ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭೀಕರ ಚಳಿಗೆ ಉತ್ತರ ಭಾರತ ತತ್ತರ; ಜನವರಿ 9ರಂದು ತಾಪಮಾನದಲ್ಲಿ ತೀವ್ರ ಕುಸಿತ

ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಜನವರಿ 9ರಂದು ತಾಪಮಾನ ತೀವ್ರ ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ, ದಕ್ಷಿಣ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಥಂಡಿ ಗಾಳಿಗೆ ಥಂಡಾ ಹೊಡೆದ ಜನ

ಸಾಂದರ್ಭಿಕ ಚಿತ್ರ -

Profile
Sushmitha Jain Jan 8, 2026 10:21 PM

ದೆಹಲಿ, ಜ. 8: ಉತ್ತರ ಭಾರತದಲ್ಲಿ ಜನವರಿ 9ರಂದು ತಾಪಮಾನ ತೀವ್ರ ಕುಸಿತವಾಗಲಿದ್ದು, ಇದರಿಂದ ಮೈ ಕೊರೆಯುವ ಚಳಿ ಮತ್ತು ದಟ್ಟ ಮಂಜು ಆವರಿಸಿ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಇಂಡೋ-ಗಂಗಾ ಬಯಲು ಪ್ರದೇಶದಾದ್ಯಂತ ಜನರು ಪ್ರಯಾಣ ಹಾಗೂ ದೈನಂದಿನ ಜೀವನಕ್ಕೆ ಅಡಚಣೆ ಉಂಟಾಗಬಹುದು ಎನ್ನಲಾಗಿದೆ.

ಚಳಿಗಾಳಿ ಮತ್ತು ಮಂಜು ಮುಂದುವರಿಕೆ

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಬೆಳಗ್ಗೆ ಸಮಯದಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿಯೂ ಇದೇ ರೀತಿಯ ಅಪಾಯಕಾರಿ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ಕೆಲವೆಡೆ ಮಂಜಿನಿಂದ ರಸ್ತೆಗಳು ಕಾಣದೇ ಹೋಗಬಹುದಾಗಿದೆ.

ಮೌಸಂ ತಕ್ ಸಂಸ್ಥೆಯ ಸ್ಥಾಪಕ ಹಾಗೂ ಖ್ಯಾತ ಹವಾಮಾನ ವ್ಲಾಗರ್ ದೇವೇಂದ್ರ ತ್ರಿಪಾಠಿ ಅವರ ಪ್ರಕಾರ, "ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಾಳೆ ಮಧ್ಯಾಹ್ನಕ್ಕೆ ಮಂಜು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ ಮೋಡಗಳು ಆವರಿಸಿರವುದರಿಂದ ದಿನವಿಡೀ ಸೂರ್ಯ ಕಿರಣಗಳು ಕಾಣದೇ ಸರಿಯಾದ ಬೆಳಕು ಇರುವುದಿಲ್ಲ. ಮಂಜಿನಿಂದ ಕೂಡಿದ ಸೂರ್ಯನನ್ನೇ ನೀಡಬೇಕಾಗುತ್ತದೆ" ಎಂದು ಹೇಳಿದ್ದಾರೆ.

ತಾಪಮಾನವು ಸಾಮಾನ್ಯಕ್ಕಿಂತ ಬಹಳ ಕಡಿಮೆಯಾಗಿಯೇ ಇರುವ ಸಾಧ್ಯತೆ ಇದೆ. ಸ್ಕೈಮೆಟ್ ವರದಿಯಂತೆ, ಜೈಪುರ ಮತ್ತು ದೆಹಲಿಯಂತಹ ನಗರಗಳು ಈಗಾಗಲೇ ಈ ತಿಂಗಳಲ್ಲಿನ ಕನಿಷ್ಠ ತಾಪಮಾನವನ್ನು ದಾಖಲಿಸಿವೆ. ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಕೆಲವು ಪ್ರದೇಶಗಳಲ್ಲಿ ಚಳಿಗಾಳಿ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮತ್ತಷ್ಟು ಚಳಿ, ಕನಿಷ್ಠ ತಾಪಮಾನ ದಾಖಲು, 19 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ

ಉತ್ತರ ಭಾರತ ಚಳಿಯಿಂದ ಕಂಗೆಟ್ಟಿದ್ದರೆ, ದಕ್ಷಿಣ ಭಾರತ ಭಾರೀ ಮಳೆಯಿಗಾಗಿ ಸಜ್ಜಾಗುತ್ತಿದೆ. ದಕ್ಷಿಣ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ತೀವ್ರ ವಾಯುಭಾರ ಕುಸಿತ ಪಶ್ಚಿಮ–ಉತ್ತರ ಪಶ್ಚಿಮದತ್ತ ಸಾಗುತ್ತಿದ್ದು, ಜನವರಿ 9ರ ಸಂಜೆ ವೇಳೆಗೆ ಶ್ರೀಲಂಕಾ ಕರಾವಳಿಯನ್ನು ದಾಟುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಭಾರಿ, ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಈ ವಾಯುಭಾರ ಕುಸಿತವು ಒಳನಾಡಿನ ಹವಾಮಾನದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ದೇವೇಂದ್ರ ತ್ರಿಪಾಠಿ ತಿಳಿಸಿದ್ದಾರೆ. “ಮಹಾರಾಷ್ಟ್ರ, ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಲಘು ಮೋಡಗಳ ಪದರ ಕಾಣಿಸಿಕೊಳ್ಳಲಿದೆ. ಈ ಪ್ರದೇಶಗಳಲ್ಲಿ ಮಳೆಯಾಗದಿದ್ದರೂ, ಮೋಡಗಳು ಸೂರ್ಯನ ಕಿರಣಗಳನ್ನು ಸ್ವಲ್ಪ ಮಟ್ಟಿಗೆ ತಡೆದು ಚಳಿಯ ತೀವ್ರತೆಯನ್ನು ಮುಂದುವರಿಸಲಿದೆ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಗಂಟೆಗೆ 60 ಕಿ.ಮೀ. ವೇಗದವರೆಗೆ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.