ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುಂಡಿ ಅಗೆದಿದ್ದು ಸಾಕು, ಬರ್ರಿ ವಾಪಸ್‌ !

ನ್ಯಾಯಾಧೀಶರ ಮುಂದೆ ಅನಾಮಿಕ ವ್ಯಕ್ತಿ ನೀಡಿದ್ದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದ ವಿಶೇಷ ತನಿಖಾ ತಂಡವು, ಕಳೆದ 15 ದಿನಗಳಿಂದ ವ್ಯಕ್ತಿ ತೋರಿಸಿದ ಜಾಗದಲ್ಲೆಲ್ಲ ಅಗೆದರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ ದಿನದಿಂದ ದಿನಕ್ಕೆ ರಾಜ್ಯ ಸರಕಾರ ಹಾಗೂ ಎಸ್‌ಐಟಿ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದರಿಂದ ಎಸ್‌ಐಟಿಯನ್ನು ವಿಸರ್ಜನೆ ಮಾಡಲು ಸರಕಾರ ತೀರ್ಮಾನಿಸಿದೆ.

ಅನಾಮಿಕ ತೋರಿಸಿದ ಕಡೆಯೆಲ್ಲಾ ಅಗೆದರೂ ಸಿಗದ ಅಸ್ಥಿಪಂಜರ

ಬುರುಡೆ ಪ್ರಹಸನಕೆ ಅಂತ ಹಾಡಲು ಮುಂದಾದ ಸರಕಾರ

ನಾಳೆಯಿಂದ ಎಸ್‌ಐಟಿ ತನಿಖೆ ಸ್ಥಗಿತಗೊಳಿಸಲು ನಿರ್ಧಾರ

ರಚನೆಯಾಗಿರುವ ಎಸ್‌ಐಟಿಯನ್ನು ವಿಸರ್ಜನೆಗೊಳಿಸಲು ಸೂಚನೆ

ಬೆಂಗಳೂರು: ಕಳೆದ 3 ವಾರಗಳಿಂದ ಧರ್ಮಸ್ಥಳದಲ್ಲಿ ನಡೆದ ‘ಬುರುಡೆ’ ಪ್ರಹಸನಕ್ಕೆ ಕೊನೆ ಹಾಡಲು ಸರಕಾರ ಮುಂದಾಗಿದ್ದು, ಸೋಮವಾರವೇ ಪ್ರಣಬ್ ಮೊಹಂತಿ ನೇತೃತ್ವದ ವಿಶೇಷ ತನಿಖಾ ತಂಡದ ತನಿಖೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ.

ನ್ಯಾಯಾಧೀಶರ ಮುಂದೆ ಅನಾಮಿಕ ವ್ಯಕ್ತಿ ನೀಡಿದ್ದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದ ವಿಶೇಷ ತನಿಖಾ ತಂಡವು, ಕಳೆದ 15 ದಿನಗಳಿಂದ ವ್ಯಕ್ತಿ ತೋರಿಸಿದ ಜಾಗದಲ್ಲೆಲ್ಲ ಅಗೆದರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ ದಿನದಿಂದ ದಿನಕ್ಕೆ ರಾಜ್ಯ ಸರಕಾರ ಹಾಗೂ ಎಸ್‌ಐಟಿ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದರಿಂದ ಎಸ್‌ಐಟಿಯನ್ನು ವಿಸರ್ಜನೆ ಮಾಡಲು ಸರಕಾರ ತೀರ್ಮಾನಿಸಿದೆ.

ಅನಾಮಿಕ ವ್ಯಕ್ತಿ ಈಗ ಹೊಸ ಹೊಸ ಸ್ಥಳಗಳನ್ನು ಗುರುತಿಸುವ ಜತೆಗೆ ಹೂತಿಟ್ಟ ಶವಗಳ ಸಂಖ್ಯೆ ಯಲ್ಲಿಯೂ ಏರಿಕೆ ಮಾಡುತ್ತಿದ್ದಾನೆ. ಇದರೊಂದಿಗೆ ವ್ಯಕ್ತಿ ನೀಡುತ್ತಿರುವ ಮಾಹಿತಿಯಲ್ಲಿ ಯಾವುದೇ ‘ಪುರಾವೆ’ ಇಲ್ಲ. ಎಸ್‌ಐಟಿ ಇರುವ ತನಕ ನಿತ್ಯ ಒಂದೊಂದು ಸುಳ್ಳು ಆರೋಪದ ಮೇಲೆ ದೂರು ದಾಖಲಿಸುವ ಸಾಧ್ಯತೆಯಿರುತ್ತದೆ. ದಾಖಲಾದ ಆರೋಪಗಳನ್ನು ತನಿಖೆ ನಡೆಸದಿದ್ದರೆ ನ್ಯಾಯಾಲಯದ ಕದತಟ್ಟುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: Dharmasthala chalo: ಅಪಪ್ರಚಾರ ಖಂಡಿಸಿ ಇಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ

