Nose Hair Waxing: ನೋಸ್ ಹೇರ್ ವ್ಯಾಕ್ಸ್ ಮಾಡೋ ಅಭ್ಯಾಸ ಇದ್ಯಾ? ಈ ವಿಡಿಯೊ ನೋಡಿದ್ರೆ ಶಾಕ್ ಆಗ್ತೀರಿ!
Nose hair waxing goes horribly wrong: ಧೂಳು, ಬ್ಯಾಕ್ಟೀರಿಯಾ ಮತ್ತು ಅಲರ್ಜಿಗಳನ್ನು ಫಿಲ್ಟರ್ ಮಾಡುವ ಮೂಲಕ ನಮ್ಮ ದೇಹವನ್ನು ರಕ್ಷಿಸುವಲ್ಲಿ ಮೂಗಿನ ಕೂದಲು ನಿರ್ಣಾಯಕ ಪಾತ್ರ ವಹಿಸುತ್ತದೆ. ಇದನ್ನು ತೆಗೆಯುವುದರಿಂದ ದೇಹ ಸೋಂಕಿಗೀಡಾಗಬಹುದು. ಇದೀಗ ಮಹಿಳೆಯೊಬ್ಬಳು ಮೂಗಿನೊಳಗಿರುವ ಬೇಡದ ಕೂದಲು ತೆಗೆಯಲು ವ್ಯಾಕ್ಸಿಂಗ್ ಮಾಡುವ ಸಮಯದಲ್ಲಿ ಮೂರ್ಛೆ ಹೋದ ಘಟನೆ ನಡೆದಿದೆ.


ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಮುಖದಲ್ಲಿನ ಅನಗತ್ಯ ಕೂದಲು ತೆಗೆಯಲು ವ್ಯಾಕ್ಸಿಂಗ್ ಮಾಡಿಸುತ್ತಾರೆ. ಕೈ, ಕಾಲುಗಳಿಗೂ ವ್ಯಾಕ್ಸಿಂಗ್ ಮಾಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ಮೂಗಿನೊಳಗಿರುವ ಕೂದಲು ತೆಗೆಯುವುದಕ್ಕಾಗಿ ವ್ಯಾಕ್ಸಿಂಗ್ ಮಾಡುವ ಸಮಯದಲ್ಲಿ ಮೂರ್ಛೆ ಹೋದ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮೂಗಿನ ಕೂದಲು ವ್ಯಾಕ್ಸಿಂಗ್‌ನ (Nose Hair waxing) ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ (Viral Video), ಮಹಿಳೆಯೊಬ್ಬಳು ಮೂಗಿನ ಕೂದಲು ತೆಗೆಯಲು ಪ್ರಯತ್ನಿಸಿದ್ದಾಳೆ. ಸ್ಟ್ರಿಪ್ ತೆಗೆಯುವಾಗ ಅವಳು ತೀವ್ರವಾಗಿ ನಡುಗಲು ಪ್ರಾರಂಭಿಸಿದ್ದಾಳೆ. ಇದು ಕೂದಲು ತೆಗೆಯುವ ವಿಧಾನದ ಅಪಾಯಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂಗಿನ ಕೂದಲು ತೆಗೆಯುವುದು ಸೇರಿದಂತೆ ಅಸಾಂಪ್ರದಾಯಿಕ ವ್ಯಾಕ್ಸಿಂಗ್ ಅಭ್ಯಾಸಗಳ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಇದು ಎತ್ತಿ ತೋರಿಸುತ್ತದೆ.
ನಾವು ಉಸಿರಾಡುವ ಗಾಳಿಯಿಂದ ಧೂಳು, ಬ್ಯಾಕ್ಟೀರಿಯಾ ಮತ್ತು ಅಲರ್ಜಿಗಳನ್ನು ಫಿಲ್ಟರ್ ಮಾಡುವ ಮೂಲಕ ನಮ್ಮ ದೇಹವನ್ನು ರಕ್ಷಿಸುವಲ್ಲಿ ಮೂಗಿನ ಕೂದಲು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಕೂದಲನ್ನು ತೆಗೆದುಹಾಕುವುದರಿಂದ ಈ ರಕ್ಷಣಾತ್ಮಕ ವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು. ಇದರಿಂದಾಗಿ ಸೋಂಕುಗಳು ಮತ್ತು ಅಲರ್ಜಿಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆಯಿದೆ.
