Viral Video: ಶೌಚಾಲಯವನ್ನೇ ಮನೆಯನ್ನಾಗಿ ಮಾಡಿಕೊಂಡ ಯುವತಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಚೀನಾದಲ್ಲಿ 18 ನೇ ವಯಸ್ಸಿನ ಯಾಂಗ್ ಎಂಬ ಯುವತಿಯೊಬ್ಬಳು ಬಾಡಿಗೆ ಕಟ್ಟಲು ಸಾಧ್ಯವಾಗದ ಕಾರಣ ಬಾಡಿಗೆ ಮನೆ ಬದಲು ಕಚೇರಿಯ ಶೌಚಾಲಯದಲ್ಲಿ ತಿಂಗಳಿಗೆ 600 ಬಾಡಿಗೆ ಪಾವತಿಸಿ ವಾಸವಾಗಿದ್ದಾಳೆ. ಇದಕ್ಕೆ ಸಂಬಂಧಪಟ್ಟ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ಆಕರ್ಷಿಸಿದೆ.


ಬೀಜಿಂಗ್: ಇಂದಿನ ದಿನಗಳಲ್ಲಿ ಮನೆ ಬಾಡಿಗೆ ಹೆಚ್ಚಾಗುತ್ತಿದೆ. ಮಹಾನಗರಗಳಲ್ಲಂತೂ ಬಾಡಿಗೆ ಕೇಳೋದೇ ಬೇಡ. ಕಡಿಮೆ ಸಂಬಳ ತೆಗೆದುಕೊಳ್ಳುವ ಜನರಿಗೆ ಬಾಡಿಗೆ ಮನೆಗಳಲ್ಲಿ ವಾಸಿಸುವುದು ಬಹಳ ಕಷ್ಟವಾಗುತ್ತದೆ. ಹೀಗಿರುವಾಗ ಚೀನಾದಲ್ಲಿ 18 ವರ್ಷದ ಯಾಂಗ್ ಎಂಬ ಯುವತಿಯೊಬ್ಬಳು ಬಾಡಿಗೆ ಕಟ್ಟಲು ಸಾಧ್ಯವಾಗದ ಕಾರಣ ಬಾಡಿಗೆ ಮನೆ ಬದಲು ಕಚೇರಿಯ ಶೌಚಾಲಯದಲ್ಲಿ ತಿಂಗಳಿಗೆ 600 ಬಾಡಿಗೆ ಪಾವತಿಸಿ ವಾಸವಾಗಿದ್ದಾಳಂತೆ. ಈ ಯುವತಿ ಕಚೇರಿ ಶೌಚಾಲಯದಲ್ಲಿ ಉಳಿದುಕೊಂಡಿರುವ ಪ್ರಕರಣವು ಚೀನಾದ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ವೈರಲ್(Viral Video) ಆಗಿದೆ. ಹಗಲಿನಲ್ಲಿ ಕೆಲಸ ಮಾಡಿದ ನಂತರ, ಅವಳು ರಾತ್ರಿ ಸಮಯದಲ್ಲಿ ತನ್ನ ಕಂಪನಿಯ ಶೌಚಾಲಯ ಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಾಳಂತೆ.
ಆರ್ಥಿಕ ಸಮಸ್ಯೆಯಿಂದಾಗಿ ವಿಶ್ರಾಂತಿ ಕೊಠಡಿಯನ್ನು ಮನೆ ಎಂದು ಕರೆಯುವ ಪರಿಸ್ಥತಿ ಆಕೆಗೆ ಬಂದಿದೆಯಂತೆ. ಆಕೆಯ ಸಂಬಳ ಕೂಡ ಕಡಿಮೆಯಾದ್ದರಿಂದ ಅವಳಿಗೆ ಬೇರೆ ಆಯ್ಕೆಗಳಿಲ್ಲವಂತೆ. ಪ್ರತಿ ರಾತ್ರಿ, ಹುನಾನ್ ಪ್ರಾಂತ್ಯದ ಝುಝೌನಲ್ಲಿ ಪೀಠೋಪಕರಣಗಳ ಅಂಗಡಿಯಲ್ಲಿ ಕೆಲಸ ಮಾಡಿದ ನಂತರ, ಅವಳು ಆರು ಚದರ ಮೀಟರ್ ವ್ಯಾಪ್ತಿಯ ಶೌಚಾಲಯ ಪ್ರದೇಶದಲ್ಲಿ ವಾಸಿಸುತ್ತಾಳಂತೆ.
