ್ಡ ಮತ್ತು ಅತ್ಯಂತ ಸಮರ್ಥ ರೋವರ್ ಆಗಿದ್ದು, ಇದನ್ನು ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿರುವ ಕ್ಯಾಲ್ಟೆಕ್ ನಿರ್ವಹಿಸುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ತಯಾರಿಸಿದೆ. ವಾಷಿಂಗ್ಟನ್‌ನಲ್ಲಿರುವ ನಾಸಾದ ವಿಜ್ಞಾನ ಮಿಷನ್ ನಿರ್ದೇಶನಾಲಯದ ಪರವಾಗಿ ಜೆಪಿಎಲ್ ಇದರ ಕಾರ್ಯಾಚರಣೆಯ ನಿರ್ವಹಣೆ ಮಾಡುತ್ತಿದೆ.