ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತಕ್ಕೆ 1947ರ ಬದಲು 1948ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೆ ಏನಾಗುತ್ತಿತ್ತು? ಈ ಬಗ್ಗೆ ವೈರಲ್ ವಿಡಿಯೊದಲ್ಲಿದೆ ವಿಶ್ಲೇಷಣೆ

ಬ್ರಿಟೀಷ್ ಆಳ್ವಿಕೆಯನ್ನು ಕಿತ್ತೊಗೆದು 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರಗೊಂಡಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹಾನುಭಾವರು ತಮ್ಮ ನೆತ್ತರು ಹರಿಸಿದ್ದಾರೆ. ಒಂದು ವೇಳೆ ಈ ದಿನಾಂಕದಂದು ಸ್ವಾತಂತ್ರ್ಯ ಸಿಗದೆ, 1948ರಲ್ಲಿ ಸ್ವಾತಂತ್ರ್ಯ ದೊರಕಿದ್ದರೆ ಏನಾಗುತ್ತಿತ್ತು? ಅಖಂಡ ಭಾರತ ನಿರ್ಮಾಣವಾಗುತ್ತಿತ್ತೇ? ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದು ವೈರಲ್ ಆಗಿದೆ.

ಭಾರತಕ್ಕೆ 1948ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೆ ಏನಾಗುತ್ತಿತ್ತು?

Priyanka P Priyanka P Aug 15, 2025 7:07 PM

ದೆಹಲಿ: ಭಾರತ ತನ್ನ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ (Independence Day 2025). ಈ ದಿನದಂದು, ಭಾರತ ವಸಾಹತುಶಾಹಿ ಆಳ್ವಿಕೆಯನ್ನು ಕಿತ್ತೊಗೆದು, ತನ್ನ ಧ್ವಜವನ್ನು ಹಾರಿಸಿ, ಸ್ವತಂತ್ರ ಯುಗಕ್ಕೆ ಕಾಲಿಟ್ಟಿತು. ಒಂದುವೇಳೆ ಈ ದಿನಾಂಕದಂದು ನಮಗೆ ಸ್ವಾತಂತ್ರ್ಯ (Independence) ದೊರಕದೇ, ಮುಂದೂಡಲ್ಪಟ್ಟಿದ್ದರೆ ಏನಾಗುತ್ತಿತ್ತು? ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದು ವೈರಲ್ (Viral Video) ಆಗಿದ್ದು, ಭಾರತದ ಸ್ವಾತಂತ್ರ್ಯವನ್ನು 1948ರ ಜೂನ್ 30ಕ್ಕೆ ನಿಗದಿಪಡಿಸಲಾಗಿತ್ತು ಎಂದು ಹೇಳಿದೆ.

ವಿಡಿಯೊದಲ್ಲಿ ವಿವರಿಸಿದಂತೆ, ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ 1947ರ ಫೆಬ್ರವರಿ 20ರಂದು ಅಧಿಕಾರ ವರ್ಗಾವಣೆಯಾಗಲಿದೆ ಎಂದು ಘೋಷಿಸಿದ್ದರು. ಆದರೆ ಒಂದು ವರ್ಷ ಮುಂಚಿತವಾಗಿ ದಿನಾಂಕವನ್ನು ಇದ್ದಕ್ಕಿದ್ದಂತೆ 1947ರ ಆಗಸ್ಟ್ 15ಕ್ಕೆ ನಿಗದಿಪಡಿಸಲಾಯಿತು. 1946-47ರಲ್ಲಿ, ಭಾರತವು ಅಶಾಂತಿ ಮತ್ತು ರಾಜಕೀಯ ಅಸ್ಥಿರತೆಯಿಂದ ಉರಿಯುತ್ತಿತ್ತು. ಕೋಮು ಹಿಂಸಾಚಾರದಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು.

