ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ಆ್ಯಪ್‌ನಲ್ಲಿ ದೈನಂದಿನ ಕೆಲಸಗಳ ಬುಕ್ಕಿಂಗ್, ಟ್ರ್ಯಾಕಿಂಗ್ ಹಾಗೂ ಪಾವತಿ ಸೌಲಭ್ಯ

ಸಾಮಾನ್ಯವಾಗಿ ಇತರೆ ಆ್ಯಪ್‌ಗಳು ಗ್ರಾಹಕರು ಮತ್ತು ಕೆಲಸಗಾರರ ನಡುವೆ ಕೇವಲ ಸಂಪರ್ಕ ಕಲ್ಪಿಸುವ ಮಧ್ಯವರ್ತಿ ವೇದಿಕೆಗಳಾಗಿ ಮಾತ್ರ ಕೆಲಸ ಮಾಡುತ್ತವೆ. ಆದರೆ ಟಿಮ್‌ಬಕ್‌ಡೂ ಇದಕ್ಕಿಂತ ಭಿನ್ನವಾಗಿ ಸಂಪೂರ್ಣ ಮ್ಯಾನೇಜ್ಡ್ ಸರ್ವಿಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಗ್ರಾಹಕರು ಕೆಲಸವನ್ನು ಬುಕ್ ಮಾಡಿದಾಗಿನಿಂದ ಅದು ಪೂರ್ಣಗೊಳ್ಳುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಸಂಸ್ಥೆಯೇ ವಹಿಸಿಕೊಳ್ಳುತ್ತದೆ.

ಬೆಂಗಳೂರು: ಮನೆ ಮತ್ತು ವ್ಯಾಪಾರ ಸಂಸ್ಥೆಗಳ ದೈನಂದಿನ ಅಗತ್ಯ ಕೆಲಸಗಳನ್ನು ಸುಲಭ ಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಟಿಮ್‌ಬಕ್‌ಡೂ ಕನ್ಸ್ಯೂಮರ್ ಟೆಕ್ ಸಂಸ್ಥೆಯು ವಿನೂತನ ಆ್ಯಪ್ ಸೇವೆಯನ್ನು ಒದಗಿಸುತ್ತಿದೆ. ದೈನಂದಿನ ಬದುಕಿನ ಅನುಕೂಲಕ್ಕಾಗಿ ಈ ವೇದಿಕೆಯ ಮೂಲಕ, ಗ್ರಾಹಕರು ಮತ್ತು ಉದ್ಯಮಗಳು ತಮ್ಮ ಅಗತ್ಯ ಕೆಲಸಗಳನ್ನು ಒಂದೇ ಆ್ಯಪ್‌ನಲ್ಲಿ ಬುಕ್ ಮಾಡಲು, ಕೆಲಸದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಹಾಗೂ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಾಮಾನ್ಯವಾಗಿ ಇತರೆ ಆ್ಯಪ್‌ಗಳು ಗ್ರಾಹಕರು ಮತ್ತು ಕೆಲಸಗಾರರ ನಡುವೆ ಕೇವಲ ಸಂಪರ್ಕ ಕಲ್ಪಿಸುವ ಮಧ್ಯವರ್ತಿ ವೇದಿಕೆಗಳಾಗಿ ಮಾತ್ರ ಕೆಲಸ ಮಾಡುತ್ತವೆ. ಆದರೆ ಟಿಮ್‌ಬಕ್‌ಡೂ ಇದಕ್ಕಿಂತ ಭಿನ್ನವಾಗಿ ಸಂಪೂರ್ಣ ಮ್ಯಾನೇಜ್ಡ್ ಸರ್ವಿಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಗ್ರಾಹಕರು ಕೆಲಸವನ್ನು ಬುಕ್ ಮಾಡಿದಾಗಿನಿಂದ ಅದು ಪೂರ್ಣಗೊಳ್ಳುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಸಂಸ್ಥೆಯೇ ವಹಿಸಿಕೊಳ್ಳುತ್ತದೆ. ತನ್ನದೇ ಆದ ತಂತ್ರಜ್ಞಾನದ ಮೂಲಕ ಆಯಾ ಕೆಲಸಕ್ಕೆ ಸೂಕ್ತರಾದವರನ್ನು ಆಯ್ಕೆ ಮಾಡಿ, ಸೇವೆಯ ಗುಣಮಟ್ಟವನ್ನು ಖಾತರಿಪಡಿಸುತ್ತದೆ.

