ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Umesh Vamana Prabhu Column: ಮರೆಯಾಗುತ್ತಿರುವ ಸಂಸ್ಕೃತಿ !

ಡಿಜಿಟಲ್ ಯುಗವು ಮಾನವ ಜೀವನದ ಪ್ರತಿಯೊಂದು ಅಂಶವನ್ನೂ ಆಳವಾಗಿ ಪರಿವರ್ತಿಸಿದೆ. ತಂತ್ರ ಜ್ಞಾನದ ಈ ಕ್ರಾಂತಿಯು ಸಂವಹನ, ಶಿಕ್ಷಣ, ಕೆಲಸದ ವಿಧಾನಗಳು ಮತ್ತು ದೈನಂದಿನ ಚಟುವಟಿಕೆ ಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈ ಯುಗದಲ್ಲಿ ಕೈ ಬರಹದ ಪ್ರಾಮುಖ್ಯತೆಯೂ ಗಮನಾ ರ್ಹವಾಗಿ ಕಡಿಮೆಯಾಗಿದೆ. ಕೈ ಬರಹ ಒಂದು ಕಾಲದಲ್ಲಿ ಸಂವಹನದ ಪ್ರಮುಖ ಸಾಧನವಾಗಿತ್ತು; ಇಂದು ಮರೆಯಾಗುವ ಹಂತದಲ್ಲಿದೆ.

ಉಮೇಶ ವಾಮನ ಪ್ರಭು ಬೆಂಗಳೂರು

ಕೈ ಬರಹವು ಕೇವಲ ಒಂದು ಕೌಶಲವಲ್ಲ. ಬದಲಾಗಿ ಅದು ಒಂದು ಸಂಸ್ಕೃತಿ. ಭಾರತದಲ್ಲಿ ಉತ್ತಮ ಕೈ ಬರಹವು ಶೈಕ್ಷಣಿಕ ಯಶಸ್ಸಿನೊಂದಿಗೆ ಸಂಬಂಧ ಹೊಂದಿತ್ತು. ಕಾಗುಣಿತಕ್ಕೆ ಪ್ರತ್ಯೇಕ ಅಂಕ ಗಳನ್ನು ನೀಡಲಾಗುತ್ತಿತ್ತು. ಕೈ ಬರಹ ಸ್ಪರ್ಧೆಗಳು ಇರುತ್ತಿದ್ದವು.

ಡಿಜಿಟಲ್ ಯುಗವು ಮಾನವ ಜೀವನದ ಪ್ರತಿಯೊಂದು ಅಂಶವನ್ನೂ ಆಳವಾಗಿ ಪರಿವರ್ತಿಸಿದೆ. ತಂತ್ರ ಜ್ಞಾನದ ಈ ಕ್ರಾಂತಿಯು ಸಂವಹನ, ಶಿಕ್ಷಣ, ಕೆಲಸದ ವಿಧಾನಗಳು ಮತ್ತು ದೈನಂದಿನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈ ಯುಗದಲ್ಲಿ ಕೈ ಬರಹದ ಪ್ರಾಮುಖ್ಯತೆಯೂ ಗಮನಾರ್ಹವಾಗಿ ಕಡಿಮೆಯಾಗಿದೆ. ಕೈ ಬರಹ ಒಂದು ಕಾಲದಲ್ಲಿ ಸಂವಹನದ ಪ್ರಮುಖ ಸಾಧನವಾಗಿತ್ತು; ಇಂದು ಮರೆಯಾಗುವ ಹಂತದಲ್ಲಿದೆ. ಮೊದಲು ಮಕ್ಕಳ ಕೈಬರಹ ಉತ್ತಮಗೊಳಿಸಲು ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತಿತ್ತು; ಇಂದು ಆ ಆಯಾಮದ ತರಬೇತಿ ಮರೆಯಾಗಿದೆ.

