ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hosmane Muttu Column: ಹಸಿರು ರೆಕ್ಕೆಗಳ ಮೌನ ಕವಿತೆ !

ಇತ್ತೀಚೆಗೆ ನಮ್ಮ ತೋಟದ ತೆಂಗಿನ ಮರದ ಪೊಟರೆಯನ್ನು ಮನೆಯಾಗಿಸಿಕೊಂಡಿದ್ದ ಹಸಿರು ಗಿಳಿಗಳ ಜೋಡಿಯೊಂದು ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಯಿತು. ಆ ಕ್ಷಣದ ದೃಶ್ಯ ಪುಟ್ಟ ಪರದೆ ಯಲ್ಲಿ ಬಂಧಿಯಾದರೂ, ಮನಸ್ಸಿನಲ್ಲಿ ಅಚ್ಚಳಿಯದ ಚಿತ್ರವಾಗಿ ಉಳಿಯಿತು. ಪ್ರಕೃತಿಯ ಸರಳತೆ, ಸಹಜತೆ ಮತ್ತು ನಿಷ್ಕಲ್ಮಶ ಸೌಂದರ್ಯವನ್ನು ಆ ಜೋಡಿ ಅನಾವರಣಗೊಳಿಸಿದಂತಿತ್ತು.

ಹೊಸ್ಮನೆ ಮುತ್ತು

ಪೃಕೃತಿಯ ಒಡಲಿನಲ್ಲಿ ಅಡಗಿರುವ ಪುಟ್ಟ ಪುಟ್ಟ ದೃಶ್ಯಗಳು ಬದುಕಿನ ಸೊಬಗನ್ನು ಇಮ್ಮಡಿಗೊ ಳಿಸುತ್ತವೆ. ಅವು ಕೆಲವೇ ಕ್ಷಣಗಳಲ್ಲಾದರೂ, ಮನಸ್ಸಿನೊಳಗೆ ಬಹುಕಾಲ ಉಳಿದು ಯಾವುದೋ ಮರೆತುಹೋದ ಭಾವ ವನ್ನು ಎಚ್ಚರಿಸುತ್ತವೆ. ನಮ್ಮ ಸುತ್ತಲಿನ ಪರಿಸರ ಇಂತಹ ಅಚ್ಚರಿಗಳನ್ನು ಪ್ರತಿದಿನವೂ ತೆರೆದಿಡುತ್ತಿರುತ್ತದೆ; ಆದರೆ ಅದನ್ನು ಗಮನಿಸುವ ಕಣ್ಣು, ಅನುಭವಿಸುವ ಮನಸ್ಸು ನಮ್ಮೊಳಗಿ ರಬೇಕಷ್ಟೇ.

ಇತ್ತೀಚೆಗೆ ನಮ್ಮ ತೋಟದ ತೆಂಗಿನ ಮರದ ಪೊಟರೆಯನ್ನು ಮನೆಯಾಗಿಸಿಕೊಂಡಿದ್ದ ಹಸಿರು ಗಿಳಿಗಳ ಜೋಡಿಯೊಂದು ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಯಿತು. ಆ ಕ್ಷಣದ ದೃಶ್ಯ ಪುಟ್ಟ ಪರದೆಯಲ್ಲಿ ಬಂಽಯಾದರೂ, ಮನಸ್ಸಿನಲ್ಲಿ ಅಚ್ಚಳಿಯದ ಚಿತ್ರವಾಗಿ ಉಳಿಯಿತು. ಪ್ರಕೃತಿಯ ಸರಳತೆ, ಸಹಜತೆ ಮತ್ತು ನಿಷ್ಕಲ್ಮಶ ಸೌಂದರ್ಯವನ್ನು ಆ ಜೋಡಿ ಅನಾವರಣ ಗೊಳಿಸಿದಂತಿತ್ತು.

ಅವು ಕೇವಲ ಎರಡು ಹಕ್ಕಿಗಳಲ್ಲ; ಬದುಕನ್ನು ಪರಸ್ಪರ ಹಂಚಿ ಕೊಂಡ ಪುಟ್ಟ ಚೇತನಗಳು. ಜೊತೆಯಾಗಿ ಆಹಾರ ಅರಸುವುದು, ತಮ್ಮ ನೆಲೆಯನ್ನು ಕಾಯ್ದುಕೊಳ್ಳುವುದು ಮತ್ತು ಪರಸ್ಪರ ಕಾಳಜಿ ತೋರುವುದನ್ನು ನೋಡಿದಾಗ, ಮಾತಿಲ್ಲದಿದ್ದರೂ ಅವುಗಳ ನಡುವೆ ಎಂಥ ಆಳವಾದ ಸಂವಹನವಿದೆ ಎನಿಸಿತು!

