ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಪ್ಪು ವರ್ಣೀಯನೆಂದು ನಿಂದಿಸಿ ಕಾರಿನ ಗ್ಲಾಸ್‌ ಹೊಡೆದು ಪೊಲೀಸರ ಅಟ್ಟಹಾಸ- ಈ ವಿಡಿಯೊ ನೋಡಿ

US police beat man: ಪೊಲೀಸರು ಕಾರಿನ ಕಿಟಕಿ ಒಡೆದು ಕಪ್ಪು ವರ್ಣೀಯ ವ್ಯಕ್ತಿಯ ಮುಖಕ್ಕೆ ಹೊಡೆದು, ಆತನನ್ನು ಹೊರಗೆಳೆದು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ.

ಕಪ್ಪು ವರ್ಣೀಯನೆಂದು ನಿಂದಿಸಿ ಕಾರಿನ ಗ್ಲಾಸ್‌ ಹೊಡೆದು ಪೊಲೀಸರ ಅಟ್ಟಹಾಸ

Priyanka P Priyanka P Jul 22, 2025 5:32 PM

ಫ್ಲೋರಿಡಾ: ಪೊಲೀಸರು ಕಾರಿನ ಕಿಟಕಿ ಒಡೆದು ಕಪ್ಪು ವರ್ಣೀಯ ವ್ಯಕ್ತಿಯ ಮುಖಕ್ಕೆ ಹೊಡೆದು, ಆತನನ್ನು ಹೊರಗೆಳೆದು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಜಾಕ್ಸನ್‌ವಿಲ್ಲೆಯ ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

22 ವರ್ಷದ ವಿಲಿಯಂ ಮೆಕ್‍ನೀಲ್ ಜೂನಿಯರ್ ಹಲ್ಲೆಗೊಳಗಾದಾತ. ಫೆಬ್ರವರಿ 19 ರಂದು ಹಗಲಿನ ವೇಳೆ ಹೆಡ್‌ಲೈಟ್‌ಗಳನ್ನು ಹಾಕದೆ ವಾಹನ ಚಲಾಯಿಸಿದ ಆರೋಪದ ಮೇಲೆ ಆತನಿಗೆ ಥಳಿಸಲಾಗಿದೆ. ವಿಲಿಯಂ ಮೆಕ್‌ನೀಲ್ ಜೂನಿಯರ್ ಅವರನ್ನು ಪೊಲೀಸರು ತಡೆದು ನಿಲ್ಲಿಸುತ್ತಿರುವ ದೃಶ್ಯಾವಳಿಗಳು ವೈರಲ್ ಆಗಿರುವ ವಿಡಿಯೊದಲ್ಲಿದೆ. ಮೆಕ್‌ನೀಲ್ ತನ್ನ ಕಾರಿನಲ್ಲಿ ಕುಳಿತು ಮಾತನಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.

ಹಗಲು ಹೊತ್ತಿನಲ್ಲಿ ಮತ್ತು ಮಳೆ ಇಲ್ಲದ ಕಾರಣ ತಾನು ಹೆಡ್‌ಲೈಟ್‌ಗಳನ್ನು ಆನ್ ಮಾಡಲಿಲ್ಲ ಎಂದು ಮೆಕ್‌ನೀಲ್ ವಾದಿಸಿದ್ದಾರೆ. ಈ ವೇಳೆ ಕೋಪಗೊಂಡ ಪೊಲೀಸರು ಆತನನ್ನು ಕಾರಿನಿಂದ ಹೊರಗೆಳೆದು ಮನಬಂದಂತೆ ಥಳಿಸಿದ್ದಾರೆ.