ವಿಡಿಯೊ ವೀಕ್ಷಿಸಿ:
ಮೂಗಿನ ಕೂದಲನ್ನು ವ್ಯಾಕ್ಸಿಂಗ್ ಮಾಡುವುದರಿಂದ ಹಲವಾರು ತೊಡಕುಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಮೂಗಿನ ಒಳಗಿನ ಚರ್ಮವು ಅತ್ಯಂತ ಸೂಕ್ಷ್ಮವಾಗಿದ್ದು, ವ್ಯಾಕ್ಸಿಂಗ್ ಸಮಯದಲ್ಲಿ ಸಣ್ಣ ಗಾಯಗಳನ್ನು ಉಂಟುಮಾಡಬಹುದು. ಇದು ಬ್ಯಾಕ್ಟೀರಿಯಾಗಳಿಗೆ ಪ್ರವೇಶ ದ್ವಾರಗಳಾಗಿ ಪರಿಣಮಿಸಿ, ಸೋಂಕುಗಳಿಗೆ ಕಾರಣವಾಗಬಹುದು. ಅಲ್ಲದೆ, ಕೂದಲು ಒಳಮುಖವಾಗಿ ಬೆಳೆಯಬಹುದು. ಇದು ನೋವು ಮತ್ತು ಊತವನ್ನು ಉಂಟುಮಾಡಬಹುದು. ಬಿಸಿ ಮೇಣದ ಬಳಕೆಯು ಮೂಗಿನ ಚರ್ಮವನ್ನು ಸುಡಬಹುದು ಅಥವಾ ಕಿರಿಕಿರಿಗೊಳಿಸಬಹುದು. ಪ್ರಕರಣ ತೀವ್ರವಾದರೆ, ವಿಪರೀಕ ನೋವು ಅಥವಾ ಆಘಾತವನ್ನು ಅನುಭವಿಸಬಹುದು, ಕೆಲವೊಮ್ಮೆ ಮೂರ್ಛೆ ಹೋಗಬಹುದು.
ಮೂಗಿನ ಕೂದಲನ್ನು ಸ್ವಚ್ಛವಾಗಿಡಲು ಬಯಸುವವರಿಗೆ, ಸುರಕ್ಷಿತ ಪರ್ಯಾಯಗಳನ್ನು ಶಿಫಾರಸು ಮಾಡಲಾಗುತ್ತದೆ. ಸಣ್ಣ ಕತ್ತರಿ ಅಥವಾ ಟ್ರಿಮ್ಮರ್‌ಗಳನ್ನು ಬಳಸುವುದರಿಂದ ಕೂದಲನ್ನು ಸಂಪೂರ್ಣವಾಗಿ ತೆಗೆಯದೆ, ಕಡಿಮೆ ಮಾಡಬಹುದು. ಇದರಿಂದಾಗಿ ಮೂಗಿನ ಕೂದಲಿನ ರಕ್ಷಣಾತ್ಮಕ ಕಾರ್ಯವನ್ನು ಸಂರಕ್ಷಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೂಗಿನ ಕೂದಲನ್ನು ವ್ಯಾಕ್ಸಿಂಗ್ ಮಾಡುವುದು ಜನಪ್ರಿಯತೆಯನ್ನು ಗಳಿಸುತ್ತಿದ್ದರೂ, ನೋವು, ಊತ ಮತ್ತು ಸೋಂಕು ಸೇರಿದಂತೆ ಗಮನಾರ್ಹ ಅಪಾಯಗಳನ್ನು ಇದು ಒಡ್ಡುತ್ತದೆ. ಈ ತೊಡಕುಗಳಿಂದ ಪಾರಾಗಲು ಮೂಗಿನ ಕೂದಲನ್ನು ನಿರ್ವಹಿಸಲು ಸುರಕ್ಷಿತ ವಿಧಾನಗಳನ್ನು ಆರಿಸಿಕೊಳ್ಳುವುದು ಸೂಕ್ತ.
ಇದನ್ನೂ ಓದಿ: Viral Video: ಝುಯ್ಯನೆ... ಗಾಳಿಯಲ್ಲಿ ತೇಲಿ ಬಂದು ಫುಡ್ ಡೆಲಿವರಿ ಮಾಡ್ತಾರೆ ಇವ್ರು! ವಿಡಿಯೊ ಫುಲ್ ವೈರಲ್