ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Independence Day: ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡುವಾಗ ಈ ತಪ್ಪು ಮಾಡದಿರಿ!

79ನೇ ಸ್ವಾತಂತ್ರ್ಯ ದಿನಾಚರಣೆಗೆ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಶಾಲೆಗಳು, ಕಚೇರಿ, ಸರಕಾರಿ ಕಟ್ಟಡದಲ್ಲಿ ಕೂಡ ಧ್ವಜ ಹಾರಿಸಿ ರಾಷ್ಟ್ರೀಯ ಭಾವೈಕ್ಯತೆ ಸಾರುವಂತೆ ಈ ಸ್ವಾತಂತ್ರ್ಯ ದಿನಾಚರಣೆ ಅದ್ಧೂರಿಯಾಗಿ ನಡೆಯಲಿದ್ದು ಪೂರ್ವ ತಯಾರಿ ಕೆಲಸ ಕೂಡ ಜೋರಾಗಿದೆ. ಅಂತೆಯೇ ಧ್ವಜಾರೋಹಣ ಮಾಡಲು ಕೂಡ ನಿರ್ದಿಷ್ಟ ನಿಯಮಗಳಿದ್ದು ಅವುಗಳ ಪಾಲನೆ ನಾವೆಲ್ಲರೂ ಮಾಡಲೇಬೇಕು. ಹಾಗಾದರೆ ಆ ನಿಯಮಗಳೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಧ್ವಜಾರೋಹಣ ಮಾಡುವಾಗ ಈ ನಿಯಮ ಮರೆಯದಿರಿ

Profile Pushpa Kumari Aug 12, 2025 5:24 PM

ನವದೆಹಲಿ: ಇಡೀ ದೇಶವೇ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಈಗಾಗಲೇ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ. ಶಾಲೆಗಳು, ಕಚೇರಿ, ಸರಕಾರಿ ಕಟ್ಟಡದಲ್ಲಿ ಕೂಡ ಧ್ವಜ ಹಾರಿಸಿ ರಾಷ್ಟ್ರೀಯ ಭಾವೈಕ್ಯತೆ ಸಾರುವಂತೆ ಈ ಸ್ವಾತಂತ್ರ್ಯ ದಿನಾಚರಣೆ ಅದ್ಧೂರಿಯಾಗಿ ನಡೆಯಲಿದ್ದು ಪೂರ್ವ ತಯಾರಿ ಕೆಲಸ ಕೂಡ ಜೋರಾಗಿದೆ. ಅಂತೆಯೇ ಧ್ವಜಾರೋಹಣ ಮಾಡಲು ಕೂಡ ನಿರ್ದಿಷ್ಟ ನಿಯಮಗಳಿದ್ದು ಅವುಗಳ ಪಾಲನೆ ನಾವೆಲ್ಲರೂ ಮಾಡಲೇ ಬೇಕು. ಹಾಗಾದರೆ ಆ ನಿಯಮ ಗಳೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಯಾವೆಲ್ಲ ನಿಯಮ ಇದೆ?

  • ನೀವು ತ್ರಿವರ್ಣ ಧ್ವಜವನ್ನು ಗೋಡೆಯ ಮೇಲೆ ಹಾಕುವುದಾದರೆ ಕೇಸರಿ ಬ್ಯಾಂಡ್ ಅನ್ನು ಮೇಲ್ಭಾಗದಲ್ಲಿ ಇರಿಸುವಂತೆ ನೋಡಿಕೊಳ್ಳಬೇಕು.
  • ಧ್ವಜವನ್ನು ಎಲ್ಲರಿಗೂ ಕಾಣುವಂತೆ ಸ್ಥಳವನ್ನು ಆಯ್ಕೆ ಮಾಡಿ ಉಚ್ಛ ಸ್ಥಾನದಲ್ಲಿ ಹಾರಿಸಬೇಕು.
  • ಧ್ವಜವನ್ನು ಅಲಂಕಾರಕ್ಕಾಗಿ ಬಳಸಬಾರದು ಮತ್ತು ಧ್ವಜದ ಮೇಲೆ ಯಾವುದೇ ಬರಹ, ಚಿತ್ರಣಗಳು ಕೂಡ ಇರಬಾರದು.
  • ಧ್ವಜವು ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕು, ಧ್ವಜವು ಹರಿದಿರಬಾರದು ಮತ್ತು ಕೊಳಕಾಗಿರಬಾರದು. ಒಂದುವೇಳೆ ಧ್ವಜ ಹಾನಿಯಾಗಿದ್ದರೆ ಅದನ್ನು ಗೌರವಯುತವಾಗಿ ವಿಲೇವಾರಿ ಮಾಡಬೇಕು.
  • ಬೇರೆ ಯಾವುದೇ ಧ್ವಜವನ್ನು ತ್ರಿವರ್ಣ ಧ್ವಜದೊಂದಿಗೆ ಸಮಾನವಾಗಿ ಅಥವಾ ಎತ್ತರದಲ್ಲಿ ಹಾರಿಸಬಾರದು.
  • ಧ್ವಜವನ್ನು ಮಡಚುವಾಗಲೂ ಗೌರವಯುತವಾಗಿ ಮಡಚಬೇಕು, ಹಸಿರು ಬಣ್ಣವನ್ನು ಮೊದಲು ಮಡಚಬೇಕು.
  • ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಅದರ ಘನತೆಗೆ ಧಕ್ಕೆ ತರಬಾರದು. ಈ ವಿಚಾರದಲ್ಲಿ ಜಾಗರೂಕರಾಗಿರಬೇಕು.
  • ತ್ರಿವರ್ಣ ಧ್ವಜ'ಕ್ಕೆ ಅದರದ್ದೇ ಆದ ಸ್ಥಾನ ಮಾನವಿದ್ದು ತಲೆಕೆಳಗಾಗಿ ಪ್ರದರ್ಶಿಸಬಾರದು. ರಾಷ್ಟ್ರಧ್ವಜವನ್ನು ಯಾವಾಗಲೂ ಸ್ಫೂರ್ತಿಯಿಂದ ಏರಿಸಬೇಕು ಅಂತೆಯೇ ಗೌರವದಿಂದ ಕೆಳಗಿಳಿಸಬೇಕು.