ಆದ್ದರಿಂದ ಇದಕ್ಕೆ ಅವಕಾಶ ನೀಡದಿರಲು ಎಸ್‌ಐಟಿಯನ್ನೇ ವಜಾಗೊಳಿಸುವುದು ಸೂಕ್ತ ಎನ್ನುವ ಚರ್ಚೆ ಸರಕಾರದ ಮಟ್ಟದಲ್ಲಿ ನಡೆದಿದೆ. ಈ ವಿಷಯವನ್ನು ಗೃಹ ಇಲಾಖೆಗೂ ಮುಟ್ಟಿಸಿರುವ ಸರಕಾರ, ರಚನೆಯಾಗಿರುವ ಎಸ್‌ಐಟಿಯನ್ನು ಕಾನೂನಾತ್ಮಕವಾಗಿ ವಿಸರ್ಜನೆಗೊಳಿಸಲು ಸೂಚನೆ ನೀಡಿದೆ. ಆದ್ದರಿಂದ ಮಧ್ಯಂತರ ವರದಿ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ್ದ ಗೃಹ ಇಲಾಖೆ, ಸೋಮ ವಾರ ಗೃಹ ಸಚಿವ ಪರಮೇಶ್ವರ ಅವರು ಸದನದಲ್ಲಿ ಮಾಹಿತಿ ನೀಡಿದ ಬಳಿಕ ತನಿಖೆಯ ಪೂರ್ಣ ಪ್ರಮಾಣದ ವರದಿಯನ್ನು ಗೃಹ ಇಲಾಖೆಗೆ ಸಲ್ಲಿಸಲು ಸೂಚನೆ ನೀಡಲಾಗಿದೆ.

ಇದೇ ವರದಿಯನ್ನು ನ್ಯಾಯಾಲಯಕ್ಕೂ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಕೊನೆ ಹಾಡುವ ಲೆಕ್ಕಾಚಾರದಲ್ಲಿದೆ.

ಮುಂದೇನು?

ರಾಜ್ಯ ಸರಕಾರ ಎಸ್‌ಐಟಿಯನ್ನು ಸ್ಥಗಿತಗೊಳಿಸಿದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಗಳು ಬರುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಎಸ್‌ಐಟಿ ಬದಲಿಗೆ, ಸ್ಥಳೀಯ ಪೊಲೀಸ್ ಠಾಣೆ ಯಲ್ಲಿಯೇ ಸಾಮಾನ್ಯ ಪ್ರಕರಣ ಗಳಂತೆ ದೂರು ದಾಖಲಿಸಿಕೊಳ್ಳಲು ಸೂಚನೆ ನೀಡಲು ತೀರ್ಮಾನಿಸಲಾಗಿದೆ. ಒಂದು ವೇಳೆ ಯಾವುದಾದರೂ ಬಲವಾದ ಸಾಕ್ಷ್ಯಗಳು ಸಿಕ್ಕಿದ್ದೇ ಆದರೆ ಮುಂದಿನ ತೀರ್ಮಾನ ೆಗೆದುಕೊಳ್ಳಲು ಗೃಹ ಇಲಾಖೆ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ನಾಳೆ ಸರಕಾರದಿಂದ ಉತ್ತರ?

ಎಸ್‌ಐಟಿ ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿರುವ ರಾಜ್ಯ ಸರಕಾರ, ಸೋಮವಾರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವ ಮೂಲಕ ವಿವಾದವನ್ನು ಮುಗಿಸುವ ಪ್ರಯತ್ನಕ್ಕೆ ಕೈಹಾಕಿದೆ. ಗುರುವಾರ ಬಿಜೆಪಿ ನಾಯಕರು ನಿಯಮ ೬೯ರಲ್ಲಿ ಪ್ರಸ್ತಾಪಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಉತ್ತರಿಸುವುದಾಗಿ ಈಗಾಗಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದ್ದಾರೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದು, ಸೋಮವಾರ ಸುದೀರ್ಘ ಉತ್ತರ ನೀಡುವ ಸಾಧ್ಯತೆಯಿದೆ. ಉತ್ತರ ಸಮಯದಲ್ಲಿಯೇ, ಧರ್ಮಸ್ಥಳದ ಮಂಜುನಾಥ ಅಥವಾ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಅಪಮಾನಿಸುವ ಉದ್ದೇಶ ಸರಕಾರ ಹಾಗೂ ಪಕ್ಷದ್ದಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆಯಿದೆ.