ವಿಡಿಯೊ ಇಲ್ಲಿದೆ



ಅಧಿಕಾರಿಗಳು ಮೆಕ್‍ನೀಲ್ ಅವರನ್ನು ವಾಹನದಿಂದ ಹೊರಬರಲು ಏಳು ಬಾರಿ ಕೇಳಿದರು. ಆದರೆ, ಆತ ಹೊರಬರದೇ ಇದ್ದ ಕಾರಣ, ಮತ್ತೊಬ್ಬ ಅಧಿಕಾರಿ ಕಾರಿನ ಕಿಟಕಿಯನ್ನು ಒಡೆದು ಮುಖಕ್ಕೆ ಥಳಿಸಿದ್ದಾರೆ. ನಂತರ ವಾಹನದಿಂದ ಹೊರಗೆಳೆದು ಮತ್ತೆ ಥಳಿಸಿದ್ದಾರೆ. ಮೂವರು ಪೊಲೀಸರು ಸೇರಿ ಮೆಕ್‍ನೀಲ್ ಅವರನ್ನು ನೆಲಕ್ಕೆ ತಳ್ಳಿ ಥಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಗೆ ಲಕ್ಷ್ಮೀ ಎಂಟ್ರಿ: ಮಗು ಹಿಡಿದುಕೊಂಡು ಬಂದ ವೈಷ್ಣವ್ ವೈಫ್

ಮೆಕ್‌ನೀಲ್ ಅವರ ವಕೀಲ ಹ್ಯಾರಿ ಡೇನಿಯಲ್ಸ್, ಪೊಲೀಸರ ಬಗ್ಗೆ ಮೆಕ್‍ನೀಲ್ ಭಯಭೀತರಾಗಿದ್ದಾರೆ ಮತ್ತು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಏಕೆಂದರೆ ಕಪ್ಪು ವರ್ಣೀಯರ ಮೇಲೆ ಜನಾಂಗೀಯ ದಾಳಿಗಳು ಆಗಾಗ ನಡೆಯುತ್ತಿರುತ್ತವೆ. ಹೀಗಾಗಿ ಮೆಕ್‍ನೀಲ್ ತಮ್ಮ ಮೊಬೈಲ್‍ನಿಂದ ಘಟನೆಯನ್ನು ರೆಕಾರ್ಡ್ ಮಾಡಲು ನಿರ್ಧರಿಸಿದರು. ಅವರು ರೆಕಾರ್ಡ್ ಮಾಡುತ್ತಿದ್ದಾರೆಂದು ಪೊಲೀಸರಿಗೆ ತಿಳಿದಿರಲಿಲ್ಲ ಎಂದು ವರದಿ ತಿಳಿಸಿದೆ.

ಮೆಕ್‌ನೀಲ್ ಅವರನ್ನು ಕಾರಿನಿಂದ ಇಳಿಸಲು ಆದೇಶಿಸಿದ ನಂತರ ಪೊಲೀಸ್ ಅಧಿಕಾರಿಗಳ ಆಜ್ಞೆಗಳನ್ನು ಪಾಲಿಸಲಿಲ್ಲ. ಗುರುತಿನ ಚೀಟಿ ತೋರಿಸಲು ನಿರಾಕರಿಸಿದರು ಮತ್ತು ಅವರ ಕಾರನ್ನು ಲಾಕ್ ಮಾಡಿದರು ಎಂದು ಪೊಲೀಸರು ಆರೋಪಿಸಿದ್ದಾರೆ. ಕಾನೂನಿನ ಪ್ರಕಾರ, ಸಂಚಾರ ನಿಲುಗಡೆಯ ಸಮಯದಲ್ಲಿ ಪೊಲೀಸ್ ಅಧಿಕಾರಿಯ ಆಜ್ಞೆಯನ್ನು ಪಾಲಿಸುವುದು ಕಡ್ಡಾಯವಾಗಿದೆ.

ಅಮಾನತುಗೊಂಡ ಚಾಲನಾ ಪರವಾನಗಿಯನ್ನು ಬಳಸಿಕೊಂಡು ವಾಹನ ಚಲಾಯಿಸುವುದು, ಹಿಂಸಾಚಾರವಿಲ್ಲದೆ ಪೊಲೀಸ್ ಅಧಿಕಾರಿಯನ್ನು ಪ್ರತಿಭಟಿಸುವುದು ಮುಂತಾದ ಆರೋಪಗಳ ಮೇಲೆ ಮೆಕ್‌ನೀಲ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಅಂತಿಮವಾಗಿ ಅಮಾನತುಗೊಂಡ ಪರವಾನಗಿಯನ್ನು ಬಳಸಿಕೊಂಡು ವಾಹನ ಚಲಾಯಿಸಿದ ಬಗ್ಗೆ ಮೆಕ್‍ನೀಲ್ ತಪ್ಪೊಪ್ಪಿಕೊಂಡರು.