ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೈಕಲ್ ಜಾಕ್ಸನ್‌ನಂತೆ ಸೊಂಟ ಬಳುಕಿಸಿದ ಪ್ರೊಫೆಸರ್; ಶಾಕ್‌ ಆದ ವಿದ್ಯಾರ್ಥಿಗಳು! ವಿಡಿಯೊ ವೈರಲ್

Michael Jackson: ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್‍ನ ಪ್ರೊಫೆಸರ್ ರವಿ ಎಂ.ಜೆ. ಮೈಕಲ್ ಜಾಕ್ಸನ್ ಹಾಗೆ ಡ್ಯಾನ್ಸ್ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರೊಫೆಸರ್‌ ಡ್ಯಾನ್ಸ್‌ ನೋಡಿ ವಿದ್ಯಾರ್ಥಿಗಳು ಮಾತ್ರವಲ್ಲ ಸೋಶಿಯಲ್ ಮೀಡಿಯಾದ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಮೈಕಲ್‌ ಜಾಕ್ಸನ್‌ ಮೈ ಮೇಲೆ ಬಂದಂತೆ ಕುಣಿದ ಪ್ರೊಫೆಸರ್

Profile pavithra Mar 29, 2025 1:37 PM

ಬೆಂಗಳೂರು: ಮೈಕಲ್ ಜಾಕ್ಸನ್ (Michael Jackson) ಹೆಸರು ಕೇಳುತ್ತಲೇ ಅವರ ಅದ್ಭುತ ಡ್ಯಾನ್ಸ್‌ ಕಣ್ಮುಂದೆ ಬರುತ್ತದೆ. ಡ್ಯಾನ್‍ ಮೂಲಕ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಎಂಜಿನಿಯರಿಂಗ್‍ ಕಾಲೇಜಿನ ಪ್ರೊಫೆಸರ್‌ ಒಬ್ಬರು ಮೈಕಲ್ ಜಾಕ್ಸನ್‍ ಹಾಗೆ ಸಖತ್‌ ಆಗಿ ಡ್ಯಾನ್ ಮಾಡಿ ವಿದ್ಯಾರ್ಥಿಗಳ ಮುಖದಲ್ಲಿ ಅಚ್ಚರಿಯನ್ನು ಮೂಡಿಸಿದ್ದಾರೆ. ಅರೇ... ಏನಿದು ಪ್ರೊಫೆಸರ್‌ ಡ್ಯಾನ್ಸ್‌ ಮಾಡಿದ್ರಾ? ಎಂದು ನೀವು ಕೂಡ ಆಶ್ಚರ್ಯ ಪಡುತ್ತಿದ್ದೀರಾ? ಹೌದು ಇವರು ಅಧ್ಭುತ ನೃತ್ಯಗಾರ ಮೈಕಲ್‌ ಜಾಕ್ಸನ್‌ ಹಾಗೇ ಕುಣಿದು ಕುಪ್ಪಳಿಸಿದ್ದಾರೆ.ನ್ಯೂ ಹೊರೈಜನ್ ಕಾಲೇ ಜ್ ಆಫ್ ಎಂಜಿನಿಯರಿಂಗ್‍ನ ಪ್ರೊಫೆಸರ್ ರವಿ ಎಂ.ಜೆ ಅವರ ಡ್ಯಾನ್ಸ್ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ನೆಟ್ಟಿಗರು ಕೂಡ ಪ್ರೊಫೆಸರ್‌ ಡ್ಯಾನ್ಸ್‌ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಇದು 2.9 ಮಿಲಿಯನ್ ವ್ಯೂವ್ಸ್ ಮತ್ತು 207 ಸಾವಿರ ಲೈಕ್‍ಗಳನ್ನು ಗಳಿಸಿದೆ. ಸಾವಿರಾರು ನೆಟ್ಟಿಗರು ಕಾಮೆಂಟ್‍ಗಳ ಮೂಲಕ ಪ್ರೊಫೆಸರ್‌ ಅದ್ಭುತ ಪ್ರತಿಭೆಯನ್ನು ಹೊಗಳಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ‌

ಪ್ರೊಫೆಸರ್‌ ರವಿ ಮೈಕಲ್‌ ಜಾಕ್ಸನ್‌ ಹಾಗೇ ಸ್ಟೆಪ್ಸ್‌ ಹಾಕಿದ ವಿಡಿಯೊ ಇಲ್ಲಿದೆ ನೋಡಿ...

