ಹಾಸನ: ಕಚೇರಿ ಸಮಯ ಮುಗಿದ ನಂತರವೂ ಕೆಲಸ ಮಾಡಿಸುವ ಉದ್ದೇಶದಿಂದ ಸಿಬ್ಬಂದಿಯನ್ನು ಬ್ಯಾಂಕ್ ಒಳಗೇ ಮ್ಯಾನೇಜರ್ (manager) ಲಾಕ್ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ (Karnataka Grameen Bank) ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜುಲೈ 18ರಂದು ಸಂಜೆ ನಿಗದಿತ ಕೆಲಸದ ಸಮಯ ಮುಗಿದಿದ್ದರೂ, ಕಸ್ಟಮರ್ ಸರ್ವಿಸ್ ಅಸೋಸಿಯೇಟ್ (CSA) ಉದ್ಯೋಗಿಯನ್ನು ಹೊರಗೆ ಹೋಗಲು ಬಿಡದೆ, ಶಾಖೆಯ ಮುಖ್ಯ ಗೇಟ್‌ಗೆ ಮ್ಯಾನೇಜರ್ ಬೀಗ ಜಡಿದಿದ್ದಾರೆ.
ಸಂಜೆ 5 ಗಂಟೆಗೆ ಶಿಫ್ಟ್ ಮುಗಿದಿದ್ದರೂ, ಉದ್ಯೋಗಿ 6 ಗಂಟೆಯವರೆಗೂ ಹೆಚ್ಚುವರಿಯಾಗಿ ಕೆಲಸ ಮಾಡಿದ್ದರು. ನಂತರ ಮನೆಗೆ ತೆರಳಲು ಅನುಮತಿ ಕೇಳಿದಾಗ, ಹೋಗಬಾರದು ಎಂದು ಉದ್ಧಟತನ ತೋರಿದ್ದಾರೆ. ಉದ್ಯೋಗ ಒಪ್ಪಂದದ ಪ್ರಕಾರ ನಿಗದಿತ ಕೆಲಸ ಮುಗಿಸಿದ್ದೇನೆ ಎಂದು ಸಿಬ್ಬಂದಿ ವಾದಿಸಿದರೂ, "ಓವರ್‌ಟೈಮ್ ಮಾಡುವುದು ಕಡ್ಡಾಯ" ಎಂದು ಮ್ಯಾನೇಜರ್ ಬೆದರಿಸಿದ್ದಾರೆ.
ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಲಾಕ್ ತುಂಡಾಗಿ 40 ಅಡಿ ಮೇಲಿಂದ ಬಿದ್ದ ಯುವಕ; ಗಂಭೀರ ಗಾಯ! Video
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಉದ್ಯೋಗಿಯನ್ನು ಬಂಧಿಸಿಡುವುದು ಸ್ಪಷ್ಟವಾಗಿ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಕೇವಲ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಲು ಕಿರಿಯ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿರುವ ಇಂತಹ ಮ್ಯಾನೇಜರ್‌ಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕರು ಹಾಗೂ ಬ್ಯಾಂಕಿಂಗ್ ಒಕ್ಕೂಟಗಳು ಒತ್ತಾಯಿಸಿವೆ.