ಶಾಲೆಗಳು ಮತ್ತು ಕಾಲೇಜ್‌ಗಳು ಇಂದು ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿವೆ. ವಿದ್ಯಾರ್ಥಿ ಗಳು ಟೈಪಿಂಗ್, ಆನ್‌ಲೈನ್ ಗಮನಿಸುವಿಕೆ ಮತ್ತು ಡಿಜಿಟಲ್ ಸಾಧನಗಳ ಮೂಲಕ ಕಲಿಕೆಗೆ ಒಗ್ಗಿಕೊಂಡಿದ್ದಾರೆ. ಕೈ ಬರಹದ ತರಬೇತಿಗೆ ನೀಡಲಾಗುವ ಸಮಯವು ಕಡಿಮೆಯಾಗಿದೆ. ಕೆಲವು ಶಾಲೆಗಳು ಕೈ ಬರಹವನ್ನು ಕಡ್ಡಾಯವಾಗಿ ಕಲಿಸುವುದನ್ನೇ ಕೈಬಿಟ್ಟಿವೆ.

ಇದನ್ನೂ ಓದಿ: Prof R G Hegde Column: ಹೆಗಡೆ: ರಾಜಕೀಯದ ಅನನ್ಯತೆ ದಾಖಲಾಗಲಿ

ಇಂತಿನ ವ್ಯವಾಹರಾರಿಕ ಜಗತ್ತಿನಲ್ಲಿ ಇಮೇಲ್‌ಗಳು, ಡಿಜಿಟಲ್ ದಾಖಲೆಗಳು, ಮತ್ತು ಆನ್ಲೈನ್ ಸಂವಹನ ಸಾಧನಗಳು ಕೈಬರಹದ ಅಗತ್ಯವನ್ನು ತಗ್ಗಿಸಿವೆ. ಒಂದು ಕಾಲದಲ್ಲಿ ನೋಟ್ಸ್, ಪತ್ರಗಳು, ಮತ್ತು ದಾಖಲೆಗಳಿಗೆ ಕೈ ಬರಹವನ್ನು ಅವಲಂಬಿಸಲಾಗಿತ್ತು. ಈಗ ಡಿಜಿಟಲ್ ಸಾಧನಗಳು ಈ ಕಾರ್ಯವನ್ನು ಸುಲಭಗೊಳಿಸಿವೆ. ವೃತ್ತ ಪತ್ರಿಕೆಗಳು ಮತ್ತು ಇತರ ನಿಯತಕಾಲಿಕ ಪತ್ರಿಕೆಗಳು ಕೂಡ ವರದಿಗಳನ್ನು, ಲೇಖನ ಗಳನ್ನು ಡಿಜಿಟಲ್ ರೂಪದಲ್ಲೇ ಬಯಸುತ್ತಿವೆ.

ಕೈ ಬರಹವು ಕೇವಲ ಒಂದು ಕೌಶಲ್ಯವಲ್ಲ. ಬದಲಾಗಿ ಅದು ಒಂದು ಸಂಸ್ಕೃತಿ. ಭಾರತದಲ್ಲಿ ಉತ್ತಮ ಕೈ ಬರಹವು ಶೈಕ್ಷಣಿಕ ಯಶಸ್ಸಿನೊಂದಿಗೆ ಸಂಬಂಧ ಹೊಂದಿತ್ತು. ಕಾಗುಣಿತಕ್ಕೆ ಪ್ರತ್ಯೇಕ ಅಂಕಗಳನ್ನು ನೀಡಲಾಗುತ್ತಿತ್ತು. ಕೈ ಬರಹ ಸ್ಪರ್ಧೆಗಳು ಇರುತ್ತಿದ್ದವು. ಕೈ ಬರಹವು ನಮ್ಮ ಮೆದುಳಿನ ಬೆಳವಣಿಗೆ, ಸ್ಮರಣ ಶಕ್ತಿ, ಮತ್ತು ಸೃಜನಶೀಲತೆಗೆ ಮುಖ್ಯವಾಗಿದೆ.