Chinese woman’s unconventional solution to soaring housing costs: Renting a bathroom at office for Rs 545 a month#viral #Trending https://t.co/G58IBCKbAJ
— Express Trending 😷 (@ietrending) March 31, 2025
ಮೂಲತಃ ಹುಬೈ ಪ್ರಾಂತ್ಯದ ಗ್ರಾಮೀಣ ಕುಟುಂಬದಿಂದ ಬಂದ ಯಾಂಗ್ ಅವಕಾಶಗಳನ್ನು ಹುಡುಕುತ್ತಾ ನಗರಕ್ಕೆ ಬಂದಿದ್ದಳಂತೆ. ವರದಿಗಳ ಪ್ರಕಾರ, ಕೇವಲ 2,700 ಯುವಾನ್ ಮಾಸಿಕ ಸಂಬಳ ಪಡೆಯುವ ಅವಳು ಅದರಲ್ಲಿ ಕೇವಲ ಮಾಸಿಕ ಬಾಡಿಗೆ 50 ಯುವಾನ್ (ಅಂದಾಜು 600 ರೂ.) ಅನ್ನು ತನ್ನ ಆಶ್ರಯಕ್ಕಾಗಿ ಎತ್ತಿ ಇಡುತ್ತಾಳಂತೆ. ಇದು ನೆಲೆಸಲು ಸೂಕ್ತ ಸ್ಥಳವಲ್ಲ, ಆದರೆ ಅವಳಿದ್ದ ಪರಿಸ್ಥಿತಿಗೆ ಅದರಲ್ಲಿ ಹೊಂದಿಕೊಂಡು ಹೋಗುವುದು ಅವಳಿಗೆ ಅನಿವಾರ್ಯವಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಮೈಕಲ್ ಜಾಕ್ಸನ್‌ನಂತೆ ಸೊಂಟ ಬಳುಕಿಸಿದ ಪ್ರೊಫೆಸರ್; ಶಾಕ್ ಆದ ವಿದ್ಯಾರ್ಥಿಗಳು! ವಿಡಿಯೊ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ದೃಶ್ಯಗಳಲ್ಲಿ ಅವಳು ವಾಸವಿದ್ದ ಸ್ಥಳವು ಸಿಂಕ್ ಮತ್ತು ಎರಡು ಇಂಡಿಯನ್ ಕಮೋಡ್ ಶೌಚಾಲಯಗಳನ್ನು ಒಳಗೊಂಡಿದೆ. ಹಗಲಿನಲ್ಲಿ, ಇತರರು ವಿಶ್ರಾಂತಿ ಕೊಠಡಿಯನ್ನು ಬಳಸುತ್ತಾಳೆ. ಆದರೆ ರಾತ್ರಿಯಲ್ಲಿ, ಅದು ಅವಳ ವೈಯಕ್ತಿಕ ಸ್ಥಳವಾಗುತ್ತದೆ. ಆದರೆ, ಅವಳು ಮಲಗುವ ಮೊದಲು ವಾಶ್ ರೂಮ್ ಬಾಗಿಲನ್ನು ಲಾಕ್ ಮಾಡುವುದಿಲ್ಲ. ಇದರಿಂದ ಇಲ್ಲಿಯ ತನಕ ಏನೂ ಕಳ್ಳತನವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.