Dr Pathanjali Acharya Column: ಬೆನ್ನುಮೂಳೆಯ ಸ್ವಾಸ್ಥ್ಯಕ್ಕೆ ಭುಜಂಗಾಸನ
ಕಾಲುಗಳನ್ನು ನೀಳವಾಗಿ ಚಾಚಿ ನೆಲದ ಮೇಲೆ ಬೋರಲಾಗಿ ಮಲಗಿ ಕೊಳ್ಳಿ. ಅಂಗೈಗಳನ್ನು ನೆಲದ ಮೇಲೆ ಊರಿಕೊಂಡಿದ್ದು ಉಸಿರನ್ನು ಎಳೆದುಕೊಳ್ಳಿ. ಕೈಗಳ ಆಧಾರದ ಮೇಲೆ ತಲೆ ಯನ್ನು ಸಾವಕಾಶವಾಗಿ ಮೇಲಕ್ಕೆತ್ತಿ. ತರುವಾ ಯ ಪುನಃ ದೀರ್ಘ ವಾಗಿ ಉಸಿರನ್ನು ಎಳೆದು ಕೊಂಡು ಹೊಕ್ಕಳಿನ ಭಾಗದವರೆಗೆ ದೇಹ ವನ್ನು ಮೇಲಕ್ಕೆತ್ತಿ ಆಕಾಶವನ್ನು ನೋಡುವ ಭಂಗಿಗೆ ತಲುಪಿ. ಈಗ ಎರಡು ಬಾರಿ ಶ್ವಾಸೋ ಚ್ಛ್ವಾಸ ಮಾಡ ಬೇಕು


ಡಾ.ಪತಂಜಲಿ ಆಚಾರ್ಯ
ಭುಜಂಗ ಎಂದರೆ ಹೆಡೆ ಎತ್ತಿದ ಸರ್ಪ. ಈ ಆಸನವನ್ನು ಅಭ್ಯಾಸ ಮಾಡುವಾಗ, ದೇಹದ ಭಂಗಿಯು ಹೆಡೆ ಎತ್ತಿದ ಸರ್ಪದ ರೀತಿಯಲ್ಲಿ ಇರುವುದರಿಂದ ಇದನ್ನು ‘ಭುಜಂಗಾಸನ’ ಎಂದು ಕರೆಯುತ್ತಾರೆ. ಅಭ್ಯಾಸಕ್ರಮ: ಕಾಲುಗಳನ್ನು ನೀಳವಾಗಿ ಚಾಚಿ ನೆಲದ ಮೇಲೆ ಬೋರಲಾಗಿ ಮಲಗಿ ಕೊಳ್ಳಿ. ಅಂಗೈಗಳನ್ನು ನೆಲದ ಮೇಲೆ ಊರಿಕೊಂಡಿದ್ದು ಉಸಿರನ್ನು ಎಳೆದುಕೊಳ್ಳಿ. ಕೈಗಳ ಆಧಾರದ ಮೇಲೆ ತಲೆಯನ್ನು ಸಾವಕಾಶವಾಗಿ ಮೇಲಕ್ಕೆತ್ತಿ. ತರುವಾ ಯ ಪುನಃ ದೀರ್ಘ ವಾಗಿ ಉಸಿರನ್ನು ಎಳೆದುಕೊಂಡು ಹೊಕ್ಕಳಿನ ಭಾಗದವರೆಗೆ ದೇಹ ವನ್ನು ಮೇಲಕ್ಕೆತ್ತಿ ಆಕಾಶವನ್ನು ನೋಡುವ ಭಂಗಿಗೆ ತಲುಪಿ. ಈಗ ಎರಡು ಬಾರಿ ಶ್ವಾಸೋ ಚ್ಛ್ವಾಸ ಮಾಡ ಬೇಕು. ಹತ್ತು ಸೆಕೆಂಡುಗಳ ನಂತರ ಉಚ್ಛ್ವಾಸದೊಂದಿಗೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ. ಈ ಆಸನವನ್ನು ತರುವಾಯದಲ್ಲಿ 2-3 ನಿಮಿಷಗಳವರೆಗೆ ವಿಸ್ತರಿಸಬಹುದು.
ಪ್ರಯೋಜನಗಳು: ಈ ಆಸನದ ಆಚರಣೆಯಿಂದಾಗಿ ಬೆನ್ನುಮೂಳೆಯ ಮತ್ತು ಸ್ನಾಯು ಗಳ ದೋಷವು ನಿವಾರಣೆಯಾಗುವುದು. ಬೆನ್ನೆಲುಬಿಗೆ ಸ್ಥಿತಿಸ್ಥಾಪಕತ್ವ ಒದಗಿ ಚಿರ ಯೌವನವು ಪ್ರಾಪ್ತಿ ಯಾಗುವುದು. ಬೆನ್ನುನೋವು ನಿವಾರಣೆಯಾಗಿ ಬೊಜ್ಜು ಕರಗುವುದು. ಮಲಬದ್ಧತೆಯ ಸಮಸ್ಯೆ ಇನ್ನಿಲ್ಲವಾಗುವುದು. ಜಠರ, ಎದೆ, ಸೊಂಟ ಮತ್ತು ತೊಡೆಗಳ ಬಲವರ್ಧನೆ ಯಾಗುವುದು. ಮಹಿಳೆಯರ ಮಾಸಿಕ ಋತುಧರ್ಮದ ತೊಂದರೆಗಳು ಮತ್ತು ಗರ್ಭಾಶಯದ ದೋಷಗಳು ನಿವಾರಣೆಯಾಗುವುವು.