ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏನೇ ಆದರೂ ಮುಸುಕುಧಾರಿಗೆ ಸಂಕಷ್ಟ ?

ಇಷ್ಟು ವರ್ಷಗಳ ಕಾಲ ಅದನ್ನು ಬಹಿರಂಗಪಡಿಸದೇ ಇದಿದ್ದು ಹಾಗೂ ಶವವನ್ನು ಹೂತಿಡುವ ಮೂಲಕ ಕೊಲೆಗೆ ಸಹಕರಿಸಿದ್ದಾನೆ ಎನ್ನುವ ಆರೋಪದಲ್ಲಿ ಶಿಕ್ಷೆ ವಿಧಿಸಬಹುದು. ಇದರೊಂದಿಗೆ ಆರಂಭದಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗುವ ಸಮಯದಲ್ಲಿ ಬುರುಡೆಯೊಂದನ್ನು ಹಿಡಿದು ಕೊಂಡು ಹೇಳಿಕೆ ನೀಡಿದ್ದ. ಇದೀಗ ಎಸ್‌ಐಟಿ ಅಧಿಕಾರಿಗಳು ಈ ಬುರುಡೆಗೂ ಈ ವ್ಯಕ್ತಿಗೂ ಸಂಬಂಧ ವೇನು ಎನ್ನುವ ತನಿಖೆಯನ್ನು ಆರಂಭಿಸುತ್ತಾರೆ.

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದ ಧರ್ಮಸ್ಥಳ ಅನಾಮಧೇಯ ವ್ಯಕ್ತಿಯ ‘ಬುರುಡೆ’ ಪ್ರಕರಣದ ಮುಂದಿನ ತನಿಖೆ ಹೇಗೇ ನಡೆದರೂ, ಮುಸುಕುಧಾರಿ ವ್ಯಕ್ತಿಗೆ ಸಂಕಷ್ಟ ಎದುರಾಗುವುದು ಸ್ಪಷ್ಟವಾಗಿದೆ. ಹೌದು, ಶವಗಳನ್ನು ಹೂತಿಟ್ಟಿದ್ದೆ ಎನ್ನುವ ಆರೋಪ ಮಾಡಿ ತೋರಿಸಿದ್ದ ಯಾವ ಸ್ಥಳದಲ್ಲಿಯೂ ಯಾವುದೇ ಕುರುಹುಗಳು ಸಿಕ್ಕಿಲ್ಲ. ಆದರೆ ವ್ಯಕ್ತಿಯೇ ಈಗಾಗಲೇ ನೂರಾರು ಶವಗಳನ್ನು ಹೂತಿಟ್ಟಿದ್ದೆ ಎಂದು ಒಪ್ಪಿಕೊಂಡಿರುವುದರಿಂದ ಇದೇ ಹೇಳಿಕೆಯ ಆಧಾರದಲ್ಲಿ ಆತನ ವಿರುದ್ಧ ಕಾನೂನಾತ್ಮಕ ಕ್ರಮ ವಹಿಸಬಹುದು. ಏಕೆಂದರೆ, ಆತನೇ ಹೇಳಿರು ವಂತೆ ಇನ್ಯಾರೋ ಕೊಲೆ ಮಾಡಿದ್ದ ಶವಗಳನ್ನು ಈತ ಹೂತಿಟ್ಟಿದ್ದಾರೆ.

ಇಷ್ಟು ವರ್ಷಗಳ ಕಾಲ ಅದನ್ನು ಬಹಿರಂಗಪಡಿಸದೇ ಇದಿದ್ದು ಹಾಗೂ ಶವವನ್ನು ಹೂತಿಡುವ ಮೂಲಕ ಕೊಲೆಗೆ ಸಹಕರಿಸಿದ್ದಾನೆ ಎನ್ನುವ ಆರೋಪದಲ್ಲಿ ಶಿಕ್ಷೆ ವಿಧಿಸಬಹುದು. ಇದರೊಂದಿಗೆ ಆರಂಭದಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗುವ ಸಮಯದಲ್ಲಿ ಬುರುಡೆಯೊಂದನ್ನು ಹಿಡಿದುಕೊಂಡು ಹೇಳಿಕೆ ನೀಡಿದ್ದ. ಇದೀಗ ಎಸ್‌ಐಟಿ ಅಧಿಕಾರಿಗಳು ಈ ಬುರುಡೆಗೂ ಈ ವ್ಯಕ್ತಿಗೂ ಸಂಬಂಧವೇನು ಎನ್ನುವ ತನಿಖೆಯನ್ನು ಆರಂಭಿಸುತ್ತಾರೆ.

