Viral Video: ದಂತ ಚಿಕಿತ್ಸೆಯ ನಂತರ ಮಹಿಳೆಯ ಕಿವುಡುತನ ಮಾಯ! ಸೂರತ್‍ನಲ್ಲೊಂದು ಅಚ್ಚರಿಯ ಘಟನೆ
Deafness gone magically: ಕಿವುಡುತನದಿಂದ ಬಳಲುತ್ತಿದ್ದ ಮಹಿಳೆಗೆ ದಂತ ಚಿಕಿತ್ಸೆಯ ನಂತರ ಕಿವುಡುತನ ಮಾಯವಾಗಿರುವ ಅಚ್ಚರಿಯ ಘಟನೆ ಸೂರತ್‍ನಲ್ಲಿ ನಡೆದಿದೆ. ಮಹಿಳೆಯು ಎರಡು ದಶಕಗಳಿಂದ ಕಿವುಡು ಸಮಸ್ಯೆಯನ್ನು ಹೊಂದಿದ್ದರು. ತಮ್ಮ ಹಲ್ಲಿನ ಚಿಕಿತ್ಸೆಯ ನಂತರ ಕಿವುಡುತನದಿಂದ ಹಠಾತ್ತನೆ ಗುಣಮುಖರಾಗಿದ್ದಾರೆ.


ಸೂರತ್: ಕಿವುಡುತನದಿಂದ ಬಳಲುತ್ತಿದ್ದ ಮಹಿಳೆಗೆ ದಂತ ಚಿಕಿತ್ಸೆಯ ನಂತರ ಕಿವುಡುತನ ಮಾಯವಾಗಿರುವ ಅಚ್ಚರಿಯ ಘಟನೆ ಸೂರತ್‍ನಲ್ಲಿ ನಡೆದಿದೆ. 63 ವರ್ಷದ ಜೈಬುನ್ನಿಸಾ ಎಂಬ ಮಹಿಳೆಯು ಎರಡು ದಶಕಗಳಿಂದ ಕಿವುಡು ಸಮಸ್ಯೆಯನ್ನು ಹೊಂದಿದ್ದರು. ತಮ್ಮ ಹಲ್ಲಿನ ಚಿಕಿತ್ಸೆಯ ನಂತರ ಕಿವುಡುತನದಿಂದ ಹಠಾತ್ತನೆ ಗುಣಮುಖರಾಗಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವರದಿಯ ಪ್ರಕಾರ, ಕಳೆದ ಎರಡು ದಶಕಗಳಿಂದ ಅವರಿಗೆ ಏನೂ ಕೇಳಿಸುತ್ತಿರಲಿಲ್ಲ. ಯಾವುದೇ ರೀತಿಯ ಶ್ರವಣ ಸಾಧನಗಳು ಅವರಿಗೆ ಕೆಲಸ ಮಾಡಲಿಲ್ಲ. ಆದರೆ, ದಂತ ಶಸ್ತ್ರಚಿಕಿತ್ಸೆಯ ನಂತರ ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ಚಿಕಿತ್ಸೆಯ ನಂತರ ಅವರಿಗೆ ಕಿವಿ ಕೇಳುತ್ತಿದೆ.
ಜೈಬುನ್ನಿಸಾ ಅವರ ಹಲ್ಲುಗಳು ಮುರಿದಿದ್ದವು. ಅವರ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಇದ್ದಕ್ಕಿದ್ದಂತೆ ಒಂದು ದಿನ ಅವರಿಗೆ ಶಬ್ಧಗಳು ಕೇಳಿಸಿವೆ. ಈ ಬಗ್ಗೆ ಮಾತನಾಡಿರುವ ಜೈಬುನ್ನಿಸಾ, ತಾನು ಮನೆಯಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ತನಗೆ ಧ್ವನಿಗಳು ಕೇಳಿಸಲಾರಂಭಿಸಿದವು. ಇದನ್ನು ತನ್ನ ಗಂಡನಿಗೆ ತಿಳಿಸಿದೆ. ಅವರು ಹೇಳುವ ಮಾತುಗಳು ಕೂಡ ತನಗೆ ಕೇಳಿಸಿದೆ. ತನಗೆ ನಂಬಲು ಸಾಧ್ಯವಾಗಲಿಲ್ಲ. ನಮ್ಮ ನೆರೆಯವರ ಮನೆಗೆ ಹೋಗಿ ಅವರೊಂದಿಗೆ ಮಾತನಾಡಿದೆ. ತನಗೆ ನಿಜವಾಗಿಯೂ ಶಬ್ಧ ಕೇಳಿಸುತ್ತಿದೆ ಎಂಬುದು ತಿಳಿಯಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವೈದ್ಯರು ಏನು ಹೇಳುತ್ತಾರೆ?
