ದೆಹಲಿ: ಚಿಕ್ಕ ಮಕ್ಕಳ ಮುಗ್ಧತೆಯನ್ನು ತೋರಿಸುವ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇದೀಗ ಶಾಲೆಗೆ ಹೋಗುವ ಪುಟ್ಟ ಬಾಲಕನೊಬ್ಬ ದಾರಿ ಮಧ್ಯೆ, ತನ್ನ ಟಿಫನ್ ಬಾಕ್ಸ್ ತೆರೆದು ಆಹಾರ ತಿಂದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ತೆರೆದ ಒಳಚರಂಡಿಯ ಪಕ್ಕದಲ್ಲಿ ರಸ್ತೆಯ ಮಧ್ಯದಲ್ಲಿ ತನ್ನ ಟಿಫಿನ್ (Tiffin) ತಿನ್ನಲು ಪ್ರಾರಂಭಿಸಿದ್ದರಿಂದ ನೆಟ್ಟಿಗರು ಮಗುವಿನ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಶಾಲೆಗೆ ಹೋಗುತ್ತಿರುವ ಬಾಲಕ ಚರಂಡಿ ಪಕ್ಕದ ದಾರಿ ಮಧ್ಯೆ ಕುಳಿತುಕೊಂಡಿದ್ದಾನೆ. ಶಾಲಾ ಬ್ಯಾಗ್‍ನಿಂದ ಟಿಫನ್ ಬಾಕ್ಸ್ ಹೊರತೆಗೆದು ನೂಡಲ್ಸ್ ಅನ್ನು ತಿಂದಿದ್ದಾನೆ. ಸ್ಥಳದಲ್ಲಿ ಇದ್ದವರು ಈ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಬಾಲಕ ಶಾಲೆಗೆ ತಲುಪುವ ಮೊದಲೇ ಹಸಿವಾಗಿದ್ದರಿಂದ ತಿಂಡಿ ತಿಂದಿದ್ದಾನೆ.
ಬಾಲಕನ ಮುಗ್ಧತೆಯಿಂದ ನೆಟ್ಟಿಗರು ಭಾವುಕರಾಗಿದ್ದಾರೆ. ಆದರೆ ತೆರೆದ ಚರಂಡಿಯ ಪಕ್ಕದಲ್ಲಿದ್ದ ಬೀದಿಯ ಮಧ್ಯದಲ್ಲಿ ಅವನು ಊಟ ಮಾಡಲು ಪ್ರಾರಂಭಿಸಿದ್ದರಿಂದ ಆತನ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಅವರು ಕಾಳಜಿ ವ್ಯಕ್ತಪಡಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಸೈಕ್ಲಿಂಗ್ ಮಾಡುವಾಗ ತೆರೆದ ಗುಂಡಿಗೆ ಬಿದ್ದು ಬಾಲಕನಿಗೆ ಗಾಯ
ತೆರೆದ ಗುಂಡಿಗೆ ಬಿದ್ದು ಶಾಲಾ ಬಾಲಕನೊಬ್ಬ ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಅಲಿಗಢದ ಖೈರ್ ರಸ್ತೆಯ ಗೊಂಡಾ ತಿರುವು ಬಳಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಈ ವಿಡಿಯೊ ಭಾರಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ರಸ್ತೆಬದಿಯಲ್ಲಿ ಕಲ್ವರ್ಟ್ ನಿರ್ಮಿಸಿದ ನಂತರ ತೆರೆದ ಹೊಂಡವನ್ನು ಮುಚ್ಚದೆ ಬಿಡಲಾಗಿದೆ. ಆಳವಾದ ಹೊಂಡವು ದೊಡ್ಡ ಅಪಘಾತಕ್ಕೆ ಕಾರಣವಾಗುವ ಹಂತ ತಲುಪಿದೆ. ಸೈಕಲ್ ಸವಾರಿ ಮಾಡುತ್ತಿದ್ದ ಶಾಲಾ ವಿದ್ಯಾರ್ಥಿಯೊಬ್ಬ ಈ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾನೆ.
ಚರಂಡಿ ನೀರಿನಲ್ಲಿ ಸೊಪ್ಪು ತೊಳೆದಿದ್ದ ವ್ಯಾಪಾರಿ
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಸೊಪ್ಪನ್ನು ತೊಳೆಯುತ್ತಿರುವ ಅಸಹ್ಯಕಾರಿ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೊ ಕಂಡು ನೆಟ್ಟಿಗರು ದಂಗಾಗಿದ್ದರು. ಮಹಾರಾಷ್ಟ್ರದ ಥಾಣೆಯ ಉಲ್ಲಾಸ ನಗರದ ಮಾರುಕಟ್ಟೆಯೊಂದರಲ್ಲಿ ಈ ಘಟನೆ ನಡೆದಿತ್ತು. ಚರಂಡಿ ನೀರಿನಲ್ಲಿ ತರಕಾರಿ ತೊಳೆಯುವ ದೃಶ್ಯವನ್ನು ಆ ಪ್ರದೇಶದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿದ್ದ. ತರಕಾರಿ ಮಾರಾಟಗಾರ ಕೊಳಚೆ ನೀರಿನಲ್ಲಿ ಸೊಪ್ಪು ತೊಳೆದದ್ದು ಮಾತ್ರವಲ್ಲದೆ, ಅದೇ ನೀರನ್ನು ತರಕಾರಿಗಳ ಮೇಲೆ ಸಿಂಪಡಿಸಿದ್ದ.
ಇದನ್ನೂ ಓದಿ: Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