ಸಂಬಂಧಗಳಿಗೆ ಮಠದ ಗೋಡೆಗಳಿಲ್ಲ; ಮಾನವೀಯ ಗುಣಗಳಿಗೆ ಗಡಿಗಳಿಲ್ಲ
ಅಧಿಕಾರ, ಸ್ಥಾನಮಾನ, ಪಂಥ, ಪರಂಪರೆಗಳ ಅಂತರವಿರಲಿಲ್ಲ. ಉಳಿದದ್ದು ಕೇವಲ ಸಹೃದಯತೆ ಮತ್ತು ಕಾಳಜಿ. ಮಠಗಳು ಬೇರೆ. ಪರಂಪರೆಗಳು ಬೇರೆ. ಆರಾಧನಾ ವಿಧಾನಗಳು ಬೇರೆ. ಆದರೆ ನೋವಿನ ಸಂದರ್ಭದಲ್ಲಿ ಒಬ್ಬರ ಬಳಿಗೆ ಮತ್ತೊಬ್ಬರು ನಿಲ್ಲುವ ಹೃದಯ ಮಾತ್ರ ಒಂದೇ. ಇಂತಹ ಸಂದರ್ಭಗಳೇ ನಿಜವಾದ ಧಾರ್ಮಿಕತೆಯ ಅರ್ಥವನ್ನು ನಮಗೆ ನೆನಪಿಸುತ್ತವೆ. ಧರ್ಮವೆಂದರೆ ಕೇವಲ ಆಚರಣೆಗಳಲ್ಲ; ಇನ್ನೊಬ್ಬರ ಸಂಕಷ್ಟವನ್ನು ಅರಿತು, ಅವರ ಪಕ್ಕದಲ್ಲಿ ನಿಲ್ಲುವುದೇ ಧರ್ಮ.