ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವೈರಲ್ ಆಗಿರುವ ಆನೆಯ ನೃತ್ಯದ ವಿಡಿಯೊದ ಹಿಂದಿನ ಅಸಲಿತ್ತೇನು? ಇಲ್ಲಿದೆ ಡಿಟೇಲ್ಸ್‌

Viral Elephant dancing: ಸೀರೆಯುಟ್ಟ ಯುವತಿಯೊಬ್ಬಳು ಸುಂದರವಾದ ಸಂಗೀತದೊಂದಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಹಿಂದೆ ನಿಂತಿರುವ ಆನೆಯು ತನ್ನ ಸೊಂಡಿಲು ಮತ್ತು ಕಿವಿಗಳನ್ನು ತಿರುಗಿಸುತ್ತಾ ತಾನು ಕುಣಿದಂತೆ ವರ್ತಿಸಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಆನೆ ನಿಜವಾಗಿಯೂ ನೃತ್ಯ ಮಾಡುತ್ತಿಲ್ಲ. ಅದರ ಸ್ಥಿತಿ ಬಗ್ಗೆ ಐಎಫ್ಎಸ್ ಅಧಿಕಾರಿಯೊಬ್ಬರು ಹೇಳಿದ್ದು ಹೀಗೆ..

ವೈರಲ್ ಆಗಿರುವ ಆನೆಯ ನೃತ್ಯದ ವಿಡಿಯೊದ ಹಿಂದಿನ ಅಸಲಿತ್ತೇನು?

Priyanka P Priyanka P Aug 14, 2025 3:59 PM

ನವದೆಹಲಿ: ಪ್ರಾಣಿಗಳಿಗೆ ಮನುಷ್ಯರಿಂದ ಯಾವುದೇ ಆಪತ್ತು ಇಲ್ಲ ಎಂದು ಖಾತ್ರಿಯಾದರೆ ಅವುಗಳಷ್ಟು ಫ್ರೆಂಡ್ಲಿ ಮತ್ತೊಂದಿಲ್ಲ. ಮನುಷ್ಯರ ಜೊತೆ ಒಮ್ಮೆ ಬೆರೆತರೆ ಸಾಕು ಅವುಗಳು ನಮಗೆ ತೋರುವ ಪ್ರೀತಿ ಅಷ್ಟಿಷ್ಟಲ್ಲ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಯುವತಿಯೊಬ್ಬಳು ನೃತ್ಯ ಮಾಡುತ್ತಿದ್ದರೆ ಆನೆ ಕೂಡ ಸಂಗೀತಕ್ಕೆ ಕುಣಿದಿದ್ದ ವಿಡಿಯೊ ಭಾರಿ ವೈರಲ್(Viral Video) ಆಗಿತ್ತು. ಆ ವಿಡಿಯೊ ನೋಡಿದ ಅನೇಕರು ದಿಲ್‌ ಖುಷ್‌ ಆಗಿ ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದರು. ಆದರೆ ಇದೀಗ ಈ ವಿಡಿಯೊದ ಅಸಲಿಯತ್ತು ಬಯಲಾಗಿದೆ.

ಸೀರೆಯುಟ್ಟ ಯುವತಿಯೊಬ್ಬಳು ಸುಂದರವಾದ ಸಂಗೀತದೊಂದಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಹಿಂದೆ ನಿಂತಿರುವ ಆನೆಯು ತನ್ನ ಸೊಂಡಿಲು ಮತ್ತು ಕಿವಿಗಳನ್ನು ತಿರುಗಿಸುತ್ತಾ ತಾನು ಕುಣಿದಂತೆ ವರ್ತಿಸಿದೆ. ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿತು. ದೈತ್ಯ ಗಾತ್ರದ ಆನೆಯನ್ನೂ ಹುಡುಗಿಯರು ಕುಣಿಸಬಲ್ಲರು ಅಂತೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ವಿಡಿಯೊ ಇಲ್ಲಿದೆ

ಕೆಲವರು ಆನೆಯ ಸನ್ನೆಯು ಅದು ಒತ್ತಡದಲ್ಲಿದೆ ಎಂದು ಸೂಚಿಸುತ್ತದೆ ಎಂದು ಹೇಳುವ ಮೂಲಕ ಗಮನಸೆಳೆದರು. ಈ ವಿಡಿಯೊ ನನ್ನ ದಿನವನ್ನು ಸುಂದರಗೊಳಿಸಿದೆ ಎಂದು ಒಬ್ಬ ಬಳಕೆದಾರರೊಬ್ಬರು ತಿಳಿಸಿದರು. ಯುವತಿಯರು ನೃತ್ಯ ಮಾಡುವುದರಲ್ಲಿ ನಿಪುಣಳಾಗಿರಬಹುದು, ಆದರೆ ಆನೆಯ ನೃತ್ಯ ಅತ್ಯುತ್ತಮವಾಗಿದೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದರು.