ಈ ಬುರುಡೆಯನ್ನು ತಂದಿದ್ದು ಸಹ ಅಪರಾಧವಾಗಿರುವುದರಿಂದ ಈ ಪ್ರಕರಣದಲ್ಲಿಯೂ ಕ್ರಮ ವಹಿಸಲು ಅವಕಾಶವಿರುತ್ತದೆ. ಈ ಎರಡನ್ನೂ ಮೀರಿ, ವ್ಯಕ್ತಿ ಹೇಳಿದ ಯಾವ ಜಾಗದಲ್ಲಿಯೂ ಸಾಕ್ಷ್ಯ ಸಿಗದಿರುವುದರಿಂದ ಇದನ್ನೇ ಮುಂದಿಟ್ಟುಕೊಂಡು ಸುಳ್ಳು ಸಾಕ್ಷ್ಯ, ಸುಳ್ಳು ಹೇಳಿಕೆ ನೀಡಿದ ಆರೋಪದಲ್ಲಿಯೂ ಆತನ ವಿರುದ್ಧ ಕ್ರಮ ವಹಿಸಲು ಅವಕಾಶವಿದೆ.

ಇದನ್ನೂ ಓದಿ: Dharmasthala Case: ಧರ್ಮಸ್ಥಳ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದವರಿಗೆ ಎಸ್‌ಐಟಿ ನೋಟಿಸ್

ಇನ್ನು ಯಾವುದೇ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸಾಕ್ಷ್ಯ ನೀಡುವ ಅಥವಾ ಸೃಷ್ಟಿಸುವ ಯಾರೇ ಆಗಲಿ, ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಎರಡರಲ್ಲಿ ಒಂದು ವಿವರಣೆಯ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ಐದು ಸಾವಿರ ರು.ವರೆಗೆ ವಿಸ್ತರಿಸಬಹು ದಾದ ದಂಡಕ್ಕೂ ಗುರಿಯಾಗುತ್ತಾರೆ. ಇದೀಗ ಅನಾಮಧೇಯ ವ್ಯಕ್ತಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿರುವುದರಿಂದ, ಎಸ್‌ಐಟಿ ತನಿಖೆಯಲ್ಲಿ ಅನಾಮಧೇಯ ವ್ಯಕ್ತಿಯ ಆರೋಪದಲ್ಲಿ ಹುರುಳಿಲ್ಲ ಎನ್ನುವುದು ಸಾಬೀತಾದರೆ ಶಿಕ್ಷೆ ವಿಧಿಸಲು ಅವಕಾಶವಿದೆ ಎನ್ನುತ್ತಾರೆ ಕಾನೂನು ತಜ್ಞರು.

ಸುಳ್ಳು ಸಾಕ್ಷ್ಯ ನೀಡಿದ್ದರೂ ಶಿಕ್ಷೆಗೆ ಅವಕಾಶ

ಯಾವುದೇ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಾಗೂ ಪೊಲೀಸರಿಂದ ನ್ಯಾಯ ಸಿಗುವುದಿಲ್ಲ ಎನ್ನುವ ಆತಂಕವಿದ್ದರೆ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಕಾನೂನಿ ನಲ್ಲಿ ಅವಕಾಶವಿರುತ್ತದೆ. ಒಂದು ವೇಳೆ ಸರಕಾರಿ ವ್ಯವಸ್ಥೆಯನ್ನು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುವಂತೆ ಸುಳ್ಳು ಹೇಳಿಕೆ ಅಥವಾ ಸಾಕ್ಷ್ಯ ನೀಡಿದರೆ ಆತನ ವಿರುದ್ಧ ಕ್ರಮ ವಹಿಸಲು ಕಾನೂನಿನಲ್ಲಿ ಅವಕಾಶವಿದೆ. ಅದರಲ್ಲಿಯೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವ ಕವಾಗಿ ಸುಳ್ಳು ಸಾಕ್ಷ್ಯವನ್ನು ನೀಡುವ ಅಥವಾ ಸೃಷ್ಟಿಸುವ ಪ್ರಯತ್ನ ಮಾಡಿದರೆ ಏಳು ವರ್ಷಗಳ ವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರು.ವರೆಗೆ ವಿಸ್ತರಿಸಬಹು ದಾದ ದಂಡ ವಿಧಿಸಲು ಅವಕಾಶವಿದೆ.

