ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಏರ್‌ಪೋರ್ಟ್‌ನಲ್ಲಿ ನೆಲದ ಮೇಲೆ ಕುಳಿತು ತಿಂಡಿ ತಿಂದ ಖ್ಯಾತ ನಟ; ವಿಡಿಯೊ ಫುಲ್‌ ವೈರಲ್‌

ಗುಜರಾತಿ ಸಿನಿಮಾ ನಟ ಹಿತೇಶ್ ಠಕ್ಕರ್ ವಿಮಾನ ನಿಲ್ದಾಣದ ನೆಲದಲ್ಲಿ ಕುಳಿತು ಸ್ನೇಹಿತರ ಜೊತೆ ಖಮನ್ ಎಂಬ ಗುಜರಾತಿ ತಿಂಡಿಯನ್ನು ಸವಿದಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಕೆಲವರು ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವರು ಇದು ಸರಿಯಾದ ನಡವಳಿಕೆ ಅಲ್ಲ ಎಂದು ಕಿಡಿಕಾರಿದ್ದಾರೆ.

ಏರ್‌ಪೋರ್ಟ್‌ನಲ್ಲಿ ನೆಲದ ಮೇಲೆ ಕುಳಿತು ತಿಂಡಿ ತಿಂದ ಖ್ಯಾತ ನಟ

Profile pavithra Apr 29, 2025 1:15 PM

ನವದೆಹಲಿ: ಇತ್ತೀಚೆಗಷ್ಟೇ ಮೆಟ್ರೋದ ಒಳಗೆ ಕುಳಿತು ಊಟ ಮಾಡಿದ ಮಹಿಳೆಯೊಬ್ಬಳಿಗೆ ಅಧಿಕಾರಿಗಳು ಭಾರೀ ದಂಡ ವಿಧಿಸಿದ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.ಇದೀಗ ವಿಮಾನ ನಿಲ್ದಾಣದಲ್ಲಿ ಗುಜರಾತಿ ವ್ಯಕ್ತಿಯೊಬ್ಬ ನೆಲದ ಮೇಲೆ ಪೇಪರ್‌ ಹಾಸಿ ಅದರ ಮೇಲೆ ಗುಜರಾತಿನ ತಿಂಡಿ ಹರಡಿಕೊಂಡು ತಿಂದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.ಈ ವಿಡಿಯೊ ನೋಡಿ ಅನೇಕರು ಅವರ ನಾಗರಿಕ ಪ್ರಜ್ಞೆಯ ಕುರಿತು ಪ್ರಶ್ನಿಸಿದ್ದಾರೆ. ಆದರೆ ಕೆಲವರು ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಸ್ಕೃತಿಯನ್ನು ಪಾಲಿಸುತ್ತಿರುವುದಕ್ಕೆ ಶ್ಲಾಘಿಸಿದ್ದಾರೆ. ಗುಜರಾತ್‌ನ ನಟ ಹಿತೇಶ್ ಠಕ್ಕರ್ ವಿಮಾನ ನಿಲ್ದಾಣದ ನೆಲದಲ್ಲಿ ಕುಳಿತು ಖಮನ್ ಎಂಬ ಗುಜರಾತಿ ತಿಂಡಿಯನ್ನು ಸವಿದಿದ್ದಾರೆ. ಈ ಸಮಯದಲ್ಲಿ ಅವರ ಕೆಲವು ಸ್ನೇಹಿತರು ಅವರ ಜೊತೆಗಿದ್ದರಂತೆ.ಠಕ್ಕರ್ ಮತ್ತು ಅವರ ಸ್ನೇಹಿತರು ಗುಜರಾತ್‌ನ ಸೂರತ್‌ನಿಂದ ಥೈಲ್ಯಾಂಡ್‌ನ ಪಟ್ಟಾಯಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರಂತೆ.