ಕೈ ಬರಹವು ಮಿದುಳಿನ ಸಂಜ್ಞಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಬರವಣಿಗೆಯ ಸಮಯದಲ್ಲಿ ಕೈ ಮತ್ತು ಮೆದುಳಿನ ಸಂಯೋಜನೆಯು ಸ್ಮರಣೆ, ಏಕಾಗ್ರತೆ ಮತ್ತು ಸೃಜನಶೀಲತೆ ಯನ್ನು ಉತ್ತೇಜಿಸುತ್ತದೆ. ನಮ್ಮ ಭಾವನೆಗಳು, ಆಲೋಚನೆಗಳು, ಕನಸುಗಳಿಗೆ ಆಧಾರ ವಾಗಿದ್ದ ಸರಳ ವಸ್ತುಗಳಾದ ಪೆನ್ನುಗಳು ಮತ್ತು ಕಾಗದ, ಪುಸ್ತಕಗಳು ಈಗ ಕಾಲದ ಪ್ರಭಾವದಿಂದಾಗಿ ಕಣ್ಮರೆಯಾಗುತ್ತಿವೆ.

ಈ ನಷ್ಟದಲ್ಲಿ ಒಂದು ವ್ಯಥೆ ಇದೆ. ಅದು ಪೆನ್ನಿನ ಮೂಲಕ ತಮ್ಮ ಆಲೋಚನೆ ಗಳನ್ನು ಮೂಡಿಸಿ ದವರಿಗೆ ಮಾತ್ರ ಅರ್ಥವಾಗುತ್ತದೆ. ಕೈ ಬರಹವು ಭಾವನೆಗಳಿಗೆ, ಅಭಿಪ್ರಾಯಗಳಿಗೆ ವೈಯಕ್ತಿಕ ಸ್ಪರ್ಶ ವನ್ನು ನೀಡುತ್ತದೆ. ಕೈಯಿಂದ ಬರೆದ ಪತ್ರ ಭಾವನಾತ್ಮಕ ಮೌಲ್ಯವನ್ನು ಹೊಂದಿರುತ್ತದೆ. ಕೈಯಿಂದ ಬರೆಯುವಾಗ ನಮ್ಮ ಆಲೋಚನೆಗಳು ವಿಭಿನ್ನ ಲಯವನ್ನು ಪಡೆದುಕೊಳ್ಳುತ್ತವೆ. ಕೈಯಿಂದ ಬರೆದ ಪ್ರತಿಯೊಂದು ಪದ, ಪ್ರತಿಯೊಂದು ಸಾಲು ನಮ್ಮ ಭಾವನೆಗಳ ಪ್ರಯಾಣ.

ಕೈಬರಹವು ವ್ಯಕ್ತಿಯ ವಿಶಿಷ್ಟ ಶೈಲಿಯನ್ನುಪ್ರತಿಬಿಂಬಿಸುತ್ತದೆ. ಒಬ್ಬರ ಕೈಬರಹವು ಅವರ ಆಲೋಚನೆ, ಭಾವನೆ ಮತ್ತು ವ್ಯಕ್ತಿತ್ವದ ಛಾಯೆಯಾಗಿರುತ್ತದೆ. ಆ ಶಾಯಿಯ ಪರಿಮಳದಲ್ಲಿ, ಕಾಗದದ ನಯವಾದ ಸ್ಪರ್ಶದಲ್ಲಿ ಏನೋ ಮಾಂತ್ರಿಕತೆ ಇದೆ. ಆದರೆ ಈಗ ನಾವು ಟೈಪ್ ಮಾಡುವ ಅಥವಾ ಗುಂಡಿ ಒತ್ತುವ ವೇಗದಲ್ಲಿ ಈ ಮ್ಯಾಜಿಕ್‌ನ ರೋಮಾಂಚನ ಹೇಗೋ ಕಳೆದುಕೊಳ್ಳು ತ್ತಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಬರೆಯುವುದೆಂದರೆ ಕೆಲವೇ ಗುಂಡಿಗಳನ್ನು ಒತ್ತುವುದಷ್ಟೇ. ಮೊಬೈಲ್‌ಗಳು, ಟ್ಯಾಬ್ಲೆಟ್ ಗಳು, ಲ್ಯಾಪ್ಟಾಪ್ ಗಳೂ ಎಲ್ಲವೂ ಸುಲಭ, ವೇಗವಾಗಿ ಮಾರ್ಪಟ್ಟಿವೆ. ಆದರೆ ಈ ವೇಗದಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತಿದೆ. ಕೈ ಬರಹ ಸಂಪೂರ್ಣವಾಗಿ ನಶಿಸಿಲ್ಲವಾದರೂ ಕಣ್ಮರೆಯಾಗುವ ಅಂಚಿನಲ್ಲಿದೆ. ನೀವೇ ಯೋಚಿಸಿ ನೋಡಿ.

