ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dust storms: ದೆಹಲಿಯಲ್ಲಿ ಭಾರೀ ಬಿರುಗಾಳಿ; ರೆಡ್‌ ಅಲರ್ಟ್‌ ಘೋಷಣೆ

Dust storms:ಭೀಕರ ಬಿರುಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಲವು ಅನಾಹುತಗಳು ಸಂಭವಿಸಿವೆ. ಮಂಡಿ ಹೌಸ್ ಮತ್ತು ದೆಹಲಿ ಗೇಟ್‌ನಂತಹ ಪ್ರಮುಖ ಸ್ಥಳಗಳು ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಬಲವಾದ ಗಾಳಿಯಿಂದಾಗಿ ಮರಗಳ ಕೊಂಬೆಗಳು ಬಿದ್ದಿವೆ. ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿರುವ ವಾಹನಗಳ ಮೇಲೆ ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಇನ್ನುಹಲವಾರು ಕಡೆಗಳಲ್ಲಿಸಂಚಾರ ಅಸ್ತವ್ಯಸ್ತವಾಗಿದೆ.

ಭಾರೀ ಬಿರುಗಾಳಿಗೆ ಡೆಲ್ಲಿ ಜನ ತತ್ತರ; ರೆಡ್‌ ಅಲರ್ಟ್‌ ಘೋಷಣೆ

Profile Rakshita Karkera Apr 11, 2025 8:02 PM

ನವದೆಹಲಿ: ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಗೆ ಸಿಲುಕಿ ಬೇಸತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಸಂಜೆ ಭೀಕರ ಧೂಳು ಮಿಶ್ರಿತ ಬಿರುಗಾಳಿ(Dust Storms) ಬೀಸಿದೆ. ಇನ್ನು ದಟ್ಟ ಮೋಡ ತುಂಬಿದ ವಾತಾವರಣ ಇದ್ದು, ಸಂಜೆಯಿಂದಲೇ ಭಾರೀ ಗಾಳಿ ಬೀಸುತ್ತಿದೆ. ಹವಾಮಾನದಲ್ಲಿನ ಹಠಾತ್ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಹವಾಮಾನ ಇಲಾಖೆ (IMD) ನಗರಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ಇದು ರಾತ್ರಿ 9 ಗಂಟೆಯವರೆಗೆ ಈ ಹೈಅಲರ್ಟ್‌ ಜಾರಿಯಲ್ಲಿರಲಿದೆ. ಇನ್ನು ಭೀಕರ ಬಿರುಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಲವು ಅನಾಹುತಗಳು ಸಂಭವಿಸಿವೆ. ಮಂಡಿ ಹೌಸ್ ಮತ್ತು ದೆಹಲಿ ಗೇಟ್‌ನಂತಹ ಪ್ರಮುಖ ಸ್ಥಳಗಳು ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಬಲವಾದ ಗಾಳಿಯಿಂದಾಗಿ ಮರಗಳ ಕೊಂಬೆಗಳು ಬಿದ್ದಿವೆ. ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿರುವ ವಾಹನಗಳ ಮೇಲೆ ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಇನ್ನುಹಲವಾರು ಕಡೆಗಳಲ್ಲಿಸಂಚಾರ ಅಸ್ತವ್ಯಸ್ತವಾಗಿದೆ.



ಧೂಳು ಎಬ್ಬಿಸುವ ಪ್ರಬಲ ಗಾಳಿಯು ರಸ್ತೆಗಳು ಮತ್ತು ಕಟ್ಟಡಗಳನ್ನು ಭಾಗಶಃ ಆವರಿಸಿದ್ದು, ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟುಮಾಡಿದೆ. ಮುಂದಿನ ಮೂರು ಗಂಟೆಗಳ ಕಾಲ ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ (NCR),ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Karnataka Weather: ರಾಜ್ಯಕ್ಕೆ ಮಳೆ ಮುನ್ಸೂಚನೆ; ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ!

ಆಲಿಕಲ್ಲು ಮಳೆಯಿಂದ ಜನರು ಮತ್ತು ಜಾನುವಾರುಗಳಿಗೆ ಗಾಯಗಳಾಗಬಹುದಾದ ಕಾರಣ, ಈ ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಮನೆಯಿಂದ ಹೊರಗೆ ಬರದಂತೆ ಹವಾಮಾನ ಇಲಾಖೆ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಭಾರೀ ಗಾಳಿ ಮಳೆಗೆ ದುರ್ಬಲ ಕಟ್ಟಡಗಳು ಭಾಗಶಃ ಹಾನಿಗೊಳಗಾಗಬಹುದು. ಅಲ್ಲದೇ ಆಲಿಕಲ್ಲು ಮಳೆಯಿಂದಾಗಿ ತೋಟಗಳು, ಕೃಷಿ ಉತ್ಪನ್ನಗಳು ಮತ್ತು ಬೆಳೆದು ನಿಂತಿರುವ ಬೆಳೆಗಳಿಗೆ ಹಾನಿಯಾಗಬಹುದು. 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಹೆಚ್ಚಿದ್ದು, ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಾದ್ಯಂತ ಗಾಳಿಯ ವೇಗ ಗಂಟೆಗೆ 80 ಕಿ.ಮೀ.ವರೆಗೆ ತಲುಪಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.