ಇದನ್ನೂ ಓದಿ: Srikanth Sajjan Column: ಅಕ್ಷರ, ಅನ್ನ, ಜಲದಾಸೋಹದ ಸಂತನಿಗೆ ದಸರಾ ವೇದಿಕೆ

ಯಾವುದೇ ಒಪ್ಪಂದಗಳಿಲ್ಲದಿದ್ದರೂ, ಪರಸ್ಪರ ಅರ್ಥೈಸಿಕೊಂಡು ಸಾಗುವ ಆ ಒಡನಾಟದಲ್ಲಿ ಅದ್ಭುತ ಸಾಮರಸ್ಯವಿತ್ತು. ಮನುಷ್ಯನಿಗೆ ದೊಡ್ಡ ಮನೆ, ಭದ್ರತೆ ಹಾಗೂ ನೂರೆಂಟು ಸೌಲಭ್ಯಗಳು ಬೇಕು. ಆದರೆ ಈ ಹಕ್ಕಿಗಳು ಪುಟ್ಟ ಪೊಟರೆಯ ತಮ್ಮ ಸುಂದರ ಪ್ರಪಂಚವನ್ನು ಕಟ್ಟಿಕೊಂಡಿವೆ. ಪ್ರಕೃತಿ ನೀಡಿದ್ದರ ಸಂತೃಪ್ತಿಯಿಂದ ಬಾಳುವ ಅವುಗಳ ಸರಳತೆ, ನಮ್ಮ ಅತಿಯಾದ ಆಸೆಗಳ ನಡುವೆ ಕಳೆದುಹೋಗಿರುವ ಸಾಕು’ ಎಂಬ ಭಾವವನ್ನು ನೆನಪಿಸಿತು.

ಮನುಷ್ಯ ತನ್ನ ಬದುಕನ್ನು ಸುವ್ಯವಸ್ಥಿ ತಗೊಳಿಸಲು ಎಷ್ಟೋ ನಿಯಮಗಳನ್ನು ರೂಪಿಸಿಕೊಂಡಿ ದ್ದಾನೆ. ಆದರೆ ಈ ಪುಟ್ಟ ಹಕ್ಕಿಗಳು ಯಾವುದೇ ಕೃತಕತೆಯಿಲ್ಲದೆ, ಪ್ರಕೃತಿಯ ಲಯಕ್ಕೆ ತಕ್ಕಂತೆ ಸಹಜವಾಗಿ ಬದುಕುತ್ತಿವೆ. ಅವುಗಳಿಗೆ ನಾಳೆಯ ಆತಂಕವಿಲ್ಲ, ನಿನ್ನೆಗಿನ ಪಶ್ಚಾತ್ತಾಪವೂ ಇಲ್ಲ; ಇರುವ ಕ್ಷಣವನ್ನು ಅದರ ಪೂರ್ಣತೆಯಲ್ಲಿ ಬದುಕುವ ಸಹಜತೆ ಮಾತ್ರ ಇದೆ. ಈ ಹಸಿರು ಗಿಳಿಗಳ ಕಲರವ, ರೆಕ್ಕೆಗಳ ಬಡಿತ ಮತ್ತು ಮರದ ಕೊಂಬೆಗಳಲ್ಲಿ ಅವುಗಳ ಓಡಾಟ ಇವೆಲ್ಲವೂ ನಮ್ಮ ತೋಟದ ಜೀವಂತಿಕೆಯ ಭಾಗವಾಗಿಬಿಟ್ಟಿವೆ. ಅವುಗಳ ಉಪಸ್ಥಿತಿಯಿಂದಾಗಿ ತೋಟ ಕೇವಲ ಮರ-ಗಿಡಗಳ ಸಮೂಹವಾಗಿ ಉಳಿಯದೆ, ಉಸಿರಾಡುವ, ಹಾಡುವ ಒಂದು ಪುಟ್ಟ ಜೀವಲೋಕವಾಗಿ ಬದಲಾಗಿದೆ.

ಈ ತೋಟದಲ್ಲಿ ನಾವೊಬ್ಬರೇ ಬದುಕುತ್ತಿಲ್ಲ; ನಮ್ಮೊಂದಿಗೆ ಇನ್ನೂ ಅನೇಕ ಮುಗ್ಧ ಜೀವಗಳು ತಮ್ಮದೇ ಆದ ಬದುಕು-ಭಾವನೆಗಳೊಂದಿಗೆ ನೆಲೆಸಿವೆ ಎಂಬ ಅರಿವು ಮೂಡುತ್ತದೆ. ಬಹುಶಃ ಪ್ರಕೃತಿಯ ಸೌಂದರ್ಯವೆಂದರೆ ಇದೇ ಇರಬೇಕು ಅದು ಎಂದಿಗೂ ಆಡಂಬರದಿಂದ ತನ್ನನ್ನು ಪರಿಚಯಿಸಿಕೊ ಳ್ಳುವುದಿಲ್ಲ. ಹಕ್ಕಿಯ ಚಿಲಿಪಿಲಿಯಲ್ಲಿ, ಎಲೆಯ ಮೇಲಿನ ಮಂಜಿನ ಹನಿಯಲ್ಲಿ, ಮರದ ಪುಟ್ಟ ಗೂಡಿನಲ್ಲಿ.