ಹಿತೇಶ್‌ ಠಕ್ಕರ್‌ ತಿಂಡಿ ತಿಂದ ವಿಡಿಯೊ ಇಲ್ಲಿದೆ ನೋಡಿ



"ತಿನ್ನುವ ವಿಷಯಕ್ಕೆ ಬಂದಾಗ ನಾವು ಸ್ಥಳವನ್ನು ನೋಡುವುದಿಲ್ಲ. ಇದು ಸೂರತ್ ವಿಮಾನ ನಿಲ್ದಾಣ, ಮತ್ತು ನನ್ನ ಸ್ನೇಹಿತರು ರುಚಿಕರವಾದ ಖಮನ್ ತಂದಿದ್ದಾರೆ. ಥೈಲ್ಯಾಂಡ್‌ನ ಪಟ್ಟಾಯಕ್ಕೆ ವಿಮಾನ ಹತ್ತುವ ಮೊದಲು ನಾವು ನೆಲದ ಮೇಲೆ ಕುಳಿತು ಖಮನ್ ತಿನ್ನುತ್ತಿದ್ದೇವೆ" ಎಂದು ಠಕ್ಕರ್ ಹಂಚಿಕೊಂಡಿರುವ ವೀಡಿಯೊ ವೈರಲ್ ಆಗಿದೆ. ಬ್ಯಾಂಕಾಕ್‌ಗೆ ವಿಮಾನ ಹತ್ತುವ ಮೊದಲು ವಿಮಾನ ನಿಲ್ದಾಣದ ಗೇಟ್‌ನಲ್ಲಿ ತಮ್ಮ ಸಾಂಪ್ರದಾಯಿಕ ಆಹಾರ ಮತ್ತು ಆಹಾರ ಶೈಲಿಯನ್ನು ಎತ್ತಿಹಿಡಿದ ಈ ಭಾರತೀಯನ ಬಗ್ಗೆ ಕೆಲವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 27 ರಂದು ಶೇರ್ ಮಾಡಲಾದ ಈ ವಿಡಿಯೋ 2.8 ಮಿಲಿಯನ್ ವ್ಯೂವ್ಸ್‌ ಗಳಿಸಿದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಗುಜರಾತಿ ವ್ಯಕ್ತಿ ತನ್ನ "ಸಾಂಪ್ರದಾಯಿಕ ಆಹಾರ ಮತ್ತು ಆಹಾರ ಶೈಲಿಯನ್ನು" ಉಳಿಸಿಕೊಂಡಿದ್ದಕ್ಕಾಗಿ ಕೆಲವರು ಶ್ಲಾಘಿಸಿದರೆ, ಇನ್ನು ಕೆಲವರು ಇದನ್ನು ನಾಗರಿಕ ಪ್ರಜ್ಞೆಯ ವೈಫಲ್ಯ ಎಂದು ಉಲ್ಲೇಖಿಸಿದ್ದಾರೆ.

"ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಕಳೆದುಕೊಳ್ಳುತ್ತಿರುವುದಕ್ಕೆ ಒಂದು ಕಾರಣ" ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ."ಭಾರತವನ್ನು ಇನ್ನೂ ಮೂರನೇ ವಿಶ್ವ ದರ್ಜೆಯ ದೇಶವಾಗಿ ನೋಡಲು ಪ್ರಾಮಾಣಿಕ ನಾಗರಿಕ ನಡವಳಿಕೆಯನ್ನು ಕಳೆದುಕೊಳ್ಳುವುದು ಒಂದು ಕಾರಣವಾಗಿದೆ. ನೀವು ಆಧುನಿಕ ಸಾರ್ವಜನಿಕ ಸಾರಿಗೆಯನ್ನು ಬಳಸಲು ಬಯಸುತ್ತೀರಿ ಆದರೆ ಅದರ ನಿಯಮಗಳನ್ನು ಪಾಲಿಸುವುದಿಲ್ಲ. ಇದು ಸರಿಯಾದ ನಡವಳಿಕೆ ಅಲ್ಲ, ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಎಂದು ಇನ್ನೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮೆಟ್ರೋದೊಳಗೆ ಊಟ ಮಾಡಿದ ಮಹಿಳೆಗೆ ಬಿತ್ತು ಭಾರೀ ದಂಡ; ಏನಿದು ಘಟನೆ?

"ಇಲ್ಲ, ಇದು ಸಾರ್ವಜನಿಕ ಸ್ಥಳದಲ್ಲಿ ಒಳ್ಳೆಯದಲ್ಲ" ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ."ಎಲ್ಲವನ್ನೂ ಮರೆತುಬಿಡಿ, ಇದು ತುಂಬಾ ಅನೈರ್ಮಲ್ಯವಾಗಿದೆ!" ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ."ನಿಮ್ಮ ಮನೆಯ ನೆಲದಲ್ಲಿ ನೀವು ಏನು ಬೇಕಾದರೂ ತಿನ್ನಬಹುದು ಆದರೆ ಸಾರ್ವಜನಿಕವಾಗಿ, ಸ್ವಲ್ಪ ನಾಗರಿಕ ಪ್ರಜ್ಞೆ ಇರಬೇಕು" ಎಂದು ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ವ್ಯಕ್ತಿಗಳು ಇದೇ ತರಹದ ತಮ್ಮ ವೈಯಕ್ತಿಕ ಅನುಭವಗಳನ್ನು ವಿವರಿಸಿದ್ದಾರೆ.