ವ್ಯಕ್ತಿಯೊಬ್ಬರು ಈ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಾ, ಇದು ನೃತ್ಯವಲ್ಲ. ಇದು ಆನೆಯ ಮಾನಸಿಕ ಸ್ಥಿತಿಯಾಗಿದೆ ಅಂದರೆ ಅದು ಒತ್ತಡ ಮತ್ತು ಖಿನ್ನತೆಯಲ್ಲಿದೆ. ಯಾಕೆಂದರೆ ಆನೆಯು ಸರಪಳಿಯಲ್ಲಿ ಬಂಧಿಸಲ್ಪಟ್ಟಿದೆ. ಅದು ನೃತ್ಯ ಮಾಡುತ್ತಿಲ್ಲ ಎಂದು ಹೇಳಿದರು.

ಇದೇ ರೀತಿಯ ಘಟನೆ

ಕಳೆದ ವರ್ಷ, ಆನೆಯೊಂದು ಇದೇ ರೀತಿ ಸಂಗೀತಕ್ಕೆ ಕುಣಿಯುತ್ತಿರುವ ವಿಡಿಯೊ ವೈರಲ್ ಆಗಿತ್ತು. ವಿಡಿಯೊದಲ್ಲಿ ಇಬ್ಬರು ಯುವತಿಯರು ಭರತನಾಟ್ಯ ಪ್ರದರ್ಶಿಸುತ್ತಿದ್ದರೆ ಹಿಂದಿನಿಂದ ಆನೆ ಕೂಡ ಅತ್ತಿತ್ತ ತೂಗಾಡುತ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್, ಆನೆ ಒತ್ತಡದಿಂದ ನೃತ್ಯ ಮಾಡುತ್ತಿರುವಂತೆ ಕಾಣುತ್ತದೆ ಎಂದು ಸ್ಪಷ್ಟಪಡಿಸಿದರು. ನಂತರದ ಪೋಸ್ಟ್‌ನಲ್ಲಿ, ಅಧಿಕಾರಿ ಬೇರೊಂದು ವಿಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಅದರ ಉದಾಹರಣೆಯನ್ನು ಸಹ ನೀಡಿದ್ದಾರೆ.

ವಿಡಿಯೊ ವೀಕ್ಷಿಸಿ:



“ನಾನು ಕೆಲವು ತಿಂಗಳ ಹಿಂದೆ ಈ ಹೆಣ್ಣು ಆನೆಯ ದೃಶ್ಯವನ್ನು ಚಿತ್ರೀಕರಿಸಿದ್ದೇನೆ. ಅದು ಮರಿಗೆ ಜನ್ಮ ನೀಡಿತು. ನಾವು ಅಲ್ಲಿದ್ದ ಕಾರಣ ಅದು ಒತ್ತಡಕ್ಕೊಳಗಾಗಿತ್ತು. ನಾವು ಪ್ರಾಣಿಗಳಿಗೆ ಮಾನವೀಯತೆ ಕಲಿಸುವ ಅಗತ್ಯವಿಲ್ಲ. ಅವುಗಳಿಗೆ ತಮ್ಮದೇ ಆದ ಜೀವನ ವಿಧಾನ ಮತ್ತು ಅಭಿವ್ಯಕ್ತಿ ಇದೆ” ಎಂದು ಅವರು ಬರೆದಿದ್ದಾರೆ. ಅಧಿಕಾರಿ ಹಂಚಿಕೊಂಡಿರುವ ವಿಡಿಯೊದಲ್ಲಿ ತಾಯಿ ಆನೆಯು ಸೊಂಡಿಲನ್ನು ಅತ್ತಿಂದಿತ್ತ ಇತ್ತಿಂದತ್ತ ಸೊಂಡಿಲನ್ನು ಬೀಸುತ್ತಿರುವುದನ್ನು ಕಾಣಬಹುದು.

ವಿಡಿಯೊ ವೀಕ್ಷಿಸಿ: