ಭುವನೇಶ್ವರ: ಒಡಿಶಾದ ಬೌಧ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಚಲಿಸುತ್ತಿದ್ದ ರೈಲಿನ ಹಳಿಗಳ ಕೆಳಗೆ ಮಲಗಿ ರೀಲ್ಸ್(Reels) ಮಾಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ಬಾಲಕ ರೈಲು ಹಾದುಹೋಗುವಾಗ ಅದರ ಕೆಳಗೆ ಮಲಗಿದ್ದ, ಅವನ ಸ್ನೇಹಿತರಿಬ್ಬರು ಅದನ್ನು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಜೀವಕ್ಕೆ ಅಪಾಯಕಾರಿಯಾದ ಸಾಹಸ ಮಾಡಿದ್ದಕ್ಕಾಗಿ ಮೂವರನ್ನು ಬಂಧಿಸಲಾಗಿದೆ. ಅವರ ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಒಬ್ಬ ಬಾಲಕ ರೈಲ್ವೆ ಹಳಿಯ ಮೇಲೆ ಮಲಗಿರುವುದನ್ನು ಸೆರೆಯಾಗಿದೆ. ಅವನ ಇಬ್ಬರು ಸ್ನೇಹಿತರು ಆತನ ರೀಲ್ಸ್ ಮಾಡಿದ್ದಾರೆ.ವರದಿಗಳ ಪ್ರಕಾರ, ಈ ಘಟನೆ ಪುರುನಪಾಣಿ ರೈಲು ನಿಲ್ದಾಣದ ಸಮೀಪವಿರುವ ದಾಲುಪಲಿ ಬಳಿ ನಡೆದಿದೆ. ಈ ಪ್ರದೇಶದಲ್ಲಿ ರೈಲು ಸೇವೆಗಳನ್ನು ಇತ್ತೀಚೆಗಷ್ಟೇ ಶುರುಮಾಡಲಾಗಿತ್ತು. ಈ ಘಟನೆಯ ಬಗ್ಗೆ ಕ್ರಮ ಕೈಗೊಂಡ ಸ್ಥಳೀಯ ಪೊಲೀಸರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
आज के बच्चे— Homework से डरते हैं 😨,पर ट्रेन से नहीं 🚆😅दिमाग offline....कैमरा online !#Madness #Bachpan #Boudh #Odisha #Reel #Like #AI #Train #Life #Safe #GRP #Entertainment #Risk #child #Stunts #Railway #viral pic.twitter.com/uSFAE0VwWG
— Sanjeev (@wing4destiny) July 6, 2025
ಪೊಲೀಸರ ಮಾಹಿತಿ ಪ್ರಕಾರ, ರೈಲ್ವೆ ಹಳಿಯ ಮೇಲೆ ಮಲಗಿದ್ದ ಬಾಲಕ ರೈಲು ಹಾದು ಹೋಗುತ್ತಿರುವಾಗ ತುಂಬಾ ಹೆದರಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ತಾನು ಬದುಕುಳಿಯುವ ನಿರೀಕ್ಷೆ ಇರಲಿಲ್ಲ ಎಂದು ಅವನು ಒಪ್ಪಿಕೊಂಡಿದ್ದಾನೆ. ಸೋಶಿಯಲ್ ಮೀಡಿಯಾದವರ ಗಮನ ಸೆಳೆಯಲು ಬಾಲಕರು ಇಂತಹ ಅಪಾಯಕಾರಿ ಸಾಹಸ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸರೋವರಕ್ಕೆ ಕಸ ಎಸೆದ ಪ್ರವಾಸಿಗನನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ; ವಿಡಿಯೊ ವೈರಲ್
ಇದೇ ರೀತಿಯ ಘಟನೆ ಈ ಹಿಂದೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿತ್ತು. ಒಬ್ಬ ವ್ಯಕ್ತಿ ಸೋಶಿಯಲ್ ಮೀಡಿಯಾಗಾಗಿ ವಿಡಿಯೊ ರೆಕಾರ್ಡ್ ಮಾಡಲು ರೈಲ್ವೆ ಹಳಿಗಳ ಮೇಲೆ ಮಲಗಿದ್ದ. ಉನ್ನಾವೊದ ಹಸಂಗಂಜ್ ನಿವಾಸಿ ರಂಜಿತ್ ಚೌರಾಸಿಯಾ ಹಳಿಗಳ ಮೇಲೆ ಮಲಗಿದ್ದಾಗಲೇ ವಿಡಿಯೊ ಮಾಡಿದ್ದನು. ಮತ್ತು ರೈಲು ಅವನ ಮೇಲೆ ಹಾದುಹೋಯಿತು. ನಂತರ ಅವನು ಎದ್ದು ರೈಲು ಹಳಿಗಳ ಮೇಲೆ ನಡೆಯುತ್ತಾ ಮುಂದೆ ಸಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಸರ್ಕಾರಿ ರೈಲ್ವೆ ಪೊಲೀಸರು ಚೌರಾಸಿಯಾ ಅವನನ್ನು ಬಂಧಿಸಿದರು.