*

ಅನಾಮಿಕ ವ್ಯಕ್ತಿ ತೋರಿಸಿದ ಎಲ್ಲ ಸ ಳಗಳು ಪೂರ್ಣಗೊಂಡರೂ ಅಸ್ಥಿಪಂಜರ ಸಿಕ್ಕಿಲ್ಲ

ಹೊಸ ಸ್ಥಳಗಳನ್ನು ಗುರುತಿಸುವ ಜತೆಗೆ ಹೂತಿಟ್ಟ ಶವಗಳ ಸಂಖ್ಯೆಯಲ್ಲಿಯೂ ಏರಿಕೆ

ರಾಜ್ಯ ಸರಕಾರ, ಎಸ್‌ಐಟಿ ವಿರುದ್ಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜನಾಕ್ರೋಶ

*

ಧರ್ಮಸ್ಥಳ ಚಲೋ ಅಭಿಯಾನ ಶುರು

ರಾಜ್ಯ ಸರಕಾರವೇ ಧರ್ಮಸ್ಥಳದ ಜತೆ ಇದೆ ಎಂದು ಹೇಳಿರುವ ಮಧ್ಯೆಯೇ, ನಾಡಿನ ಪ್ರಮುಖ ಧಾರ್ಮಿಕ ಸ್ಥಳದ ಪಾವಿತ್ರ್ಯತೆ ಹಾಳು ಮಾಡಿ ಅಪ ಪ್ರಚಾರ ನಡೆಸಲಾಗುತ್ತಿದೆ. ಕೂಡಲೇ ಇದಕ್ಕೆಲ್ಲ ತಡೆ ಹಾಕಬೇಕು ಎಂದು ಆಗ್ರಹಿಸಿ ಬಿಜೆಪಿ ಧರ್ಮಸ್ಥಳ ಚಲೋ ಅಭಿಯಾನ ನಡೆಸಿದ್ದು, ಶನಿವಾರ ದೇವಳಕ್ಕೆ ಪಕ್ಷದ ನಾಯಕರು ಭೇಟಿ ನೀಡಲಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ಖಂಡಿಸಿ ನಡೆದಿರುವ ಈ ಧರ್ಮಸ್ಥಳ ಚಲೋ ಅಭಿಮಾನಕ್ಕೆ ನೆಲಮಂಗಲದ ಟೋಲ್ ಬಳಿ ಶಾಸಕ ಎಸ್.ಆರ್.ವಿಶ್ವನಾಥ್ ಪೂಜೆ ನೆರವೇರಿಸಿ ಯಾತ್ರೆಗೆ ಚಾಲನೆ ನೀಡಿದರು.

ಸುಮಾರು 300ಕ್ಕೂ ಹೆಚ್ಚು ವಾಹನಗಳಲ್ಲಿ ಭಕ್ತರು ಧರ್ಮಸ್ಥಳ ಚಲೋ ನಡೆಸಿದ್ದು, ಶನಿವಾರ ಸಂಜೆ ಇವರೆಲ್ಲ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಯ ದರ್ಶನ ಪಡೆದು ಅಲ್ಲಿಯೇ ವಾಸ್ತವ್ಯ ಹೂಡಿ, ಭಾನುವಾರ ಸಂಕಲ್ಪ ಪೂಜೆ ನೆರವೇರಿಸುವರು.

ನೆಲಮಂಗಲ-ಕುಣಿಗಲ್ ರಸ್ತೆಯ ಮಾರ್ಗವಾಗಿ ಹಾಸನದಿಂದ ಸಕಲೇಶಪುರದ ಮೂಲಕ ಶಿರಾಡಿಘಾಟ್ ರಸ್ತೆ ಮಾರ್ಗವಾಗಿ ರ‍್ಯಾಲಿ ಧರ್ಮಸ್ಥಳಕ್ಕೆ ತೆರಳಿದೆ. ರ‍್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಿಂದೂ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಕರ್ನಾಟಕದಾದ್ಯಂತ ದೇವಾಲಯದ ಪಾವಿತ್ರ್ಯವನ್ನು ರಕ್ಷಿಸಲು ಧರ್ಮಸ್ಥಳದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳುವುದು ರ‍್ಯಾಲಿಯ ಪ್ರಮುಖ ಉದ್ದೇಶವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗ ದಲ್ಲಿರುತ್ತಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ಖಂಡಿಸಿ ಧರ್ಮಸ್ಥಳ ಚಲೋ ಅಭಿಮಾನಕ್ಕೆ ಸೂಚಿಸಿದ್ದಾರೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ 30-35 ಶಾಸಕರು ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ದೇವಾಲಯ ಭೇಟಿಯ ನಂತರ ಕಾರ‍್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕೈ ನಾಯಕರು

ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯ ಸಿಗದಿರುವುರಿಂದ ಧರ್ಮಸ್ಥಳದ ಪರವಾಗಿ ಭಕ್ತರು ನಿಂತಿದ್ದಾರೆ. ಈ ವಿಷಯವನ್ನು ಬಿಜೆಪಿ ನಾಯಕರು ಬಳಸಿಕೊಳ್ಳಲು ಮುಂದಾಗಿರುವುದು ಸ್ಪಷ್ಟವಾಗುತ್ತಿದ್ದಂತೆ, ಕಾಂಗ್ರೆಸ್ ಧರ್ಮಸ್ಥಳದ ಪರವಾಗಿ ಧ್ವನಿಯಾಗಲು ತೀರ್ಮಾನಿಸಿದೆ.