ನ್ಯಾಯಾಲಯದಲ್ಲಿಯೂ ಪ್ರಶ್ನಿಸುವ ಸಾಧ್ಯತೆ

ಆರಂಭದಲ್ಲಿ ಅನಾಮಧೇಯ ವ್ಯಕ್ತಿ ಹೇಳಿದ ಕಡೆಯಲ್ಲ ಗುಂಡಿ ಅಗೆದು ಸಾರ್ವಜನಿಕ ವಲಯ ದಲ್ಲಿ ತೀವ್ರ ವಿವಾದಕ್ಕೆ ಕಾರಣವಾದ ಎಸ್‌ಐಟಿ ನಡೆಯಿಂದ ಸರಕಾರಕ್ಕೂ ಮುಜುಗರ ಉಂಟಾಯಿತು. ಆರಂಭದಲ್ಲಿ ಅನಾಮಧೇಯ ವ್ಯಕ್ತಿ ಹೇಳಿದ್ದ ಗುಂಡಿಗಳೊಂದಿಗೆ ಹೆಚ್ಚುವರಿ ಮೂರು ಗುಂಡಿಗಳನ್ನು ತೋಡಿದರೂ ಯಾವುದೇ ಕುರುಹು ಸಿಗಲಿಲ್ಲ.

ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗಿದ್ದರಿಂದ ಎಸ್‌ಐಟಿಯನ್ನು ವಿಸರ್ಜನೆ ಮಾಡುವ ತೀರ್ಮಾನಕ್ಕೆ ಸರಕಾರ ಬಂದಿತ್ತು. ಆದರೀಗ ಏಕಾಏಕಿ ಎಸ್‌ಐಟಿಯನ್ನು ರದ್ದುಪಡಿಸಿದರೆ ತನಿಖಾ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ವಿಸರ್ಜನೆ ಮಾಡಿರುವುದನ್ನು ಪ್ರಶ್ನಿಸಿ ಅನಾಮಧೇಯ ವ್ಯಕ್ತಿ ಹಾಗೂ ಆತನ ‘ಬೆನ್ನಿಗೆ’ ಇರುವ ಶಕ್ತಿಗಳು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ.

ಇದರೊಂದಿಗೆ, ಈ ಹಿಂದೆ ಮುಸುಕುಧಾರಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದಾಗ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದರು. ಇದೀಗ ಏಕಾಏಕಿ ಎಸ್‌ಐಟಿ ರದ್ದಾದರೆ ಸ್ಥಳೀಯ ಪೊಲೀಸರಾದರೂ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು. ಆದ್ದರಿಂದ ಈ ಗೊಂದಲಗಳಿಗೆ ಆಸ್ಪದ ನೀಡುವ ಬದಲು, ‘ಗುಂಡಿ’ ಅಗೆಯುವುದನ್ನು ಬಿಟ್ಟು ಇನ್ನುಳಿದ ತನಖೆ ನಡೆಸುವುದು ಸೂಕ್ತ ಎನ್ನುವ ಚರ್ಚೆಗಳು ಕೇಳಿಬಂದಿದೆ. ಮುಂದಿನ ದಿನದಲ್ಲಿ ಅನಾಮಿಕ ವ್ಯಕ್ತಿ ನ್ಯಾಯಾಽಶರ ಮುಂದೆ ತಂದಿದ್ದ ಬುರುಡೆಯ ತನಿಖೆ ಸೇರಿದಂತೆ ಆತನ ಹಿನ್ನಲೆ ಹಾಗೂ ಆತನ ಹಿಂದಿರುವ ಶಕ್ತಿಗಳು ಯಾವುದು ಎನ್ನುವ ವಿಷಯದ ಮೇಲೆ ಹೆಚ್ಚು ಗಮನ ಹರಿಸಲು ಎಸ್ ಐಟಿಗೆ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.