ದಂತ ಇಂಪ್ಲಾಂಟ್ ಚಿಕಿತ್ಸೆಯಿಂದಾಗಿ ಈ ಬದಲಾವಣೆ ಕಂಡುಬಂದಿದೆ. ದಂತ ಚಿಕಿತ್ಸೆಯ ನಂತರ, ಅವರ ಶ್ರವಣ ಸಾಮರ್ಥ್ಯ ಸುಧಾರಿಸಿದೆ ಎಂದು ಇಂಪ್ಲಾಂಟ್ ತಜ್ಞ ಡಾ. ರಿಷಿ ಭಟ್ ಹೇಳಿದರು. ಕಿವಿಗೆ ಸಂಪರ್ಕಗೊಂಡಿರುವ ನರಗಳ ಮೇಲಿನ ಒತ್ತಡ ಕಡಿಮೆಯಾದ ಕಾರಣ ಇದು ಸಂಭವಿಸಿರಬಹುದು ಎಂದು ಹೇಳಿದ್ದಾರೆ.
ಈ ಹಿಂದೆ ಪ್ರತಿ ಫೋನ್ ಕರೆಯಲ್ಲೂ ಸಹಾಯದ ಅಗತ್ಯವಿದ್ದ ಜೈಬುನ್ನಿಸಾ, ಈಗ ಮತ್ತೆ ಮುಕ್ತವಾಗಿ ಮಾತನಾಡಬಲ್ಲರು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಉತ್ಸುಕರಾಗಿದ್ದಾರೆ. ದುಬೈನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಅವರ ಪುತ್ರಿ ತಹ್ಜೀಬ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಪುತ್ರಿಯ ಜೊತೆ ಮಾತನಾಡುವಾಗ ತುಂಬಾ ಕಷ್ಟವಾಗುತ್ತಿತ್ತು. ತಾನು ಮಾತ್ರ ಮಾತನಾಡುತ್ತಿತ್ತೆ. ಅತ್ತ ಕಡೆಯಿಂದ ಮಗಳು ಏನು ಮಾತನಾಡುತ್ತಿದ್ದಾಳೆ ಎಂಬುದು ಕೇಳಿಸುತ್ತಿರಲಿಲ್ಲ. ಆದರಿನ್ನು ಮುಂದೆ ಹಾಗಾಗುವುದಿಲ್ಲ. ಮುಕ್ತವಾಗಿ, ಏನೇ ವಿಚಾರವಿದ್ದರೂ ಖುಷಿಯಿಂದ ಮಾತನಾಡಬಹುದು ಎಂದು ಜೈಬುನ್ನೀಸಾ ತಿಳಿಸಿದ್ದಾರೆ.
ಇನ್ನು ಜೈಬುನ್ನೀಸಾ ಪತಿ ಅಬ್ಬಾಸ್ ವೈದ್ಯರಾಗಿದ್ದು, ಅವರು ಕೂಡ ತನ್ನ ಪತ್ನಿಗೆ ಶ್ರವಣ ಸಾಧನ ಮರಳಿರುವುದರಿಂದ ಅಚ್ಚರಿಗೊಳಗಾಗಿದ್ದಾರೆ. ಮೊದಲಿಗೆ ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.