ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬೀದಿ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ; ವಿಡಿಯೋ ವೈರಲ್‌

ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ ಇದೀಗ ವಿಡಿಯೋ ಒಂದು ವೈರಲ್‌ ಆಗುತ್ತಿದ್ದು, ಉತ್ತರ ಪ್ರದೇಶದ ಝಾನ್ಸಿಯಲ್ಲಿ, ಸ್ಕೂಟಿ ಸವಾರನೊಬ್ಬ ನಾಯಿಯನ್ನು ಹಗ್ಗಕ್ಕೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದೆ.

ಬೀದಿ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ!

Vishakha Bhat Vishakha Bhat Aug 14, 2025 4:02 PM

ಲಖನೌ: ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ ಇದೀಗ ವಿಡಿಯೋ ಒಂದು ವೈರಲ್‌ ಆಗುತ್ತಿದ್ದು, ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ, ಸ್ಕೂಟಿ (Viral Video) ಸವಾರನೊಬ್ಬ ನಾಯಿಯನ್ನು ಹಗ್ಗಕ್ಕೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದೆ. ಆ ನಾಯಿ ಸ್ಥಳೀಯ ಮಕ್ಕಳನ್ನು ಕಚ್ಚುತ್ತಿದೆ ಎಂದು ವ್ಯಕ್ತಿ ಆರೋಪಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಝಾನ್ಸಿಯ ರೈಲ್ವೆ ಕಾಲೋನಿಯಿಂದ ವರದಿಯಾಗಿರುವ ಈ 30 ಸೆಕೆಂಡುಗಳ ವೀಡಿಯೊದಲ್ಲಿ ಇಬ್ಬರು ಪುರುಷರು ಸ್ಕೂಟಿ ಸವಾರಿ ಮಾಡುವುದನ್ನು ತೋರಿಸಲಾಗಿದೆ. ನಾಯಿಯನ್ನು ಉದ್ದನೆಯ ಹಗ್ಗಕ್ಕೆ ಕಟ್ಟಲಾಗಿದ್ದು, ಬೀದಿಯಲ್ಲಿ ಎಳೆದುಕೊಂಡು ಹೋಗಿದ್ದಾರೆ.

ಹಲವು ಪ್ರಾಣಿ ಪ್ರಿಯರು ಮಧ್ಯಪ್ರವೇಶಿಸಿ ಈ ಘಟನೆಯನ್ನು ಖಂಡಿಸಿದ್ದಾರೆ. ಆದರೆ ಸವಾರರು ಮಾತ್ರ ಸ್ಕೂಟಿ ನಿಲ್ಲಿಸಲಿಲ್ಲ. ಸ್ಕೂಟಿ ಸವಾರ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಾ, "ಈ ನಾಯಿ ನಮ್ಮ ಪ್ರದೇಶದಲ್ಲಿ ಮಕ್ಕಳನ್ನು ಕಚ್ಚುತ್ತಿದೆ, ಅದಕ್ಕಾಗಿಯೇ ನಾವು ಈ ರೀತಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಬೀದಿನಾಯಿ ಸ್ಥಳಾಂತರ ತೀರ್ಪಿನ ಮಧ್ಯೆ ಈ ಘಟನೆ ನಡೆದಿದ್ದು, ಇದು ದೇಶಾದ್ಯಂತ ಸಾಕುಪ್ರಾಣಿ ಪ್ರಿಯರನ್ನು ಕೆರಳಿಸಿದೆ.

ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ನಾಗರಿಕ ಅಧಿಕಾರಿಗಳಿಗೆ ಬೀದಿನಾಯಿಗಳನ್ನು ತಕ್ಷಣ ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿ ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಈ ಪ್ರಕ್ರಿಯೆಯನ್ನು ವಿರೋಧಿಸಿದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೊಳ್ಳುವುದಾಗಿ ಹೇಳಿದೆ. ರೇಬೀಸ್‌ಗೆ ಕಾರಣವಾಗುವ ನಾಯಿ ಕಡಿತದ ಅಪಾಯವನ್ನು ಪರಿಹರಿಸಲು ತಕ್ಷಣದ ಕ್ರಮಗಳು ಅಗತ್ಯವೆಂದು ಕೋರ್ಟ್‌ ಹೇಳಿದೆ.

ಈ ಸುದ್ದಿಯನ್ನೂ ಓದಿ: Stray Dog Protest: ಬೀದಿ ನಾಯಿ ವಿರುದ್ಧ ಕ್ರಮ; ಪ್ರಾಣಿ ಹಕ್ಕುಗಳ ಹೋರಾಟಗಾರರು-ಪೊಲೀಸರ ನಡುವೆ ಗುದ್ದಾಟ: ಇಲ್ಲಿದೆ ವಿಡಿಯೊ

ಈ ಆದೇಶವು "ನಮ್ಮ ಸ್ವಾರ್ಥಕ್ಕಾಗಿ ಅಲ್ಲ, ಬದಲಾಗಿ ಜನರಿಗಾಗಿ" ಎಂದು ಒತ್ತಿ ಹೇಳಿದ ನ್ಯಾಯಾಲಯ, "ಯಾವುದೇ ರೀತಿಯ ಭಾವನೆಗಳನ್ನು ಇದರಲ್ಲಿ ಒಳಗೊಳ್ಳಲಾಗುವುದಿಲ್ಲ" ಎಂದು ಹೇಳಿದೆ. "ಶಿಶುಗಳು ಮತ್ತು ಚಿಕ್ಕ ಮಕ್ಕಳು, ಯಾವುದೇ ಕಾರಣಕ್ಕೂ, ರೇಬೀಸ್‌ಗೆ ಬಲಿಯಾಗಬಾರದು ಎಂದು ಆದೇಶಿಸಿದೆ. ಆರರಿಂದ ಎಂಟು ವಾರಗಳಲ್ಲಿ ಸುಮಾರು 5,000 ನಾಯಿಗಳಿಗೆ ಆಶ್ರಯಗಳನ್ನು ರಚಿಸುವ ಮೂಲಕ ಪ್ರಾರಂಭಿಸಲು ದೆಹಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.