ಇದನ್ನು ಓದಿ: Independence Day 2025: ಈ ಬಾರಿ ನಾವು ಆಚರಿಸುತ್ತಿರುವುದು 78 ಅಥವಾ 79ನೇ ಸ್ವಾತಂತ್ರ್ಯ ದಿನವೇ?

  • ಧ್ವಜಾರೋಹಣ ಮಾಡಿದವರು ಧ್ವಜಸ್ತಂಭದ ಬಲಭಾಗದಲ್ಲಿ ಸಭಿಕರ ಕಡೆಗೆ ಮುಖಮಾಡಿ ನಿಲ್ಲಬೇಕು.
  • ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಇತ್ಯಾದಿ ಸಂದರ್ಭದಲ್ಲಿ ಮೆರವಣಿಗೆ, ಪರೇಡಿನ ವೇಳೆ ವ್ಯಕ್ತಿಯ ಬಲಗೈಯಲ್ಲಿ ಧ್ವಜ ಹಿಡಿದಿರಬೇಕು. ಈ ಸಂದರ್ಭದಲ್ಲಿ ಇತರ ಧ್ವಜಗಳಿದ್ದರೆ ರಾಷ್ಟ್ರಧ್ವಜವು ಮಧ್ಯದಲ್ಲಿರಬೇಕು.
  • ಧ್ವಜಸ್ತಂಭದ ಮೇಲೆಯೂ ಯಾವುದೇ ಜಾಹೀರಾತು ಹಾಕಬಾರದು.
  • ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನದಂದು ಧ್ವಜದಲ್ಲಿ ಹೂವಿನ ಎಸಳನ್ನು ಕಟ್ಟಿ ಧ್ವಜಾರೋಹಣವನ್ನು ಮಾಡಬೇಕು. ಇದನ್ನು ಗೌರವಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
  • ರಾಷ್ಟ್ರಧ್ವಜವನ್ನು ನೆಲ ಅಥವಾ ನೀರಿನ ಮೇಲೆ ಬೇಕಾ ಬಿಟ್ಟಿಯಾಗಿ ಹಾಕಿದರೆ ಅದು ಧ್ವಜ‌ನಿಯಮ ಉಲ್ಲಂಘನೆ ಆಗಿದೆ ಎಂದು ಹೇಳಲಾಗುತ್ತದೆ.
  • ಭಾರತದಲ್ಲಿ ಈ ಸಂಧಿತ ನಿಯಮಗಳನ್ನು ಧ್ವಜ ಸಂಹಿತೆಯ ಭಾಗ 3 ರ ಸೆಕ್ಷನ್ 9 ರಲ್ಲಿನ ನಿಬಂಧನೆಗಳ ಪ್ರಕಾರ ವಾಹನಗಳ ಮೇಲೆ ಧ್ವಜ ಹಾರಿಸಬಹುದು.
  • ಧ್ವಜವನ್ನು ಯಾವುದೇ ಕಾರಣಕ್ಕು ಧರಿಸುವ ಬಟ್ಟೆಯಾಗಿ ಅಥವಾ ಸಮವಸ್ತ್ರದ ಭಾಗವಾಗಿ ಬಳಸುವಂತಿಲ್ಲ. ಧ್ವಜವನ್ನು ಅಲಂಕಾರದ ವಸ್ತುವಾಗಿ ಹಾಗೂ ವೈಯಕ್ತಿಕ ವಸ್ತುಗಳ ಮೇಲೆ ಮುದ್ರಿಸುವಂತೆ ತಯಾರಿಸುವ ಹಾಗಿಲ್ಲ.
  • ಧ್ವಜವನ್ನು ವಾಹನಗಳ ಮೇಲ್ಭಾಗ ಮುಚ್ಚಲು ಬಳಸಬಾರದು. ತ್ರಿವರ್ಣ ಧ್ವಜದ ಬಳಕೆ, ಪ್ರದರ್ಶನ ಮತ್ತು ಹಾರಿಸುವಿಕೆಯ ಬಗ್ಗೆ ಭಾರತದ ಧ್ವಜ ಸಂಹಿತೆ ನಿಯಮ 2002 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ 1971 ರಲ್ಲಿ ಈ ನಿಯಮವನ್ನು ಸ್ಪಷ್ಟವಾಗಿ ಕೂಡ ತಿಳಿಸಲಾಗಿದೆ.