Viral Video: ಅಮೆರಿಕದಲ್ಲಿ ಕತ್ತಿ ಬೀಸಿದ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಪೊಲೀಸರು; ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಕತ್ತಿಯನ್ನು ಹಿಡಿದು ಆಡಿಸುತ್ತಿದ್ದ ಸಿಖ್ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮೃತನನ್ನು ಗುರ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಅಂದು ನಡೆದ ಘಟನೆಯ ರೋಚಕ ವಿಡಿಯೋ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಅಧಿಕಾರಿಯ ಬಾಡಿಕ್ಯಾಮ್‌ನಲ್ಲಿ ದಾಖಲಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆಯ ದೃಶ್ಯ -

ಲಾಸ್ ಏಂಜಲೀಸ್: ಇಲ್ಲಿನ (Los Angeles) ಕ್ರಿಪ್ಟೋ.ಕಾಮ್ ಅರೆನಾ ಬಳಿ 35 ವರ್ಷದ ವ್ಯಕ್ತಿಯೊಬ್ಬ ರಸ್ತೆಯ ಮಧ್ಯೆ 2 ಅಡಿ ಉದ್ದದ ಕತ್ತಿಯನ್ನು ಹಿಡಿದು ಆಡಿಸುತ್ತಿದ್ದ ಸಿಖ್ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದು (Shoot) ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮೃತನನ್ನು ಗುರ್‌ಪ್ರೀತ್ ಸಿಂಗ್ (Gurpreet Singh,) ಎಂದು ಗುರುತಿಸಲಾಗಿದೆ. ಅಂದು ನಡೆದ ಘಟನೆಯ ರೋಚಕ ವಿಡಿಯೋ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಅಧಿಕಾರಿಯ ಬಾಡಿಕ್ಯಾಮ್‌ನಲ್ಲಿ (Bodycam) ದಾಖಲಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಬೆಳಿಗ್ಗೆ 9ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಉದ್ದದ ಕತ್ತಿಯನ್ನು ಆಡಿಸುತ್ತಿರುವುದಾಗಿ ಪೊಲೀಸರಿಗೆ ಕರೆ ಬಂದಿತ್ತು. ಗುರ್‌ಪ್ರೀತ್ ಸಿಂಗ್, ತನ್ನ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ಅಪಾಯಕಾರಿಯಾಗಿ ಕತ್ತಿಯನ್ನು ಆಡಿಸುತ್ತಿದ್ದ. ಪೊಲೀಸ್ ಇಲಾಖೆಯ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಗುರ್‌ಪ್ರೀತ್ ಸಿಂಗ್ ತನ್ನ ನಾಲಿಗೆಯನ್ನು ಕತ್ತಿಯಿಂದ ಕತ್ತರಿಸುವಂತೆ ಭಾಸವಾಗುವ ದೃಶ್ಯ ಕಾಣಿಸಿದೆ. “ಅಧಿಕಾರಿಗಳು ಗುರ್‌ಪ್ರೀತ್‌ಗೆ ಕತ್ತಿಯನ್ನು ಕೆಳಗಿಡಲು ಹಲವು ಬಾರಿ ಆದೇಶಿಸಿದರು. ಆದರೆ, ಆತ ಆದೇಶವನ್ನು ಪಾಲಿಸಲಿಲ್ಲ. ಬಳಿಕ ಆತ ತನ್ನ ಕಾರಿನತ್ತ ತೆರಳಿ, ನೀರಿನ ಬಾಟಲಿಯನ್ನು ತೆಗೆದುಕೊಂಡು ಅಧಿಕಾರಿಗಳ ಮೇಲೆ ಎಸೆದ” ಎಂದು ಪೊಲೀಸರು ತಿಳಿಸಿದ್ದಾರೆ.
ಗುರ್‌ಪ್ರೀತ್ ತನ್ನ ಕಾರನ್ನು ಚಲಾಯಿಸುತ್ತಾ ಕಿಟಕಿಯಿಂದ ಕತ್ತಿ ಆಡಿಸುವುದನ್ನು ಮುಂದುವರಿಸಿದ್ದ. ಪೊಲೀಸರು ಆತನನ್ನು ಬೆನ್ನತ್ತಿದಾಗ, ಅಡ್ಡಾದಿಡ್ಡಿ ಗಾಡಿ ಚಲಾಯಿಸಿದ ಗುರ್‌ಪ್ರೀತ್, ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಷ್ಟೇಅಲ್ಲದೇ ಬಳಿಕ ಕಾರಿನಿಂದ ಇಳಿದು, ಕತ್ತಿ ಹಿಡಿದು ಅಧಿಕಾರಿಗಳ ಕಡೆಗೆ ಧಾವಿಸಿದ್ದಾನೆ. ಈ ವೇಳೆ ಎಷ್ಟೇ ತಡೆದರೂ ಮುಂದುವರಿದ ಆತನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇನ್ನೂ ಗಾಯಗೊಂಡು ಕೆಳಗುರುಳಿದ ಗುರ್‌ಪ್ರೀತ್‌ನನ್ನು ಆಸ್ಪತ್ರೆಗೆ ಕರೆದೊಯ್ದರೂ, ಆತ ಮೃತಪಟ್ಟಿದ್ದಾನೆ. ನಂತರ ಪೊಲೀಸರು ಕತ್ತಿಯನ್ನು ವಶಪಡಿಸಿಕೊಂಡು ಸಾಕ್ಷ್ಯವಾಗಿ ದಾಖಲಿಸಿದ್ದಾರೆ.
ಈ ಘಟನೆಯ ವಿಡಿಯೊ ಲಾಸ್ ಏಂಜಲೀಸ್‌ನಲ್ಲಿ ಸಾರ್ವಜನಿಕ ಸುರಕ್ಷತೆಯ ಕುರಿತಾದ ಚರ್ಚೆಗೆ ಕಾರಣವಾಗಿದೆ. ಪೊಲೀಸರ ಕಾರ್ಯಾಚರಣೆಯನ್ನು ಕೆಲವರು ಸಮರ್ಥಿಸಿದರೆ, ಇತರರು ಗುಂಡು ಹಾರಿಸುವ ಅಗತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇದನ್ನೂ ಓದಿ Japanese Ambassador: ಗುಜರಾತಿಯಲ್ಲಿ ಭಾಷಣ ಮಾಡಿದ ಜಪಾನ್ ರಾಯಭಾರಿ- ಈ ವಿಡಿಯೊ ಫುಲ್ ವೈರಲ್