ಒಬ್ಬ ನೆಟ್ಟಿಗರು, "ಈ ರೀತಿಯ ಪ್ರೊಫೆಸರ್‌ ಇದ್ದಿದ್ದರೆ ನಾನು ಒಂದೇ ಒಂದು ಕ್ಲಾಸ್‍ ಅನ್ನು ತಪ್ಪಿಸಿಕೊಳ್ಳುವುದಿಲ್ಲ" ಎಂದಿದ್ದಾರೆ. ಇನ್ನೊಬ್ಬರು ತಮಾಷೆಯಾಗಿ, "ಈ ವ್ಯಕ್ತಿ ರಿಯಾಲಿಟಿ ಶೋಗಳಲ್ಲಿ ಅರ್ಧದಷ್ಟು ನೃತ್ಯಗಾರರಿಗಿಂತ ಹೆಚ್ಚು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ಹಾಗಾಗಿ ಇವರು ಎಂಜಿನಿಯರಿಂಗ್ ಮರೆತುಬಿಟ್ಟು ರಿಯಾಲಿಟಿ ಶೋಗಳಲ್ಲಿ ಡ್ಯಾನ್ಸ್ ಮಾಡಲಿ.ಈ ಪ್ರೊಫೆಸರ್ ಲೈವ್ ಪ್ರದರ್ಶನವನ್ನು ನೋಡಲು ನಾನು ಹೆಸರು ನೋಂದಾಯಿಸಿಕೊಳ್ಳುತ್ತೇನೆ” ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಅಪ್ಪ-ಮಗಳ ಸೂಪರ್‌ ಡ್ಯಾನ್ಸ್ ; ವಿಡಿಯೊ ವೈರಲ್

ಒಬ್ಬರು ಕಾಮೆಂಟ್ ಮಾಡಿ, "ಮೊದಲಿಗೆ, ಇದು ಹಣಕ್ಕಾಗಿ ಮಾಡಿದ್ದು ಎಂದು ನಾನು ಭಾವಿಸಿದೆ. ಆದರೆ ಈ ಮನುಷ್ಯ ನಿಜವಾಗಿಯೂ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾನೆ” ಎಂದಿದ್ದಾರೆ. ಇನ್ನೊಬ್ಬರು "ಕಾಲೇಜು ಎಂದರೆ ಹೀಗಿರಬೇಕು - ಮನರಂಜನೆಯ ಸ್ಪರ್ಶದೊಂದಿಗೆ ಕಲಿಕೆ ಇರಬೇಕು!" ಎಂದಿದ್ದಾರೆ. ಮತ್ತೊಬ್ಬರು , "ಮೈಕೆಲ್ ಜಾಕ್ಸನ್ ಇವರ ಡ್ಯಾನ್ಸ್ ನೋಡಿದ್ರೆ ಹೆಮ್ಮೆ ಪಡುತ್ತಿದ್ದರು. ಈ ಪ್ರೊಫೆಸರ್‌ಗೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು” ಎಂದಿದ್ದಾರೆ. ಕಾಲೇಜಿನ ವಿದ್ಯಾರ್ಥಿಯೊಬ್ಬರು, "ಅವರು ನೃತ್ಯ ಮಾಡಬಲ್ಲರು ಎಂದು ನಮಗೆ ತಿಳಿದಿತ್ತು. ಆದರೆ ಇದು ಬೇರೆ ಲೆವೆಲ್‌ನಲ್ಲಿತ್ತು" ಎಂದು ಬರೆದಿದ್ದಾರೆ. ಇನ್ನೊಬ್ಬರು, "ಕೆಲವು ಪ್ರೊಫೆಸರ್‌ಗೆ ಕಲಿಕೆಯ ಜತೆಗೆ ಹೇಗೆ ಮೋಜು ಮಾಡಬೇಕೆಂದು ತಿಳಿದಿದೆ. ಹ್ಯಾಟ್ಸ್ ಆಫ್!" ಎಂದು ಮೆಚ್ಚುಗೆ ಸೂಚಿಸಿದ್ದಾರೆ.