ಟಿಮ್‌ಬಕ್‌ಡೂ ಸಂಸ್ಥೆಯು ರೂಪಿಸುತ್ತಿರುವ ಹೊಸ ಸೇವಾ ವಿಭಾಗವೇ ನ್ಯೂ ಕಾಲರ್. ಇದರಲ್ಲಿ ಮನೆ ಹಾಗೂ ಕಚೇರಿಗಳ ದೈನಂದಿನ ಕೆಲಸಗಳನ್ನು ವಿದ್ಯಾವಂತ ಕಾಲೇಜು ವಿದ್ಯಾರ್ಥಿಗಳು ನಿರ್ವಹಿಸುತ್ತಾರೆ. ಈ ವಿದ್ಯಾರ್ಥಿಗಳನ್ನು ಸಂಸ್ಥೆಯೇ ಪರಿಶೀಲಿಸಿ, ಸೂಕ್ತ ತರಬೇತಿ ನೀಡಿ, ಗುಣಮಟ್ಟದ ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಗ್ರಾಹಕರ ಸೇವೆಗೆ ನಿಯೋಜಿಸುತ್ತದೆ. ಇದರಿಂದ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಸಿಗುವುದರ ಜೊತೆಗೆ, ಕಾಲೇಜು ವಿದ್ಯಾರ್ಥಿಗಳಿಗೂ ಉತ್ತಮ ಅವಕಾಶ ದೊರೆಯುತ್ತದೆ.

ಇದನ್ನೂ ಓದಿ: Bangalore News: ​ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ

ಈ ವೇದಿಕೆಯಲ್ಲಿ ದೈನಂದಿನ ಕೆಲಸಗಳನ್ನು ಮಾಡಿಕೊಡುವ ಕಾಲೇಜು ವಿದ್ಯಾರ್ಥಿಗಳನ್ನು ಪ್ರೊ ಎಂದು ಗುರುತಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿಯನ್ನು ಸೇವೆಗೆ ಸೇರ್ಪಡೆಗೊಳಿಸುವ ಮುನ್ನ, ಡಿಜಿಲಾಕರ್ ಆಧಾರಿತ ಕೆವೈಸಿ ಪರಿಶೀಲನೆ ನಡೆಸುವುದು ಕಡ್ಡಾಯವಾಗಿದೆ. ಇದರೊಂದಿಗೆ ಸಂಸ್ಥೆಯಿಂದ ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ. ಸಮಯಪ್ರಜ್ಞೆ, ಸಮರ್ಥತೆ, ಚಾಕಚಕ್ಯತೆ ಹಾಗೂ ಯಾವುದೇ ದೈನಂದಿನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಿದ್ಧತೆ ಹೊಂದಿರುವ ಕಾರಣ ಇವರನ್ನು ಸ್ಟ್ರೀಟ್ ಸ್ಮಾರ್ಟ್ ಎಂದು ಕರೆಯಲಾಗುತ್ತದೆ.

ಯಾವುದೇ ಕೆಲಸಕ್ಕೂ ಸ್ಟ್ರೀಟ್ ಸ್ಮಾರ್ಟ್ ಪ್ರೊ ಅವರನ್ನು ನೇಮಿಸಿಕೊಳ್ಳಿ ಎಂಬ ಸಂದೇಶದೊಂದಿಗೆ ಸಂಸ್ಥೆಯು ಗ್ರಾಹಕರನ್ನು ತಲುಪುತ್ತಿದೆ. ಜೊತೆಗೆ, ವಿ ಡೂ ದ್ಯಾಟ್ ಟೂ ಎಂಬುದು ಸಂಸ್ಥೆಯ ಪ್ರಮುಖ ಬ್ರ್ಯಾಂಡ್ ಟ್ಯಾಗ್‌ಲೈನ್ ಆಗಿದೆ. ಈ ವಿನೂತನ ವೇದಿಕೆಗೆ ನಟ ಪ್ರತೀಕ್ ಗಾಂಧಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಸಂಸ್ಥೆಯಲ್ಲಿ ಅವರು ಚೀಫ್ ಬ್ರೋ ಆಫೀಸರ್ ಎಂಬ ವಿಶೇಷ ಹುದ್ದೆಯನ್ನೂ ನಿಭಾಯಿಸುತ್ತಿದ್ದಾರೆ.