Tragic Accident: ಮೇಲ್ಸೇತುವೆ ಮೇಲಿಂದ ಕೆಳಕ್ಕೆ ಬಿದ್ದ ಕಬ್ಬಿಣದ ತುಂಡುಗಳು; ಸ್ಕೂಟರ್ ಸವಾರ ಗಂಭೀರ, ಸಿಸಿಟಿವಿ ವಿಡಿಯೊ ವೈರಲ್
ಫ್ಲೈ ಓವರ್ ಮೂಲಕ ಹೋಗುತ್ತಿದ್ದ ಟೆಂಪೋವೊಂದು ಡಿಕ್ಕಿ ಹೊಡೆದ ರಭಸಕ್ಕೆ ಅದರಲ್ಲಿದ್ದ ಕಬ್ಬಿಣದ ತುಂಡುಗಳು 15ರಿಂದ 20 ಅಡಿಗಳಿಗಿಂತ ಕೆಳಗಿರುವ ರಸ್ತೆಗೆ ಬಿದ್ದಿದೆ. ಪರಿಣಾಮವಾಗಿ ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಸ್ಕೂಟರ್ ಸವಾರನ ಮೇಲೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಘಟನೆ ಪುಣೆಯಲ್ಲಿ ನಡೆದಿದೆ.


ಮುಂಬೈ: ಫ್ಲೈಓವರ್ ಮೇಲಿಂದ ಕಬ್ಬಿಣದ ತುಂಡುಗಳು ಸ್ಕೂಟರ್ ಸವಾರನ (Motor cycle) ಮೇಲೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನ ಭೋಸಾರಿ ಪ್ರದೇಶದಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನ ಈ ಭೀಕರ ಅಪಘಾತ (Tragic Accident) ಸಂಭವಿಸಿದೆ. ಈ ಭೀಕರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ (Viral Video) ಆಗಿದೆ.
ಭೋಸಾರಿ ಫ್ಲೈಓವರ್‌ನಿಂದ ಕಬ್ಬಿಣದ ತುಂಡು ಬಿದ್ದು ಸವಾರನಿಗೆ ತೀವ್ರ ಗಾಯವಾಗಿರುವ ದೃಶ್ಯಗಳು ಕಂಡುಬಂದಿವೆ. ಸ್ಕೂಟರ್ ಸವಾರ ಸ್ಥಳದಲ್ಲೇ ಪ್ರಜ್ಞೆ ತಪ್ಪಿದರು. ಛಾವಾ ಚೌಕ್ ಮೇಲಿನ ಫ್ಲೈಓವರ್ ಮೂಲಕ ಹೋಗುತ್ತಿದ್ದ ಟೆಂಪೋವೊಂದು ಮೇಲ್ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ, 15 ರಿಂದ 20 ಅಡಿಗಳಿಗಿಂತ ಹೆಚ್ಚು ಎತ್ತರದಿಂದ ಕಬ್ಬಿಣದ ತುಂಡುಗಳು ಕೆಳಕ್ಕೆ ಬಿದ್ದಿವೆ. ಈ ವೇಳೆ ದ್ವಿಚಕ್ರ ವಾಹನ ಸವಾರ ಅದೇ ರಸ್ತೆಯಲ್ಲೇ ಹೋಗುತ್ತಿದ್ದಾಗ ಆತನ ಮೇಲೆ ಬಿದ್ದಿದೆ.
ಇದನ್ನೂ ಓದಿ: Viral Video: ಲಬುಬು ಗೊಂಬೆಗೆ ಪೂಜೆ-ಪುನಸ್ಕಾರ ಮಾಡಿದ ಮಹಿಳೆ; ಇಲ್ಲಿದೆ ವಿಡಿಯೊ
ವಿಡಿಯೊ ವೀಕ್ಷಿಸಿ:
Pimpri-Chinchwad Horror: Iron Object Falls From Flyover Onto Two-Wheeler Rider’s Head In Bhosari; Victim Critical (VIDEO) pic.twitter.com/qbWPlkFt25
— Pune First (@Pune_First) August 14, 2025
ಘಟನೆಯ ನಂತರ ಭಯಭೀತರಾದ ಸ್ಥಳೀಯರು ಗಾಯಗೊಂಡ ದ್ವಿಚಕ್ರ ವಾಹನ ಸವಾರನ ಸಹಾಯಕ್ಕೆ ಧಾವಿಸಿದರು. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಳೆದ ವಾರ, ಪುಣೆಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ಪಿಕ್-ಅಪ್ ವ್ಯಾನ್ ಗುಡ್ಡಗಾಡು ಪ್ರದೇಶದಲ್ಲಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 10 ಮಹಿಳೆಯರು ಸಾವನ್ನಪ್ಪಿದ್ದರು. 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: Road Accident: ಭೀಕರ ಅಪಘಾತ; ಡೆಲಿವರಿ ಏಜೆಂಟ್ ದುರ್ಮರಣ