ಜೈಪುರ, ಆ. 23: ಶಿಕ್ಷಕರೆಂದರೆ ದೇವರ ಸಮಾನ ಎನ್ನುವ ಮಾತಿದೆ. ನಮ್ಮ ಜೀವನವನ್ನು ತಿದ್ದಿ ತೀಡುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಮುಖ್ಯ. ಆದರೆ ಇತ್ತೀಚಿಗೆ ಕೆಲವು ಶಿಕ್ಷಕರು ಇದನ್ನೆಲ್ಲ ಮರೆತು ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ತಮ್ಮ ಹುದ್ದೆಗಿರುವ ಗೌರವವನ್ನೂ ಮರೆತು ಕೀಳಾಗಿ ವರ್ತಿಸುತ್ತಾರೆ. ಅದೇ ರೀತಿಯ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರ ಜತೆ ಅಣೆಕಟ್ಟಿನಲ್ಲಿ ಈಜಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ಅವರನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಘಟನೆಯ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ.
ಅಲ್ವಾರ್‌ನ ಸರ್ಕಾರಿ ಶಾಲೆಯ ಪ್ರಾಂಶುಪಾಲ 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿನಿಯರ ಜತೆ ಡ್ಯಾಮ್‌ನಲ್ಲಿ ಸ್ನಾನ ಮಾಡಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಜತೆಗೆ ತನಿಖೆ ಆದೇಶ ಹೊರಡಿಸಲಾಗಿದೆ.
ಅಲ್ವಾರ್‌ನಲ್ಲಿ ವಿದ್ಯಾರ್ಥಿನಿಯರ ಜತೆ ಈಜಾಡಿದ ಪ್ರಾಂಶುಪಾಲ:
ಘಟನೆ ವಿವರ
ಅಲ್ವಾರ್ ಜಿಲ್ಲಾ ಶಿಕ್ಷಣಾಧಿಕಾರಿ ಮನೋಜ್ ಶರ್ಮಾ ಮಾತನಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಸ್ಥಳೀಯ ನಿವಾಸಿಗಳು ಪ್ರಾಂಶುಪಾಲರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾಗಿ ಹೇಳಿದ್ದಾರೆ. ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಈ ಘಟನೆ ಆಗಸ್ಟ್ 15ರಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಂತರ ನಡೆದಿದೆ ಎಂದು ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರಾಂಶುಪಾಲ ಸುಮಾರು 200 ವಿದ್ಯಾರ್ಥಿಗಳನ್ನು ಶಾಲೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಭದಾಜ್ ಬಳಿಯ ಡ್ಯಾಮ್‌ಗೆ ಪಿಕ್ನಿಕ್‌ಗೆ ಕರೆದೊಯ್ದಿದ್ದರು. ಈ ವೇಳೆ ಅವರೊಂದಿಗೆ ಯಾವುದೇ ಶಿಕ್ಷಕಿ ಇರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಟೇರಿಂಗ್ ಬಿಟ್ಟು ಟ್ರಕ್ ಮೇಲೆ ಕುಣಿದಾಡಿದ ಚಾಲಕ! ಬ್ಯುಸಿ ರಸ್ತೆ ಮಧ್ಯೆಯೇ ನಡೆದ ಹುಚ್ಚಾಟದ ವಿಡಿಯೊ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಪ್ರಾಂಶುಪಾಲರ ವಿದ್ಯಾರ್ಥಿನಿಯರೊಂದಿಗೆ ಸ್ನಾನ ಮಾಡುತ್ತಿರುವುದು ಕಂಡು ಬಂದಿದೆ. ಈಜು ಕಲಿಸುವ ನೆಪದಲ್ಲಿ ಪ್ರಾಂಶುಪಾಲ ಕೆಲವು ಹುಡುಗಿಯರನ್ನು ತೋಳುಗಳಲ್ಲಿ ಎತ್ತಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇನ್ನು ಅವರು ಈಜಾಡಿದ ಸ್ಥಳದ ಬಗ್ಗೆಯೂ ಕಳವಳ ವ್ಯಕ್ತವಾಗಿದ್ದು, ಅಣೆಕಟ್ಟಿನ ಒಡ್ಡು ಕೇವಲ ಐದರಿಂದ ಆರು ಅಡಿ ಅಗಲವಿದ್ದು, ಮಕ್ಕಳು ಮುಳುಗಿ ಸಾವನ್ನಪ್ಪಿದ ಘಟನೆಗಳು ಹಿಂದೆ ನಡೆದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಅಪಾಯದ ಹಿನ್ನೆಲೆಯಲ್ಲಿ ಈ ಡ್ಯಾಮ್‌ಗೆ ಪ್ರವೇಶವನ್ನು ಸುಮಾರು 4 ವರ್ಷಗಳಿಂದ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಹುಲಿಗಳ ಓಡಾಡುತ್ತಿರುವ ಮಾಹಿತಿಯೂ ಲಭ್ಯವಾಗಿದೆ.
ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿಗಳಿಂದ ಎಣ್ಣೆ ಪಾರ್ಟಿ!
ಸ್ಥಳೀಯರ ಪ್ರಕಾರ, ಯಾವುದೇ ಸುರಕ್ಷತಾ ವ್ಯವಸ್ಥೆ, ಲೈಫ್ ಜಾಕೆಟ್ ಇಲ್ಲದೆ ಸುಮಾರು 200 ವಿದ್ಯಾರ್ಥಿಗಳನ್ನು ನೀರಿಗೆ ಇಳಿಸಿರುವ ಆರೋಪವೂ ಕೇಳಿ ಬಂದಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಶಾಲೆಗೆ ನುಗ್ಗಿದ ಸ್ಥಳೀಯರು ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಾಂಶುಪಾಲರನ್ನು ತನಿಖೆಗೆ ಒಳಪಡಿಸಲಾಗಿದೆ.
ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.