ಇನ್ನು ವಿಳಂಬ ಮಾಡಿದರೆ ಆಗುವುದಿಲ್ಲ ಎಂದರಿತ ಹೊಸದಾಗಿ ನೇಮಕಗೊಂಡ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ (Lord Mountbatten) 1947ರ ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ಘೋಷಿಸಲು ಮುಂದಾದರು. 1945ರ ಆಗಸ್ಟ್ 15ರಂದು ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾಗುತ್ತಿದ್ದಂತೆ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ಪ್ರಮೋದ್ ಕಪೂರ್ ಸಂಶೋಧಿಸಿರುವ ‘1946: ಸ್ವಾತಂತ್ರ್ಯದ ಕೊನೆಯ ಯುದ್ಧ’ ಮತ್ತು ರಾಯಲ್ ಇಂಡಿಯನ್ ನೇವಿ ದಂಗೆಯ ಅಧ್ಯಯನಗಳು ಸೇರಿದಂತೆ ಐತಿಹಾಸಿಕ ದಾಖಲೆಗಳು, ಭಾರತದ ಸ್ವಾತಂತ್ರ್ಯವನ್ನು1948ರ ಜೂನ್‌ವರೆಗೆ ಸುಲಭವಾಗಿ ಮುಂದೂಡಬಹುದಿತ್ತು ಎಂದು ಸೂಚಿಸುತ್ತವೆ. ಯುವ ನಾವಿಕರ ನೇತೃತ್ವದಲ್ಲಿ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷದ ಬೆಂಬಲದೊಂದಿಗೆ ನಡೆದ ಈ ದಂಗೆ ತೀವ್ರಗೊಂಡಿತು. ಈ ಮುಷ್ಕರವು ರಾಷ್ಟ್ರವ್ಯಾಪಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಜವಾಹರ್‌ಲಾಲ್ ನೆಹರೂ, ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ಕಾಂಗ್ರೆಸ್ ನಾಯಕರು ಹೆಚ್ಚುತ್ತಿರುವ ಎಡಪಂಥೀಯ ಪ್ರಭಾವದ ಬಗ್ಗೆ ಚಿಂತಿತರಾಗಿ ಎಚ್ಚರಿಕೆಯಿಂದ ವರ್ತಿಸಿದರು ಎನ್ನಲಾಗಿದೆ.

ಇದನ್ನೂ ಓದಿ: Viral Video: ಛೀ...ಇವನೆಂಥಾ ಗುರು? ವಿದ್ಯಾರ್ಥಿನಿ ಜೊತೆಯೇ ಅಸಭ್ಯ ವರ್ತನೆ- ಈ ವಿಡಿಯೊ ನೋಡಿ

ವಿಡಿಯೊ ವೀಕ್ಷಿಸಿ:

ದಿನಾಂಕವನ್ನು ಬದಲಾಯಿಸಿದ ಮೌಂಟ್‌ ಬ್ಯಾಟನ್

ಎರಡನೇ ಮಹಾಯುದ್ಧದ ನಂತರ ಹಿಂದೆ ಸರಿಯಲು ಉತ್ಸುಕವಾಗಿದ್ದ ಮತ್ತು ಅಶಾಂತಿಯನ್ನು ಎದುರಿಸುತ್ತಿದ್ದ ಬ್ರಿಟಿಷ್ ಸರ್ಕಾರವು, ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ನಿರ್ಧರಿಸಿತು. ಲಾರ್ಡ್ ಮೌಂಟ್ ಬ್ಯಾಟನ್ ಘೋಷಿಸಿದ ಈ ಯೋಜನೆಯು ಮುಸ್ಲಿಮರಿಗೆ ಪಾಕಿಸ್ತಾನ ಮತ್ತು ಹಿಂದೂಗಳು ಮತ್ತು ಇತರ ಸಮುದಾಯಗಳಿಗೆ ಭಾರತವನ್ನು ರಚಿಸುವ ಪ್ರಸ್ತಾಪವನ್ನು ಹೊಂದಿತ್ತು.

ಸರ್ ಸಿರಿಲ್ ರಾಡ್‌ಕ್ಲಿಫ್ ಎಳೆದ ಗಡಿರೇಖೆಯು ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳನ್ನು ವಿಭಜಿಸಿತು. ಲಕ್ಷಾಂತರ ಹಿಂದೂಗಳು ಮತ್ತು ಸಿಖ್ಖರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರೆ, ಲಕ್ಷಾಂತರ ಮುಸ್ಲಿಮರು ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಬಂದರು.

ಈ ವಿಭಜನೆಯು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಅಂತ್ಯ ಮತ್ತು ಎರಡು ಸಾರ್ವಭೌಮ ರಾಷ್ಟ್ರಗಳ ಜನನವಾಗಿತ್ತು. ಸ್ವಾತಂತ್ರ್ಯವು ಜೂನ್ 1948ರವರೆಗೆ ಕಾಯುತ್ತಿದ್ದರೆ, ಭಾರತದ ರಾಜಕೀಯ ನಕ್ಷೆ ಮತ್ತು ಇತಿಹಾಸವು ಇಂದು ವಿಭಿನ್ನವಾಗಿರುತ್ತಿತ್ತು. ಅಂದರೆ ಅಖಂಡ ಭಾರತ ನಿರ್ಮಾಣವಾಗುತ್ತಿತ್ತು ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Viral Video: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ಕಾದಿತ್ತು ಶಾಕ್; ಆಚಾನಕ್ಕಾಗಿ ಸ್ಫೋಟಗೊಂಡ ಕೇಕ್!