ನೀವು ಕೊನೆಯ ಸಲ ಪೆನ್ನಿನಿಂದ ತುಸು ದೀರ್ಘವಾದ ಏನನ್ನಾದರೂ ಬರೆದದ್ದು ಯಾವಾಗ? ವಾರಗಳು?ತಿಂಗಳುಗಳು? ವರ್ಷಗಳು? ಡಿಜಿಟಲ್ ಯುಗವು ನಮಗೆ ವೇಗ, ಅನುಕೂಲತೆಗಳನ್ನು ನೀಡಿರುವುದೇನೋ ನಿಜ. ಆದರೆ ಅದೇ ಸಮಯದಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸರಳ ಆದರೆ ಉಯುಕ್ತ ವಾದ ಮಾರ್ಗವನ್ನು ಅದು ಕಸಿದುಕೊಂಡಿದೆ.

ಬಹುಷಃ ನಾವೆಲ್ಲ ಸ್ವಲ್ಪ ಸಮಯ ಮಾಡಿಕೊಂಡು ನಮ್ಮ ಮನಸ್ಸನ್ನು ಮತ್ತೆ ಕೈ ಬರಹಕ್ಕೆ ಹಾಕಬೇಕು. ಆ ಶಾಯಿಯ ಪ್ರತಿಯೊಂದು ಹನಿಯಲ್ಲೂ ನಮ್ಮ ಒಂದು ತುಣುಕು ಜೀವಂತ ವಾಗಿರುತ್ತದೆ. ಏಕೆಂದರೆ ಕೈ ಬರಹ ಕೇವಲ ಪದಗಳಲ್ಲ. ಅವು ನಮ್ಮ ಅಸ್ತಿತ್ವದ ಒಂದು ರೂಪ. ಇಲ್ಲದೇ ಹೋದರೆ ಮುಂದೊಂದು ದಿನ ಕೈ ಬರಹವು ಕಲೆ, ವೈಯುಕ್ತಿಕ ಅಭಿವ್ಯಕ್ತಿ, ಅಥವಾ ಐತಿಹಾಸಿಕ ಕೌತುಕ ವಾಗಿ ಉಳಿದರೆ ಆಶ್ಚರ್ಯವೇನಿಲ್ಲ. ಮಕ್ಕಳು ಕೈ ಬರಹ ಎಂದರೆ ಏನು ಎಂದು ಪ್ರಶ್ನಿಸಲೂಬಹುದು!

ಭಾವನಾತ್ಮಕ ಸ್ಪರ್ಶ

ನೀವು ಪೆನ್ನಿನಿಂದ ಬರೆಯುವಾಗ ಪ್ರತಿಯೊಂದು ಅಕ್ಷರವೂ ನಿಮ್ಮ ಹೃದಯದ ಭಾವನೆಗಳನ್ನು ರೂಪಿಸುತ್ತದೆ. ನಿಮ್ಮ ವ್ಯಕ್ತಿತ್ವವು ಆ ಅಕ್ಷರಗಳಲ್ಲಿ ಅಡಗಿರುತ್ತದೆ. ಆದರೆ ಟೈಪಿಂಗ್ ನಲ್ಲಿ ಆ ವೈಯಕ್ತಿಕ ಸ್ಪರ್ಶ ಎಲ್ಲಿದೆ? ಎಲ್ಲವೂ ಒಂದೇ ಫಾಂಟಿನಲ್ಲಿ ಅಡಕ ವಾಗಿರುತ್ತದೆ. ಅಲ್ಲಿ ನಿಮ್ಮ ಕೈ ಬರಹದ ವಿಶಿಷ್ಟ ಶೈಲಿ, ಆ ಲಯ, ಆ ಬಿಸಿ ಕಳೆದುಹೋಗುತ್ತದೆ. ಆ ಭಾವನಾತ್ಮಕತೆ, ಆ ಆತ್ಮ ಹೇಗೋ ಕಳೆದು ಹೋಗುತ್ತದೆ.