Independence Day Fashion 2025: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಬಂತು ತಿರಂಗಾ ಸೀರೆಗಳು
Independence Day Fashion 2025: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಕೇಸರಿ, ಬಿಳಿ ಮತ್ತು ಹಸಿರು ವರ್ಣ ಇರುವಂತಹ ದೇಸಿ ಲುಕ್ ನೀಡುವ ತಿರಂಗಾ ಶೇಡ್ನ ನಾನಾ ಬಗೆಯ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ್ಯಾವ ವಿನ್ಯಾಸದವು ಲಭ್ಯ? ಸ್ಟೈಲಿಂಗ್ ಹೇಗೆ? ಇಷ್ಟಾ ಟ್ರೆಂಡ್ಸ್ನ ಎಕ್ಸ್ಪರ್ಟ್ ರೂಪಾ ಶೇಟ್ ತಿಳಿಸಿದ್ದಾರೆ.

ಚಿತ್ರಗಳು: ಚಶ್ಮಿ, ಇಷ್ಟಾ ಟ್ರೆಂಡ್ಸ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಾಥ್ ನೀಡುವ ತ್ರಿವರ್ಣ ಶೇಡ್ಸ್ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಹೌದು. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ದೇಸಿ ಲುಕ್ ಬಯಸುವ ಸೀರೆ ಪ್ರೇಮಿಗಳಿಗಾಗಿ ಸಾಕಷ್ಟು ಬ್ರಾಂಡ್ಗಳು, ಕೇಸರಿ, ಬಿಳಿ ಮತ್ತು ಹಸಿರು ವರ್ಣಗಳನ್ನು ಹೊಂದಿರುವಂತಹ ತಿರಂಗಾ ಶೇಡ್ನ ಸೀರೆಗಳನ್ನು ಬಿಡುಗಡೆಗೊಳಿಸಿವೆ.
ತ್ರಿವರ್ಣಗಳನ್ನೊಳಗೊಂಡಿರುವ ಪಾಸ್ಟೆಲ್ ಶೇಡ್ನವು, ಅಬ್ಸ್ಟ್ರಾಕ್ಟ್ ಶೇಡ್ನವು ಹಾಗೂ ಕಲರ್ ಮಿಕ್ಸ್ ಇರುವಂತಹ ಚಿತ್ತಾರದ ತಿರಂಗಾ ಶೇಡ್ಗಳಿರುವ ಸೀರೆಗಳು ಈಗಾಗಲೇ ಮಾರುಕಟ್ಟೆಯಲ್ಲಿ, ಬಿಡುಗಡೆಗೊಂಡು ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಇಷ್ಟಾ ಟ್ರೆಂಡ್ಸ್ನ ರೂಪಾ ಶೆಟ್ ಹಾಗೂ ಚಶ್ಮಿ. ಅವರ ಪ್ರಕಾರ, ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾನಾ ವಿನ್ಯಾಸದ ಸೀರೆಗಳು ಸೀರೆ ಲೋಕದಲ್ಲಿ ಬಿಡುಗಡೆಗೊಳ್ಳುತ್ತವೆ. ಈ ಬಾರಿ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ.

ತಿರಂಗಾ ಸೀರೆಗಳ ಡ್ರೇಪಿಂಗ್ ಹೀಗಿರಲಿ
ದೇಸಿ ಲುಕ್ ನೀಡುವ ಈ ಸೀರೆಗಳ ಡ್ರೇಪಿಂಗ್ ಡೀಸೆಂಟ್ ಆಗಿರಬೇಕು. ಅದರಲ್ಲೂ ಗೌರವ ಭಾವನೆ ಮೂಡಿಸಬೇಕು. ಗ್ಲಾಮರಸ್ ಲುಕ್ಗೆ ಆದ್ಯತೆ ನೀಡಬಾರದು. ನೋಡಿದಾಕ್ಷಣ ದೇಶ ಪ್ರೇಮ ಉಕ್ಕಿಸಬೇಕೇ ಹೊರತು ಸಿಟ್ಟು ತರಿಸುವಂತಿರಬಾರದು. ಇದಕ್ಕಾಗಿ ಒಂದಿಷ್ಟು ಫ್ಯಾಷನ್ ರೂಲ್ಸ್ ಫಾಲೋ ಮಾಡುವುದು ಉತ್ತಮ ಎನ್ನುತ್ತಾರೆ ರೂಪಾ ಶೇಟ್. ಅವರ ಪ್ರಕಾರ, ಇನ್ನಿತರೇ ಸಂದರ್ಭದಲ್ಲಿ ಉಡುವಂತಹ ಸೀರೆ ಪ್ರಯೋಗಗಳನ್ನು ಈ ಸೀರೆಗಳಲ್ಲಿ ಮಾಡಬಾರದು. ನಮ್ಮ ಸಂಸ್ಕೃತಿಗೆ ಪೂರಕವಾಗುವಂತೆ ಸೀರೆ ಡ್ರೇಪ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ತಿರಂಗಾ ಶೇಡ್ಸ್ ಸೀರೆ ಪ್ರಿಯರಿಗೆ ಟಿಪ್ಸ್
- ಬಾವುಟವನ್ನೇ ಧರಿಸಿದಂತೆ ಕಾಣಬಾರದು.
- ಈ ಸೀರೆ ಉಟ್ಟಾಗ ಡೀಸೆಂಟ್ ಲುಕ್ ಇರಬೇಕು.
- ಗೌರವಕ್ಕೆ ಧಕ್ಕೆ ಬರದಂತಹ ವಿನ್ಯಾಸ ಹೊಂದಿರಬೇಕು.
- ಅತಿರೇಕಕ್ಕೆ ಒಳಗಾಗಿ ವಿಚಿತ್ರವಾಗಿ ಬಿಂಬಿಸಬಾರದು.
- ಎಥ್ನಿಕ್ ಲುಕ್ ನೀಡುವುದು ಉತ್ತಮ.
- ಕಲರ್ಗಳು ಉಲ್ಟಾ ಪಲ್ಟಾ ಕಾಣದಂತಿರಲಿ.
ಈ ಸುದ್ದಿಯನ್ನೂ ಓದಿ | Star Fashion 2025: ಪ್ಲೀಟೆಡ್ ವೈಟ್ ಡ್ರೆಸ್ನಲ್ಲಿ ಚೀನಿ ಹುಡುಗಿಯಂತೆ ಕಂಡ ನಟಿ ಭಾವನಾ ಮೆನನ್