ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಟೈಲ್ ಪಾಲಿಶಿಂಗ್ ಯಂತ್ರ ಬಳಸಿ ಹಲ್ಲು ಕ್ಲೀನಿಂಗ್‌! ಈ ಶಾಕಿಂಗ್‌ ವಿಡಿಯೊ ನೋಡಿ

Mistri Dental Service: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಹಲ್ಲುಗಳನ್ನು ಹರಿತಗೊಳಿಸಲು ಟೈಲ್ ಪಾಲಿಶಿಂಗ್ ಯಂತ್ರವನ್ನು ಬಳಸಿದ್ದಾನೆ. ಜೀವಕ್ಕೆ ಅಪಾಯಕಾರಿಯಾಗಿರುವ ಈ ದುಸ್ಸಾಹಸದ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊ ನೋಡಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ.

ಟೈಲ್ ಪಾಲಿಶಿಂಗ್ ಯಂತ್ರ ಬಳಸಿ ಹಲ್ಲು ಕ್ಲೀನಿಂಗ್‌! ವಿಡಿಯೊ ನೋಡಿ

Priyanka P Priyanka P Aug 4, 2025 4:43 PM

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಹಲ್ಲುಗಳನ್ನು ಹರಿತಗೊಳಿಸಲು ಟೈಲ್ ಪಾಲಿಶಿಂಗ್ ಯಂತ್ರವನ್ನು ಬಳಸಿದ್ದಾನೆ. ಟೈಲ್ಸ್ ಮತ್ತು ಪ್ಲೈವುಡ್ ಅನ್ನು ಕತ್ತರಿಸಿ ಹರಿತಗೊಳಿಸಲು ಸಾಮಾನ್ಯವಾಗಿ ಬಳಸುವ ಟೈಲ್ ಪಾಲಿಶಿಂಗ್ ಬ್ಲೇಡ್ ಅನ್ನು ಹಲ್ಲುಗಳ ಮೇಲೆ ಬಳಸಲಾಗಿದೆ. ಜೀವಕ್ಕೆ ಅಪಾಯಕಾರಿಯಾಗಿರುವ ಈ ದುಸ್ಸಾಹಸದ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊ ನೋಡಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಇದನ್ನು ಹುಚ್ಚುತನ ಮತ್ತು ನಂಬಲಾಗದ್ದು ಎಂದು ಕರೆದಿದ್ದಾರೆ. ವಿಡಿಯೊದಲ್ಲಿ ಅಪಾಯಕಾರಿ ಯಂತ್ರವನ್ನು ಹಲ್ಲುಗಳ ಮೇಲೆ ಇಡುತ್ತಿರುವ ದೃಶ್ಯವನ್ನು ನೋಡಬಹುದು. ಈ ವಿಡಿಯೊ ನೋಡಿ ನೆಟ್ಟಿಗರು ಆಘಾತಗೊಂಡಿದ್ದಾರೆ. ಕೆಲವರು ಆತಂಕಗೊಂಡರೆ, ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ವ್ಯಕ್ತಿಯೊಬ್ಬ ಟೈಲ್ ಪಾಲಿಶ್ ಮಾಡುವ ಯಂತ್ರವನ್ನು ಹಿಡಿದಿದ್ದರೆ, ಇನ್ನೊಬ್ಬ ವ್ಯಕ್ತಿ ತನ್ನ ಬಾಯಿಯನ್ನು ಅಗಲವಾಗಿ ತೆರೆದು ಕುಳಿತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ಮೂಲಕ ಅವನು ಅಪಾಯಕಾರಿ ಕೆಲಸವನ್ನು ಮಾಡಲು ಅವಕಾಶ ನೀಡುತ್ತಾನೆ. ಆ ವ್ಯಕ್ತಿ ಯಂತ್ರವನ್ನು ಆತನ ಹಲ್ಲುಗಳ ಮೇಲೆ ಇಡುತ್ತಾನೆ. ಕೆಲವು ಸೆಕೆಂಡುಗಳ ಕಾಲ ಮುಂಭಾಗದ ಹಲ್ಲುಗಳನ್ನು ಹರಿತಗೊಳಿಸಲಾಗುತ್ತದೆ.

ವಿಡಿಯೊ ವೀಕ್ಷಿಸಿ:



ಹಲ್ಲುಗಳನ್ನು ಹರಿತಗೊಳಿಸುತ್ತಿರುವ ವ್ಯಕ್ತಿಗೆ ಯಾವುದೇ ತೊಂದರೆಯಾಗಿಲ್ಲ. ಇಬ್ಬರೂ ತುಂಬಾ ಖುಷಿಯಿಂದ ಕ್ಯಾಮರಾದತ್ತ ನೋಡುತ್ತಾರೆ. ಮತ್ತೆ ದುಸ್ಸಾಹಸ ಮಾಡಲು ಮುಂದಾಗುತ್ತಾರೆ. ಈ ಬಾರಿ ಹಲ್ಲುಗಳನ್ನು ಹೊಳಪು ಮಾಡಲು ಬ್ಲೇಡ್ ಅನ್ನು ಹೆಚ್ಚು ಅಪಾಯಕಾರಿ ರೀತಿಯಲ್ಲಿ ಹಿಡಿದಿದ್ದಾರೆ. ಸದ್ಯ, ಈ ವಿಡಿಯೊ ನೋಡಿದ ನೆಟ್ಟಿಗರು ಆಘಾತಗೊಂಡಿದ್ದಾರೆ.

ಸಾಹಸದ ಸಮಯದಲ್ಲಿ ಸಂಭವಿಸಬಹುದಾದ ಅಪಾಯದ ಬಗ್ಗೆ ಕೆಲವು ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಹಲ್ಲುಗಳು ಸಾಮಾನ್ಯ ಮೂಳೆಗಳಲ್ಲ, ಅವು ನರಗಳನ್ನು ಸಹ ಹೊಂದಿವೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಘರ್ಷಣೆಯಿಂದ ಉಂಟಾಗುವ ಶಾಖವು ಹಲ್ಲಿಗೆ ಹಾನಿ ಮಾಡುತ್ತದೆ. ದಂತಕವಚದಲ್ಲಿ ಸಣ್ಣ ಬಿರುಕುಗಳು ಉಂಟಾಗಬಹುದು ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದು, ಮೇಸ್ತಿಯಿಂದ ದಂತ ಸೇವೆ, ಭಾರತ ಆರಂಭಿಕರಿಗಾಗಿ ಅಲ್ಲ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.