ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿತ್ವಾ ಚಂಡಮಾರುತ ಎಫೆಕ್ಟ್: 54 ವಿಮಾನ ಸಂಚಾರ ರದ್ದು

ದಿತ್ವಾ ಚಂಡಮಾರುತದ ಪರಿಣಾಮ ತಮಿಳುನಾಡು ಜಿಲ್ಲೆಯಲ್ಲಿ 54 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಚೆನ್ನೈನಿಂದ ತೂತುಕುಡಿ, ಮಧುರೈ ಮತ್ತು ತಿರುಚ್ಚಿಗೆ ಹೋಗುವ ಹಾಗೂ ತೂತುಕುಡಿ, ತಿರುಚ್ಚಿ ಮತ್ತು ಮಧುರೈನಿಂದ ಚೆನ್ನೈಗೆ ಬರುವ ವಿಮಾನ ಹಾರಾಟಗಳನ್ನು ರದ್ದುಗೊಳಿಸಿರುವುದಾಗಿ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಚೆನ್ನೈ: ದಕ್ಷಿಣ ಭಾರತದಲ್ಲಿ ಈಗಾಗಲೇ ದಿತ್ವಾ ಚಂಡಮಾರುತದ (Ditwah Cyclone) ಪರಿಣಾಮ ಕಾಣಿಸಿಕೊಂಡಿದೆ. ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ತಮಿಳುನಾಡಿನ (tamilnadu) ಹಲವು ಜಿಲ್ಲೆಗಳಲ್ಲಿ ಒಟ್ಟು 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಚೆನ್ನೈನಿಂದ (chennai) ತೂತುಕುಡಿ, ಮಧುರೈ ಮತ್ತು ತಿರುಚ್ಚಿಗೆ ಹೋಗುವ ಹಾಗೂ ತೂತುಕುಡಿ, ತಿರುಚ್ಚಿ ಮತ್ತು ಮಧುರೈನಿಂದ ಚೆನ್ನೈಗೆ ಬರುವ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಚೆನ್ನೈ ವಿಮಾನ ನಿಲ್ದಾಣದ (chennai airport) ಅಧಿಕಾರಿಗಳು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿತ್ವಾ ಚಂಡಮಾರುತವು ತಮಿಳುನಾಡಿನಿಂದ ದಕ್ಷಿಣ ಮತ್ತು ಮಧ್ಯ ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರಿಂದ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಚೆನ್ನೈನಿಂದ ತೂತುಕುಡಿ, ಮಧುರೈ ಮತ್ತು ತಿರುಚ್ಚಿಗೆ ಹೋಗುವ 16 ವಿಮಾನಗಳು ಹಾಗೂ ತೂತುಕುಡಿ, ತಿರುಚ್ಚಿ ಮತ್ತು ಮಧುರೈನಿಂದ ಚೆನ್ನೈಗೆ ಆಗಮಿಸುವ 16 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ ಮಧುರೈ, ತಿರುಚ್ಚಿ ಮತ್ತು ಪುದುಚೇರಿಯಿಂದ ಬೆಂಗಳೂರು ಮತ್ತು ಹೈದರಾಬಾದ್‌ಗೆ ಹೋಗುವ 22 ವಿಮಾನಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ.

ದಿತ್ವಾ ಚಂಡಮಾರುತ: ನವೆಂಬರ್ 30ರಿಂದ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಚೆನ್ನೈ, ಮಧುರೈ, ತಿರುಚ್ಚಿ, ತೂತುಕುಡಿ ಮತ್ತು ಹತ್ತಿರದ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಿಸುವ ಎಲ್ಲಾ ಸಣ್ಣ ವಿಮಾನಗಳ ಹಾರಾಟವನ್ನು ಕೂಡ ಭಾನುವಾರ ಸ್ಥಗಿತಗೊಳಿಸಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ವಿವರಗಳು, ವಿಮಾನ ಹಾರಾಟದ ಪರಿಸ್ಥಿತಿ, ಪ್ರಯಾಣವನ್ನು ಮರು ನಿಗದಿಪಡಿಸಲು ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚಿಸಿದ್ದಾರೆ.

ದಿತ್ವಾ ಚಂಡಮಾರುತದಿಂದ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಲವು ಭಾಗಗಳಲ್ಲಿ ಕಿತ್ತಳೆ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ದಿತ್ವಾ ಚಂಡಮಾರುತವು ಶ್ರೀಲಂಕಾದ ಕರಾವಳಿ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯನ್ನು ದಾಟಿ ತಮಿಳುನಾಡು ಮತ್ತು ಪುದುಚೇರಿಯ ಉತ್ತರ ಕರಾವಳಿಯ ಕಡೆಗೆ ಸಂಚರಿಸುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ಭಾರತೀಯ ಭಾರತ ಹವಾಮಾನ ಇಲಾಖೆ ಅರೇಂಜ್ ಅಲರ್ಟ್ ಅನ್ನು ಘೋಷಿಸಿದೆ. ನೆರೆ ಹೊರೆಯ ರಾಜ್ಯಗಳಲ್ಲೂ ಭಾರಿ ಗಾಳಿ, ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.

Cyclone Alert: ಸೆನ್ಯಾರ್ ಚಂಡಮಾರುತ- 48 ಗಂಟೆಗಳಲ್ಲಿ ರಣ ಭೀಕರ ಮಳೆ ಸಾಧ್ಯತೆ- ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್!

ಭಾರಿ ಮಳೆ ಹಿನ್ನೆಲೆಯಲ್ಲಿ ವಿಲ್ಲುಪುರಂ ಜಿಲ್ಲಾಡಳಿತವು ಶನಿವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿತ್ತು. ವಿಶೇಷ ತರಗತಿಗಳು ಅಥವಾ ಪರೀಕ್ಷೆಗಳನ್ನು ನಡೆಸದಂತೆ ಸೂಚನೆ ನೀಡಿತ್ತು. ಜಿಲ್ಲೆಯ ಒಟ್ಟು 103 ಸ್ಥಳಗಳನ್ನು ದುರ್ಬಲ ಪ್ರದೇಶಗಳೆಂದು ಗುರುತಿಸಲಾಗಿದೆ ಎಂದು ಹೇಳಿದೆ.

ವಿಪತ್ತು ಸಾಧ್ಯತೆ ಹಿನ್ನೆಯಲ್ಲಿ ಜಿಲ್ಲೆಯ 103 ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ 55 ದೋಣಿಗಳನ್ನು ಸಿದ್ಧಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ವಿಲ್ಲುಪುರಂ ಜಿಲ್ಲೆಗೆ ಆಗಮಿಸಿದೆ. ಕರಾವಳಿ ಪ್ರದೇಶದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author