ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ವೇದಿಕೆ ಮೇಲೆ ನಗುನಗುತ್ತ ಹೆಜ್ಜೆ ಹಾಕಿದ ಮೋದಿ, ಪುಟಿನ್; ಪ್ರೇಕ್ಷಕನಂತೆ ನಿಂತಿದ್ದ ಪಾಕ್ ಪ್ರಧಾನಿ ಫೋಟೊ ವೈರಲ್

ಮೋದಿ ಮತ್ತು ಪುಟಿನ್ ಒಂದೇ ಕಾರಿನಲ್ಲಿ ದ್ವಿಪಕ್ಷೀಯ ಮಾತುಕತೆಗೆ ತೆರಳಿದ ದೃಶ್ಯ ಹಾಗೂ ಕ್ಸಿ ಜಿನ್‌ಪಿಂಗ್ ಜತೆಗಿನ ಸೌಹಾರ್ದ ಮಾತುಕತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೇಳೆ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, ಮೋದಿ ಮತ್ತು ಪುಟಿನ್ ಒಟ್ಟಿಗೆ ಚರ್ಚಿಸುತ್ತಿರುವುದನ್ನು ದೂರದಿಂದ ನೋಡುತ್ತಿದ್ದ ದೃಶ್ಯವೂ ಗಮನ ಸೆಳೆದಿದೆ. ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಪುಟಿನ್ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬೀಜಿಂಗ್‌: ಚೀನಾದ (China) ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (Shanghai Cooperation Organization) ಶೃಂಗಸಭೆಯು ಭಾರತ (India), ಚೀನಾ, ರಷ್ಯಾ (Russia) ನಾಯಕರ ಒಗ್ಗಟ್ಟಿನ ಕ್ಷಣಗಳಿಗೆ ಸಾಕ್ಷಿಯಾಗಿದೆ. ಏಳು ವರ್ಷಗಳ ಬಳಿಕ ಚೀನಾಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಶೃಂಗಸಭೆಯು ಅಮೆರಿಕದ ಸುಂಕ ನೀತಿಗಳಿಗೆ ಪ್ರತಿರೋಧವಾಗಿ ಭಾರತ-ಚೀನಾ-ರಷ್ಯಾ ಒಕ್ಕೂಟದ ಬಲವನ್ನು ಎತ್ತಿ ತೋರಿಸಿದೆ.

ಮೋದಿ ಮತ್ತು ಪುಟಿನ್ ಒಂದೇ ಕಾರಿನಲ್ಲಿ ದ್ವಿಪಕ್ಷೀಯ ಮಾತುಕತೆಗೆ ತೆರಳಿದ ದೃಶ್ಯ ಹಾಗೂ ಕ್ಸಿ ಜಿನ್‌ಪಿಂಗ್ ಜತೆಗಿನ ಸೌಹಾರ್ದ ಮಾತುಕತೆಯ ಫೋಟೊ, ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೇಳೆ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, ಮೋದಿ ಮತ್ತು ಪುಟಿನ್ ಒಟ್ಟಿಗೆ ಚರ್ಚಿಸುತ್ತಿರುವುದನ್ನು ದೂರದಿಂದ ನೋಡುತ್ತಿದ್ದ ದೃಶ್ಯವೂ ಗಮನ ಸೆಳೆದಿದೆ. ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪುಟಿನ್ ಜತೆಗಿನ ಫೋಟೋವನ್ನು ಹಂಚಿಕೊಂಡು, "ಪುಟಿನ್ ಅವರನ್ನು ಭೇಟಿಯಾಗುವುದು ಯಾವಾಗಲೂ ಆನಂದದಾಯಕ" ಎಂದು ಬರೆದಿದ್ದಾರೆ.



ಈ ಸುದ್ದಿಯನ್ನು ಓದಿ: Viral Video: ಪಾಕ್‌ನಲ್ಲಿ ಮೊಳಗಿತು ಗಣಪತಿ ಬಪ್ಪಾ ಮೋರಯಾ

ಶೃಂಗಸಭೆಯಲ್ಲಿ ಮೋದಿ ಭಯೋತ್ಪಾದನೆಯನ್ನು ಕಟು ಶಬ್ದದಲ್ಲಿ ಖಂಡಿಸಿದರು. 2025ರ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ಉಲ್ಲೇಖಿಸಿ, "ಭಯೋತ್ಪಾದನೆಯು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಮಾನವ ಜನಾಂಗಕ್ಕೆ ಸವಾಲಾಗಿದೆ" ಎಂದು ಒತ್ತಿ ಹೇಳಿದರು. ಈ ದಾಳಿಯನ್ನು ಟಿಯಾಂಜಿನ್ ಘೋಷಣೆಯಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ, ದಾಳಿಯ ರೂವಾರಿ, ಸಂಘಟಕರು ಮತ್ತು ಪ್ರಾಯೋಜಕರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿವೆ.

ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆಯಲ್ಲಿ ಗಡಿ ಶಾಂತಿ, ಆರ್ಥಿಕ ಸಂಬಂಧಗಳ ಸುಧಾರಣೆ ಕುರಿತು ಚರ್ಚೆಯಾಯಿತು. ಕ್ಸಿ ಜಿನ್‌ಪಿಂಗ್ ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ $1.4 ಬಿಲಿಯನ್ ಸಾಲದ ಭರವಸೆ ನೀಡಿದ್ದಾರೆ. ಈ ವೇಳೆ ಮೋದಿ ಭಾರತದ ‘ಸುರಕ್ಷತೆ, ಸಂಪರ್ಕ, ಅವಕಾಶ’ ಗಳ ಬಗ್ಗೆ ಒತ್ತಿ ಹೇಳಿದರು.

ಈ ವೇಳೆ ಭಯೋತ್ಪಾದನೆಯ ವಿರುದ್ಧ ದ್ವಂದ್ವ ನೀತಿಯನ್ನು ತೊರೆಯಬೇಕೆಂದು ಮೋದಿ ಕರೆ ನೀಡಿದ್ದಾರೆ. ಈ ಶೃಂಗಸಭೆಯು ಜಾಗತಿಕ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಕರೆಯನ್ನು ಇನ್ನಷ್ಟು ಬಲಪಡಿಸಿತು ಎಂದು ತಿಳಿದುಬಂದಿದೆ.